Get Updates
Get notified of breaking news, exclusive insights, and must-see stories!

ಮೈಸೂರು ಮೇಯರ್ ಚುನಾವಣೆ: ಸ್ವಪಕ್ಷದಲ್ಲೇ ಶುರುವಾಯ್ತು ಲಾಬಿ

ಮೈಸೂರು, ಜನವರಿ 10 : ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಸ್ಥಾನದ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಪಾಲಿಕೆಯಲ್ಲಿನ ಕಾಂಗ್ರೆಸ್ ಸದಸ್ಯರಲ್ಲಿ ಸಂಚಲನ ಉಂಟಾಗಿದೆ. ಉಪ ಮಹಾಪೌರ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದು, ಜಾ.ದಳದ ಇಂದಿರಾ ಮಹೇಶ್ (ವಾರ್ಡ್ ನಂ.61) ಅವರು ಮಾತ್ರವೇ ಅರ್ಹ ಅಭ್ಯರ್ಥಿಯಾಗಿದ್ದಾರೆ. ಅವರ ಆಯ್ಕೆ ಖಚಿತವಾಗಿದೆ.

ಆದರೆ, ಮಹಾಪೌರರ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಮಹಾಪೌರ ಸ್ಥಾನಕ್ಕೆ ಜಾ.ದಳ, ಬಿಜೆಪಿಯಲ್ಲಿ ಅಭ್ಯರ್ಥಿಗಳೇ ಇಲ್ಲ. ಆದರೆ, ಕಾಂಗ್ರೆಸ್‍ ನಲ್ಲಿ ಇಬ್ಬರಿಗೆ ಪ್ರಥಮ ಪ್ರಜೆಯಾಗುವ ಅರ್ಹತೆ ಇರುವುದರಿಂದ ಪೈಪೋಟಿ ಶುರುವಾಗಿದೆ.

ಪೈಪೋಟಿ ಯಾರ ನಡುವೆ ?
ಕಾಂಗ್ರೆಸ್ ಸದಸ್ಯರಾದ ಕಮಲಾ ಉದಯ್ (ವಾರ್ಡ್ ನಂ.50) ಹಾಗೂ ಭಾಗ್ಯವತಿ (ವಾರ್ಡ್ ನಂ.23) ನಡುವೆ ಮಹಾಪೌರ ಸ್ಥಾನಕ್ಕೆ ತೀವ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಸದಸ್ಯರು ನಗರಪಾಲಿಕೆ ಸದಸ್ಯರನ್ನು, ಶಾಸಕರನ್ನು ಹಾಗೂ ಮುಖಂಡರನ್ನು ಭೇಟಿ ಮಾಡಲು ಆರಂಭಿಸಿ ಬೆಂಬಲ ಕೋರುತ್ತಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

Mysuru mayor elections: fight starts within congress party

ಈವರೆಗೆ ಗಾಂಧಿ ನಗರ ವಾರ್ಡ್ ಗೆ ಮಹಾಪೌರರ ಸ್ಥಾನ ದೊರೆತೇ ಇಲ್ಲ. ಅವಕಾಶ ದೊರೆತರೆ ಈ ಭಾಗದ ಜತೆಗೆ ಇಡೀ ನಗರದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಕಮಲಾ ಉದಯ್ ಅವರು ಹೇಳುತ್ತಿದ್ದಾರೆ. ಅವರ ಪತಿ ಉದಯ್, ಹೇಗಾದರೂ ಮಾಡಿ ಮಹಾಪೌರ ಸ್ಥಾನವನ್ನು ತಮ್ಮ ಪತ್ನಿಗೇ ದೊರಕಿಸಿಕೊಡಬೇಕೆಂದು ಲಾಬಿ ಆರಂಭಿಸಿದ್ದಾರೆ. ಈ ಮಧ್ಯೆ ಭಾಗ್ಯವತಿ ಅವರೂ ತಮ್ಮ ಪ್ರಯತ್ನ ಆರಂಭಿಸಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಅವರು ಪಡುವಾರಹಳ್ಳಿ ನಿವಾಸಿ. ಬೋವಿ ಸಮುದಾಯಕ್ಕೆ ಸೇರಿದ ಅವರು, ಶಾಸಕ ವಾಸು ಅವರ ಬೆಂಬಲಿಗರು. ಕಳೆದ ಅವಧಿಯ ಕೊನೆ ವರ್ಷ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ಕಲ್ಪಿಸಿದ್ದರಿಂದ ದಲಿತ ಮಹಿಳೆಗೆ ಪ್ರಥಮ ಪ್ರಜೆಯಾಗುವ ಅವಕಾಶ ಸಿಕ್ಕಿತ್ತು. ಈಗ ಬೋವಿ ಮಹಿಳೆಗೆ ಅವಕಾಶ ನೀಡಬೇಕು. ಆ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಸಮುದಾಯದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.

ಮಹಾಪೌರ, ಉಪ ಮಹಾಪೌರರ ಸ್ಥಾನಗಳಿಗೆ ಜ.24ರ ಬುಧವಾರ ಚುನಾವಣೆ ನಡೆಯಲಿದೆ. ಅಧಿಸೂಚನೆ ಹೊರಡಿಸಲಾದ ಜ.8ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಜ.24ರ ಬೆಳಿಗ್ಗೆ 9.30ರವರೆಗೂ ಕಾಲಾವಕಾಶ ನೀಡಲಾಗಿದೆ. ಅಪರ ಜಿಲ್ಲಾಧಿಕಾರಿ ಟಿ.ಯೋಗೀಶ್ ಸಹಾಯಕ ಚುನಾವಣಾಧಿಕಾರಿಯಾಗಿದ್ದು, ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಕಚೇರಿಯಲ್ಲಿ ಪ್ರತಿದಿನ ಕಚೇರಿ ವೇಳೆಯಲ್ಲಿ ನಾಮಪತ್ರ ಸ್ವೀಕರಿಸುವರು ಎಂದು ಪಾಲಿಕೆ ಆಯುಕ್ತ ಜಿ.ಜಗದೀಶ್ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+