ಲೋಕ ಚುನಾವಣೆ: ಮೈಸೂರು – ಕೊಡಗು ಕ್ಷೇತ್ರದಿಂದ 22 ಮಂದಿ ಕಣಕ್ಕೆ

ಮೈಸೂರು, ಮಾರ್ಚ್ 30 : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದವರ ಪೈಕಿ ಮೂವರು ಪಕ್ಷೇತರರು ಇಂದು ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದರು.

ನಾಮಪತ್ರ ವಾಪಸ್‌ ಪಡೆಯಲು ಶುಕ್ರವಾರ ಅಂತಿಮ ದಿನವಾಗಿತ್ತು. ಪಕ್ಷೇತರ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದ್ದ ಪಿ.ಎಸ್‌.ಯಡೂರಪ್ಪ, ಎಂ.ಶ್ರೀನಿವಾಸ್‌ ಮತ್ತು ಎಂ.ಖಲೀಲ್‌ ನಾಮಪತ್ರ ವಾಪಸ್‌ ಪಡೆದುಕೊಂಡರು.

ಚುನಾವಣೆಯಲ್ಲಿ ಸ್ಪರ್ಧಿಸಲು 30 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಐವರ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಅಂತಿಮವಾಗಿ 15 ಪಕ್ಷೇತರ ಅಭ್ಯರ್ಥಿಗಳು ಒಳಗೊಂಡಂತೆ 22 ಮಂದಿ ತಮ್ಮ ಅದೃಷ್ಟವನ್ನು ಪಣಕ್ಕೊಡ್ಡಿದ್ದಾರೆ. ಬಿಜೆಪಿಯಿಂದ ಪ್ರತಾಪಸಿಂಹ ಮತ್ತು ಕಾಂಗ್ರೆಸ್‌-ಜೆಡಿಎಸ್‌ನಿಂದ ಸಿ.ಎಚ್‌.ವಿಜಯಶಂಕರ್‌ ಅವರು ಕಣದಲ್ಲಿದ್ದು, ಈ ಬಾರಿ ಇವರಿಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ.

mysuru-kodagu constituency pratap simha and vijayashankar in the race

ಡಾ.ಬಿ.ಚಂದ್ರು (ಬಿಎಸ್‌ಪಿ), ಅಯೂಬ್‌ ಖಾನ್‌ (ಇಂಡಿಯನ್‌ ನ್ಯೂ ಕಾಂಗ್ರೆಸ್‌ ಪಾರ್ಟಿ), ಪಿ.ಎಸ್‌.ಸಂಧ್ಯಾ (ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ), ವಿ.ಆಶಾರಾಣಿ (ಉತ್ತಮ ಪ್ರಜಾಕೀಯ ಪಾರ್ಟಿ), ಪಿ.ಕೆ.ಬಿದ್ದಪ್ಪ (ಕರ್ನಾಟಕ ಪ್ರಜಾ ಪಾ‌ರ್ಟಿ) ಅವರು ವಿವಿಧ ಪಕ್ಷಗಳ ಚಿಹ್ನೆಯಡಿ ಸ್ಪರ್ಧಿಸಲಿದ್ದಾರೆ.

ಶ್ರೀನಿವಾಸಯ್ಯ, ಬಿ.ಡಿ.ನಿಂಗಪ್ಪ, ಎಂ.ಜೆ.ಸುರೇಶ್‌ ಗೌಡ, ಎಂ.ಲಿಂಗರಾಜು, ಎನ್‌.ಕಾವೇರಿಯಮ್ಮ, ಕೆ.ಎಸ್‌.ಸೋಮಸುಂದರ್, ವೆಂಕಟೇಶ್‌ ಡಿ.ನಾಯಕ, ಜಿ.ಲೋಕೇಶ್‌ ಕುಮಾರ್, ಆರ್‌.ಮಹೇಶ್‌, ಎನ್‌.ನಾಗೇಶ್, ರಾಜು, ರವಿ, ಸೈಯದ್‌ ಆಲಿ ಶಾನ್, ಎಂ.ಆನಂದಕುಮಾರ್ ಹಾಗೂ ಜಿ.ಎಂ.ಮಹದೇವ್ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

10.79 ಲಕ್ಷ ನಗದು ವಶ: ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣದಡಿ ಮೈಸೂರು ಜಿಲ್ಲೆಯಲ್ಲಿ ಇದುವರೆಗೆ 10.79 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಮಾರ್ಚ್ 10ರಿಂದ ಇಲ್ಲಿಯವರೆಗೆ 1.09 ಕೋಟಿ ಮೌಲ್ಯದ 20,903 ಲೀಟರ್‌ ಮದ್ಯವನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಮಾಹಿತಿ ನೀಡಿದ್ದಾರೆ.

30.64 ಲಕ್ಷ ಮೌಲ್ಯದ 60 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಐದು ಕಾರುಗಳು, 53 ದ್ವಿಚಕ್ರ ವಾಹನಗಳು ಮತ್ತು ಎರಡು ಆಟೊ ರಿಕ್ಷಾ ಇದರಲ್ಲಿ ಒಳಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+