ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದೇ ಮೈಸೂರು ಪಾಲಿಕೆ ಚುನಾವಣೆ; ದೋಸ್ತಿ ಇನ್ನೂ ಗುಟ್ಟು!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 24: ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಮೈತ್ರಿ ಕಸರತ್ತು ಭಾರೀ ಕುತೂಹಲ ಮೂಡಿಸಿದೆ. ಪಾಲಿಕೆ ಅಧಿಕಾರ ಹಿಡಿಯಲು ಮೂರು ಪಕ್ಷಗಳಲ್ಲಿ ತಡರಾತ್ರಿವರೆಗೂ ರಾಜಕೀಯ ಚಟುವಟಿಕೆ ನಡೆದರೂ, ದೋಸ್ತಿ ಕುರಿತು ದಳಪತಿಗಳು ಯಾವುದೇ ಸ್ಪಷ್ಟ ನಿಲುವು ಬಿಟ್ಟುಕೊಟ್ಟಿಲ್ಲ.

ಮಹಾನಗರ ಪಾಲಿಕೆ ಚುನಾವಣೆ ಮೂರು ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪಾಲಿಕೆ ಇತಿಹಾಸದಲ್ಲಿ ಒಮ್ಮೆಯೂ ಅಧಿಕಾರ ಹಿಡಿಯದ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದೆ. ಆದರೆ, ಇದಕ್ಕೆ ಜೆಡಿಎಸ್ ಸಹಕಾರ ಬೇಕು.

ಮೈಸೂರು ಮೇಯರ್ ಚುನಾವಣೆ: ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್ಮೈಸೂರು ಮೇಯರ್ ಚುನಾವಣೆ: ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿರುವ ಬಿಜೆಪಿ ನಾಯಕರು ಮೇಯರ್ ಸ್ಥಾನ ತಮಗೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಪ್ರಮುಖವಾಗಿ ಇಬ್ಬರು ಸ್ಥಳೀಯ ಶಾಸಕರು ಹಾಗೂ ಸಂಸದರು, ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಇಲ್ಲವಾದಲ್ಲಿ ವಿರೋಧ ಪಕ್ಷವಾಗಿ ಮುಂದುವರಿಯುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಇದೆ.

ಮೈಸೂರು ಮೇಯರ್ ಚುನಾವಣೆ: ದಳಪತಿಗಳೇ ಕಿಂಗ್ ಮೇಕರ್! ಮೈಸೂರು ಮೇಯರ್ ಚುನಾವಣೆ: ದಳಪತಿಗಳೇ ಕಿಂಗ್ ಮೇಕರ್!

 Mysuru Mayor Election JDS Yet To Announce Final Decision

ಮತ್ತೊಂದೆಡೆ, ಹಿಂದಿನ ಒಪ್ಪಂದದಂತೆ ಜೆಡಿಎಸ್ ತಮ್ಮೊಂದಿಗೆ ಮೈತ್ರಿ ಮುಂದುವರಿಸಲಿದೆ ಎಂಬ ವಿಶ್ವಾಸದಲ್ಲಿರುವ ಕಾಂಗ್ರೆಸ್ ಪಕ್ಷ ಮೇಯರ್ ಸ್ಥಾನ ಬಿಟ್ಟುಕೊಡಲು ಮುಂದಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಯಾರೊಂದಿಗೆ ದೋಸ್ತಿ ಮಾಡಿಕೊಳ್ಳಬೇಕೆಂಬ ಗೊಂದಲಕ್ಕೆ ಸಿಲುಕಿರುವ ಜೆಡಿಎಸ್ ಇನ್ನೂ ತೀರ್ಮಾನ ಪ್ರಕಟಿಸಿಲ್ಲ.

ಮೈಸೂರು ಮೇಯರ್ ಚುನಾವಣೆ; ಕಾಂಗ್ರೆಸ್, ಜೆಡಿಎಸ್ ಮೈತ್ರಿ? ಮೈಸೂರು ಮೇಯರ್ ಚುನಾವಣೆ; ಕಾಂಗ್ರೆಸ್, ಜೆಡಿಎಸ್ ಮೈತ್ರಿ?

ರೆಸಾರ್ಟ್ ರಾಜಕೀಯ; ಮೈಸೂರು ಪಾಲಿಕೆ ಅಧಿಕಾರಕ್ಕಾಗಿ ಟೊಂಕ ಕಟ್ಟಿ ನಿಂತಿರುವ ಮೂರು ಪಕ್ಷಗಳಲ್ಲಿ ಈಗಾಗಲೇ ರೆಸಾರ್ಟ್ ರಾಜಕಾರಣ ಶುರುವಾಗಿದೆ. ಮಂಗಳವಾರ ಸಂಜೆಯಿಂದಲೇ ಮೂರು ಪಕ್ಷಗಳ ಪಾಲಿಕೆ ಸದಸ್ಯರು ನಗರದ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಇಂದು ಬೆಳಗ್ಗೆ 11ಗಂಟೆಗೆ ನಡೆಯಲಿರುವ ಮೇಯರ್ ಚುನಾವಣೆಗೆ ಮೂರು ಪಕ್ಷಗಳ ಪಾಲಿಕೆ ಸದಸ್ಯರನ್ನು ನೇರವಾಗಿ ರೆಸಾರ್ಟ್‌ನಿಂದ ಕರೆತರಲಾಗುತ್ತದೆ. ಮೈತ್ರಿ ಕುರಿತು ಜೆಡಿಎಸ್ ಇನ್ನೂ ಸ್ಪಷ್ಟ ನಿಲುವಿಗೆ ಬಂದಿಲ್ಲ. ಇದರಿಂದ ಮೈತ್ರಿ ವಿಚಾರದಲ್ಲಿ ಜೆಡಿಎಸ್ ನಡೆಯೇ ಅಂತಿಮವಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.

English summary
Former CM H. D. Kumaraswamy yet to announce his decision on alliance in Mysuru city corporation mayor and deputy mayor election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X