ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆ ಹಾಗೂ ಸಹೃದಯಿ ವೀಳೆಯದೆಲೆ!

ಮೈಸೂರು, ಸೆಪ್ಟೆಂಬರ್ 15: ಮೈಸೂರು ನಗರವೇ ಹಾಗೆ. ಇಲ್ಲಿನ ಪ್ರತಿಯೊಂದು ವಸ್ತು, ಸ್ಥಳವೂ ಒಂದಿಲ್ಲೊಂದು ಐತಿಹ್ಯವನ್ನು ಹೊಂದಿದೆ. ಅದು ಕೇವಲ ವಸ್ತು, ತಿನ್ನುವ ಪರ್ದಾಥಕ್ಕೆ ಸೀಮಿತವಾಗಿರದೇ, ಅನ್ನದಾತನ ಬೆಳೆಗಳಿಗೂ ರಾಜ ಗೌರವ ತಂದುಕೊಟ್ಟಿದೆ. ಅಂತಹ ರಾಜಬೆಳೆಗಳ ಬಗ್ಗೆ ಇಲ್ಲಿದೆ ಸಣ್ಣ ಪರಿಚಯ

ಮೈಸೂರು ಮಲ್ಲಿಗೆ
ಮಲ್ಲಿಗೆ ಎಂಬ ಹೂವಿನ ಸೌಂದರ್ಯ ಹಾಗೂ ಸುವಾಸನೆಗೆ ಮನಸೋಲದೆ ಇರುವವರು ಯಾರು? ಪ್ರೇಮಕವಿ ನರಸಿಂಹಸ್ವಾಮಿ ಅವರ 'ಮೈಸೂರು ಮಲ್ಲಿಗೆ' ಕವನ ಸಂಕಲನ ಮನೆ ಮಾತಾಗಿತ್ತು. ಅದು ಒಂದು ಪ್ರದೇಶದಲ್ಲಿ ಬೆಳೆಯುವ ಹೂವೊಂದಕ್ಕೆ ಸಿಕ್ಕ ಪಾರಂಪರಿಕ ಗೌರವವೇ ಸರಿ.

ಮೈಸೂರು ಮಲ್ಲಿಗೆಗೆ ದೊಡ್ಡ ಪರಂಪರೆ ಇತಿಹಾಸ ಇರುವಂತೆ, ಸೊಬಗು ಹಾಗೂ ಸುವಾಸನೆಯಿಂದಲೇ ಅದು ಪ್ರಸಿದ್ಧಿ ಪಡೆದಿದೆ. ಮೈಸೂರು ಶ್ರೀರಂಗಪಟ್ಟಣ ತಾಲೂಕಿನ ಕೆಲ ಭಾಗದಲ್ಲಿ ಬೆಳೆಯುವ ಈ ಹೂವಿಗೆ ವಿದೇಶದಲ್ಲೂ ಅತಿ ಹೆಚ್ಚು ಬೇಡಿಕೆ ಇದೆ. ಭಾರತದ ಭೌಗೋಳಿಕ ಸಂಕೇತದಲ್ಲಿ ಮಲ್ಲಿಗೆ ಹೂವು ತನ್ನ ಕಂಪು ಸೂಸಿದೆ.

ರಾಜಾಶ್ರಯದಲ್ಲಿ ಮೈಸೂರು ಮಲ್ಲಿಗೆ

ರಾಜಾಶ್ರಯದಲ್ಲಿ ಮೈಸೂರು ಮಲ್ಲಿಗೆ

ರಾಜಾಶ್ರಯದಲ್ಲಿ ಹೆಚ್ಚು ಪ್ರೋತ್ಸಾಹ ಸಿಕ್ಕಿದ್ದರಿಂದ ಒಂದು ಕಾಲಕ್ಕೆ ಮಲ್ಲಿಗೆಗೆ ಅತಿ ಹೆಚ್ಚು ವೈಭವವಿತ್ತು. ಆಗಿನ ಕಾಲದಲ್ಲಿಯೇ ಅರಮನೆಯಲ್ಲಿ ಮಲ್ಲಿಗೆ ಹೂವನ್ನು ಖರೀದಿಸಿ ಬೆಳೆಗಾರರನ್ನು ಪ್ರೋತ್ಸಾಹಿಸುತ್ತಿದ್ದರು. ಕಾಲಂತರದಲ್ಲಿ ಈ ಮಲ್ಲಿಗೆಯ ವೈಭವ ಮರೆಯಾಗುತ್ತಿದೆ ಎಂಬುದು ನೋವಿನ ಸಂಗತಿ.

