ಮೈಸೂರಲ್ಲಿ ಹಲವು ಗ್ರಾಪಂ ರಚನೆ : ಆಕ್ಷೇಪಣೆಗೆ ಆಹ್ವಾನ
ಮೈಸೂರು, ಜ. 20: ರಾಜ್ಯ ಸರ್ಕಾರದ ಸೂಚನೆಯಂತೆ ಮೈಸೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳನ್ನು ಪುನರ್ ವಿಂಗಡಿಸಿ ಹಾಗೂ ಹೊಸ ಗ್ರಾಮ ಪಂಚಾಯಿತಿ ರಚಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಈ ಅಧಿಸೂಚನೆಯಿಂದ ಅನನುಕೂಲತೆ ಉಂಟಾಗಬಹುದು ಎನ್ನಿಸಿದಲ್ಲಿ ಅಥವಾ ಆಕ್ಷೇಪಣೆ ಇದ್ದಲ್ಲಿ ಜ. 19ರಿಂದ 29ರೊಳಗೆ ಕಾರಣ ಸಹಿತ ಲಿಖಿತವಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಪಿಡಿಓಗಳು ಕರ್ತವ್ಯಕ್ಕೆ ವಾಪಸ್]

ನಂಜನಗೂಡು, ಟಿ. ನರಸೀಪುರ, ಹುಣಸೂರು, ಕೆ.ಆರ್. ನಗರ, ಪಿರಿಯಾಪಟ್ಟಣ ಮತ್ತು ಎಚ್.ಡಿ. ಕೋಟೆ ತಾಲೂಕುಗಳ ಹಲವು ಗ್ರಾಮ ಪಂಚಾಯಿತಿಗಳನ್ನು ಪುನರ್ ವಿಂಗಡಿಸಿ ಹೊಸ ಗ್ರಾಮ ಪಂಚಾಯಿತಿ ರಚಿಸಲಾಗಿದೆ. [ಗ್ರಾಮ ಪಂಚಾಯಿತಿಯಲ್ಲಿ ವೈ ಫೈ]
ಈ ಕುರಿತು ಹೊರಡಿಸಿರುವ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಉಪ ವಿಭಾಗಾಧಿಕಾರಿ, ತಾಲೂಕು, ಗ್ರಾಮ ಪಂಚಾಯಿತಿ, ರಾಜಸ್ವ ನಿರೀಕ್ಷಕರು, ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗಳಲ್ಲಿ ಜ. 19 ರಂದು ಪ್ರಕಟಿಸಲಾಗಿದೆ. ಜ. 29 ರ ವರೆಗೆ ಸಾರ್ವಜನಿಕರ ವೀಕ್ಷಣೆಗಾಗಿ ಲಗತ್ತಿಸಲಾಗಿದೆ. [ಗ್ರಾಪಂ ಮಟ್ಟದಲ್ಲಿ ಎಟಿಎಂ ಸ್ಥಾಪನೆ]












Click it and Unblock the Notifications