ಮೈಸೂರು ರಾಜವಂಶಸ್ಥ ಯದುವೀರ್ VS ಸಿಎಂ ಸಿದ್ದರಾಮಯ್ಯ ಆಪ್ತ ಎಂ. ಲಕ್ಷ್ಮಣ್!
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಕ್ಷೇತ್ರದಲ್ಲಿ ಗೆಲುವು ಗಿಟ್ಟಿಸಲು ದೊಡ್ಡ ಫೈಟ್ ಶುರುವಾಗಿದೆ. ಚುನಾವಣೆಯ ಅಸಲಿ ರಿಸಲ್ಟ್ ಏನು? ಯಾರಿಗೆ ಮುನ್ನಡೆ? ಯಾರಿಗೆ ಹಿನ್ನಡೆ? ಮೈಸೂರು ಲೋಕಸಭೆ ಅಖಾಡದಲ್ಲಿ ಇತಿಹಾಸ ಏನು ಹೇಳುತ್ತೆ? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಮೈಸೂರು & ಕೊಡಗು ಲೋಕಸಭಾ ಕ್ಷೇತ್ರ ಭಾರಿ ದೊಡ್ಡ ಇತಿಹಾಸ ಹೊಂದಿದೆ. 1952ರಲ್ಲಿ ಈ ಕ್ಷೇತ್ರಕ್ಕೆ ಮೊದಲ ಬಾರಿ ಚುನಾವಣೆ ನಡೆದಿತ್ತು. ಮೊದಲ ಬಾರಿಯ ಚುನಾವಣೆಯಲ್ಲಿ 'ಕಿಸಾನ್ ಮಝ್ದೂರ್ ಪ್ರಜಾ ಪಾರ್ಟಿ' ಗೆದ್ದು ಬೀಗಿತ್ತು. ಆ ಬಳಿಕ ಸತತವಾಗಿ ಕಾಂಗ್ರೆಸ್ ಪಕ್ಷ 1998ರ ತನಕ ಗೆದ್ದುಕೊಂಡು ಬಂದಿತ್ತು. ಆದ್ರೆ 1998 ರಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ್ ಶಂಕರ್ ಅವರು, ಗೆದ್ದು ಬೀಗಿದ್ದರು. ಅಲ್ಲಿಂದ ಮುಂದೆ ಈ ಕ್ಷೇತ್ರದಲ್ಲಿ ಏರಿಳಿತ ಉಂಟಾದವು.

ಒಗ್ಗಟ್ಟಿನಿಂದ ಪ್ರಚಾರ ಕಾರ್ಯ
ಸತತ 2 ಬಾರಿ ಮೈಸೂರು & ಕೊಡಗು ಲೋಕಸಭೆ ಕ್ಷೇತ್ರದಿಂದ ಜಯ ಕಂಡಿದ್ದ ಪ್ರತಾಪ್ ಸಿಂಹಗೆ ಈ ಬಾರಿಯ ಟಿಕೆಟ್ ಮಿಸ್ ಆಗಿತ್ತು. ಯದುವೀರ್ ಅವರಿಗೆ ಟಿಕೆಟ್ ನೀಡಲಾಗಿತ್ತು ಯದುವೀರ್ ಮೈಸೂರು ರಾಜವಂಶದ ಕುಡಿ ಹೀಗಾಗಿ ಇಡೀ ದೇಶದ ಗಮನ ಸೆಳೆದಿತ್ತು ಮೈಸೂರು & ಕೊಡಗು ಲೋಕಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿ & ಜೆಡಿಎಸ್ ವರಿಷ್ಠರ ಪಡೆಯೇ ಒಗ್ಗಟ್ಟಿನಿಂದ ಪ್ರಚಾರ ಕೂಡ ನಡೆಸಿತ್ತು. ಹಾಗಾದ್ರೆ ಮೈಸೂರು ಕ್ಷೇತ್ರದಲ್ಲಿ ಯಾವ ಪಕ್ಷ ಇದೀಗ ಮುನ್ನಡೆ ಸಾಧಿಸಿದೆ? ಹಾಗೇ, ಗೆಲ್ಲುವ ಕುದುರೆ ಯಾವ ಅಭ್ಯರ್ಥಿ? ಈ ಕುರಿತು ಪ್ರತಿಕ್ಷಣದ ಮಾಹಿತಿಗೆ ಮುಂದೆ ಓದಿ.
ಮೈಸೂರು ರಾಜವಂಶಸ್ಥ ಯದುವೀರ್ ಅವರು 70,855 ಮತ ಪಡೆದಿದ್ದರೆ, ಲಕ್ಷ್ಮಣ್ ಅವರಿಗೆ 58,783 ಮತಗಳು ಬಂದಿವೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ 12,072 ಮತಗಳ ಮುನ್ನಡೆ ಸಿಕ್ಕಂತಾಗಿದೆ.
1,03,854 ಮತಗಳ ಅಂತರದ ಗೆಲುವು
ಅಂತಿಮವಾಗಿ ಮೈಸೂರು & ಕೊಡಗು ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಗೆಲುವು ಸಾಧಿಸಿದ್ದಾರೆ . ಪ್ರತಿಸ್ಪರ್ಧಿ ಕಾಂಗ್ರೆಸ್ ರಾಜ್ಯ ವಕ್ತಾರ ಲಕ್ಷ್ಮಣ್ ವಿರುದ್ಧ ಬರೋಬ್ಬರಿ 1,03,854 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ ಯದುವೀರ್. ಈ ಮೂಲಕ ಯದುವೀರ್ ಅವರು ಮೊದಲ ಪ್ರಯತ್ನದಲ್ಲೇ ಭರ್ಜರಿ ಗೆಲುವು ದಾಖಲಿಸಿದ್ದು ಬಿಜೆಪಿ ಹೈಕಮಾಂಡ್ ಪ್ಲಾನ್ ಇಲ್ಲಿ ವರ್ಕೌಟ್ ಆಗಿದೆ.












Click it and Unblock the Notifications