ನಂಜನಗೂಡು ರಸಬಾಳೆ

ನಂಜನಗೂಡು ರಸಬಾಳೆ

ಕರ್ನಾಟಕದಲ್ಲಿ ಉತ್ಪಾದನೆಯಾಗುವ ಬಾಳೆಹಣ್ಣುಗಳಲ್ಲಿ ವಿಶಿಷ್ಟವಾದುದು ನಂಜನಗೂಡಿನ ರಸಬಾಳೆ. ಮೈಸೂರಿನ ಸ್ಥಳೀಯ ಸಾಂಪ್ರದಾಯಿಕ ಹಿನ್ನೆಲೆಯುಳ್ಳ ನಂಜನಗೂಡು ರಸಬಾಳೆ ವಿಶಿಷ್ಟ ಗುಣಗಳಿಗೆ ಪ್ರಖ್ಯಾತಿ ಪಡೆದಿದೆ. ಸಾಮಾನ್ಯವಾಗಿ ನಂಜನಗೂಡು ಬಾಳೆಹಣ್ಣನ್ನು ನಂಜನಗೂಡು ರಸಬಾಳೆಹಣ್ಣು ಎಂದು ಕರೆಯುತ್ತಾರೆ. ಭಾರತದ, ಕರ್ನಾಟಕ ರಾಜ್ಯದ, ಮೈಸೂರು ಜಿಲ್ಲೆಯ ಚಾಮರಾಜನಗರ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತದೆ. ಈ ಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿದೆ. ರಾಸಾಯನಿಕ ಗೊಬ್ಬರಗಳ ಅತೀ ಬಳಕೆಯಿಂದಾಗಿ ಅದರ ರುಚಿ ಮತ್ತು ಸುವಾಸನೆ ಬದಲಾಗಿರುವುವು ಬೇಸರದ ಸಂಗತಿ.

ಅನನ್ಯ ರುಚಿ

ಅನನ್ಯ ರುಚಿ

ನಂಜಗೂಡು ಬಾಳೆಹಣ್ಣು ಅನನ್ಯ ರುಚಿ ಮತ್ತು ಸುವಾಸನೆಯನ್ನು ಹೊಂದಿರಲು ಕಾರಣ ನಂಜನಗೂಡಿನ ಸುತ್ತ ಮುತ್ತಲಿರುವ ಕಪ್ಪು ಜೇಡಿಮಣ್ಣು. ಇದೇ ಬಾಳೆಹಣ್ಣನ್ನು ಬೇರೊಂದು ಪ್ರದೇಶದಲ್ಲಿ ಬೆಳೆದರೆ ಅದರ ರುಚಿ ಮತ್ತು ಸುವಾಸನೆ ನಂಜನಗೂಡಿನ ಬಾಳೆಹಣ್ಣಿಗಿಂತ ಕಡಿಮೆಯಾಗಿರುತ್ತದೆ. ಈ ರುಚಿ ಹಾಗು ಸುವಾಸನೆಯ ಗುಟ್ಟು ಅದರ ಜೀನ್ ಗಳಲ್ಲಿವೆ ಎಂಬುದು ತಜ್ಞರ ಮಾತು.

ವೀಳ್ಯದೆಲೆ

ವೀಳ್ಯದೆಲೆ

ಚಿಗುರೆಲೆ, ಕರಿ ಎಲೆ ಎಂದು ಕರೆಯಲಾಗುವ ಮೈಸೂರು ವೀಳ್ಯದೆಲೆಗೆ ಅದರದೇ ಆದ ಹಿನ್ನೆಲೆಯಿದೆ. ಸುಮಾರು ಐದು ಸಾವಿರ ವರ್ಷಗಳಷ್ಟು ಹಿಂದಿನಿಂದಲೂ ಈ ಭಾಗದಲ್ಲಿ ವೀಳ್ಯದೆಲೆಯನ್ನು ಬಳಕೆ ಮಾಡಲಾಗುತ್ತಿದೆ. ಹೃದಯಾಕಾರದಲ್ಲಿ ತೆಳುವಾಗಿ ಕಾಣುವ ಮೈಸೂರು ವೀಳ್ಯದೆಲೆ ಸೇವನೆಯಿಂದ ಅಪಾರ ದೈಹಿಕ ತೊಂದರೆಗಳು ನಿವಾರಣೆಯಾಗುತ್ತದೆ ಎಂದು ವೈದ್ಯಕೀಯವಾಗಿ ಪ್ರಮಾಣೀತವಾಗಿದೆ. ಸ್ವತಃ ಮಹಾರಾಜರೇ ಭೂಮಿಯನ್ನು ಬಳುವಳಿಯಾಗಿ ನೀಡಿ ಅಲ್ಲಿ ವೀಳ್ಯದೆಲೆಯನ್ನು ಬೆಳೆಯುವಂತೆ ಪ್ರೋತ್ಸಾಹ ನೀಡಿದ್ದರು ಎಂಬ ಮಾತು ಈಗಲೂ ಜನಜನಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+