ಅರಮನೆಯಲ್ಲಿ ಕಳೆಗಟ್ಟಿದ ತ್ರಿಷಿಕಾ ಸೀಮಂತ ಕಾರ್ಯ
ಮೈಸೂರು, ಅಕ್ಟೋಬರ್ 01 : 54 ವರ್ಷಗಳ ಬಳಿಕ ಮೈಸೂರು ಅರಮನೆಯಲ್ಲಿ ಸೀಮಂತ ಶಾಸ್ತ್ರದ ಸಡಗರ ನಡೆಯುತ್ತಿದೆ. ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಧರ್ಮಪತ್ನಿ ತ್ರಿಷಿಕಾ ದೇವಿ ಒಡೆಯರ್ ಗೆ ಸೀಮಂತ ಶಾಸ್ತ್ರ ನಡೆಯುತ್ತಿದೆ.
ತ್ರಿಷಿಕಾ ದೇವಿ ಏಳು ತಿಂಗಳ ಗರ್ಭಿಣಿ ಯಾಗಿದ್ದು, ವಿಜಯದಶಮಿಯ ಮರುದಿನವಾದ ಭಾನುವಾರ ಅರಮನೆಯಲ್ಲಿ ಸೀಮಂತ ಶಾಸ್ತ್ರ ನಡೆಯುತ್ತಿದೆ. ರಾಜವಂಶಸ್ಥರು, ಸಂಬಂಧಿಕರು ಪ್ರಮೋದಾ ದೇವಿ ಒಡೆಯರ್, ತ್ರಿಷಿಕಾ ಕುಟುಂಬದವರು ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ.

ಅರಮನೆಯ ಧಾರ್ಮಿಕ ಸಂಪ್ರದಾಯದಂತೆ ಸೀಮಂತ ಕಾರ್ಯ ನಡೆಯುತ್ತಿದೆ. ತ್ರಿಷಿಕಾ ಅವರ ತಂದೆ ಹರ್ಷವರ್ಧನ್ ಸಿಂಗ್, ತಾಯಿ ಮಹೇಶ್ವರಿ ಸಿಂಗ್ ಸೇರಿದಂತೆ ಸಂಬಂಧಿಕರು ಮೈಸೂರು ಅರಮನೆಗೆ ಆಗಮಿಸಿದ್ದಾರೆ.
In Pics:ಗರ್ಭಿಣಿ ತ್ರಿಷಿಕಾಗೆ ಉಡುಗೊರೆಯಾಗಿ ಬಂತು ಚಿನ್ನದ ವೀಣೆ
ಸೀಮಂತ ಶಾಸ್ತ್ರ ಕಾರ್ಯಕ್ರಮಕ್ಕೆ ಸುಮಾರು 2 ಸಾವಿರ ಜನರು ಆಗಮಿಸಿರುವ ನಿರೀಕ್ಷೆ ಇದೆ. ಅರಮನೆಯಲ್ಲಿ ಭೂರಿ ಭೋಜನ ವ್ಯವಸ್ಥೆ ಮಾಡಲಾಗಿದೆ. 40 ಬಗೆಯ ಖಾದ್ಯಗಳನ್ನು ತಯಾರು ಮಾಡಲಾಗಿದೆ.












Click it and Unblock the Notifications