Mysuru Dasara 2024: ಜಂಬೂಸವಾರಿಗೆ ಮೆರಗು ನೀಡಲಿರುವ ಸ್ತಬ್ಧ ಚಿತ್ರಗಳು-ಈ ಬಾರಿಯ ವಿಶೇಷತೆಗಳೇನು.?
ಮೈಸೂರು, ಅಕ್ಟೋಬರ್, 08: ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನವೂ ಕೂಡ ಒಂದಾಗಿದೆ. ಇನ್ನು ಐತಿಹಾಸಿಕ ಜಂಬೂ ಸವಾರಿ ಸಾಗುವ ಮಹಾ ಮೆರವಣಿಗೆಯಲ್ಲಿ ಹಲವು ಜನಪದ ಕಲಾತಂಡಗಳು, ನೃತ್ಯಗಳು, ಹೀಗೆ ಹಲವಾರು ವಿಶೇಷತೆಗಲಿರಲಿವೆ. ಅವುಗಳ ಪೈಕಿ ಸ್ತಬ್ದ ಚಿತ್ರಗಳು ಗಮನಾರ್ಹವಾಗಿದ್ದು, ನೋಡುಗರನ್ನು ಆಕರ್ಷಿಸಲಿದೆ.
ಸ್ತಬ್ದ ಚಿತ್ರಗಳ ಪ್ರದರ್ಶನ ಜಿಲ್ಲೆಗಳ ವೈಶಿಷ್ಟ್ಯತೆ ಮತ್ತು ಇಲಾಖೆಗಳ ಯೋಜನೆಗಳನ್ನು ತೆರೆದಿಡುವ ಮೂಲಕ ಜನಸಾಮಾನ್ಯರಿಗೆ ಅರಿವನ್ನುಂಟು ಮಾಡುವುದು ಇದರ ವಿಶೇಷತೆಯಾಗಿದೆ. ಈ ಬಾರಿ ಹತ್ತು ಹಲವು ವಿಶೇಷತೆಗಳ ಸ್ತಬ್ದ ಚಿತ್ರಗಳು ಜಂಬೂಸವಾರಿಗೆ ಮೆರಗು ನೀಡಲು ಸಜ್ಜಾಗುತ್ತಿವೆ.

ಸಾಮಾನ್ಯವಾಗಿ ಜಂಬೂಸವಾರಿಯಲ್ಲಿ ಜಾನಪದ ಕಲಾತಂಡಗಳು, ಅಶ್ವರೋಹಿ, ಪೊಲೀಸ್, ಎನ್‌ಸಿಸಿ, ಗೈಡ್ಸ್ ದಳಗಳಿದ್ದು, ಇವುಗಳ ನಡುವೆ ಸ್ತಬ್ದ ಚಿತ್ರಗಳು ಸಾಗಿ ಬರುವ ದೃಶ್ಯಗಳು ಸುಂದರ ಮತ್ತು ಮನಮೋಹಕವಾಗಿರುತ್ತವೆ. ಇವುಗಳನ್ನು ತಯಾರಿ ಮಾಡಲು ಕಲಾಕಾರರು ತಿಂಗಳಾನುಗಟ್ಟಲೆ ಶ್ರಮವಹಿಸುತ್ತಾರೆ. ಒಂದೊಂದು ಸ್ತಬ್ದ ಚಿತ್ರಗಳು ತನ್ನದೇ ಆದ ವಿಶೇಷತೆ ರಾಜ್ಯದಲ್ಲಿರುವ ಪ್ರತಿ ಜಿಲ್ಲೆಗಳ ವಿಶೇಷತೆಯನ್ನು ಜನರ ಮುಂದೆ ತೆರೆದಿಡಲಿವೆ. ಈ ಸ್ತಬ್ದ ಚಿತ್ರಗಳ ತಯಾರಿ ನಗರದ ಬಂಡೀಪಾಳ್ಯದ ಎಪಿಎಂಸಿ ಯಾರ್ಡ್ ನ ಆವರಣದಲ್ಲಿ ಭರದಿಂದ ಸಾಗಿದೆ.
ಸ್ತಬ್ದ ಚಿತ್ರಗಳ ತಯಾರಿಯಲ್ಲಿ ವರ್ಷದಿಂದ ವರ್ಷಕ್ಕೆ ತಂತ್ರಜ್ಞಾನ, ಅದ್ಧೂರಿತನ ಹೆಚ್ಚುತ್ತಲೇ ಸಾಗುತ್ತಿದ್ದು, ಇದುವರೆಗೆ ತಯಾರಾಗುತ್ತಿದ್ದ ಸ್ತಬ್ದ ಚಿತ್ರಗಳಿಗೆ ಹೋಲಿಸಿದರೆ, ಈ ಬಾರಿ ಸ್ವಲ್ಪ ಮಟ್ಟಿಗೆ ವಿಭಿನ್ನತೆ ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ. ಮಾಮೂಲಿಯಾಗಿ ರಾಜ್ಯದ 31 ಜಿಲ್ಲೆಗಳಿಂದಲೂ ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿದ್ದು, ಆಯಾಯ ಜಿಲ್ಲೆಗಳ ವೈಶಿಷ್ಟ್ಯತೆಯನ್ನು ತೆರೆದಿಡಲಿದೆ.
ಯಾವ ಜಿಲ್ಲೆಯದ್ದು ಏನು ವಿಶೇಷತೆ?: ಇನ್ನು ಯಾವ ಜಿಲ್ಲೆ ಮತ್ತು ಅದರ ವಿಶೇಷತೆ ಏನೇನು ಇರಲಿದೆ ಎಂಬುದನ್ನು ನೋಡಿದ್ದೇ ಆದರೆ, ಕೋಲಾರದ ಕೋಟೆಲಿಂಗೇಶ್ವರ ದೇವಸ್ಥಾನ, ದಕ್ಷಿಣಕನ್ನಡದ ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ ಬಿಂಬಿಸುವ, ಹಾಸನ ಜಿಲ್ಲೆಯ ವಿಶ್ವಪರಂಪರೆಯ ಬೇಲೂರು ಚೆನ್ನಕೇಶವ ದೇವಾಲಯ, ಹಳೇಬೀಡು ಹೊಯ್ಸಳೇಶ್ವರ ದೇವಾಲಯ ಸ್ತಬ್ಧ ಚಿತ್ರಗಳ ಪ್ರದರ್ಶನ್ ನಡೆಯಲಿವೆ.
ಅಲ್ಲದೆ, ದಾವಣಗೆರೆ ಜಿಲ್ಲೆಯ ನಾವು ಮನುಜರು, ಗದಗ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ, ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ, ಕಿನ್ನಾಳೆ ಕಲೆ, ಇಟಗಿ ದೇವಸ್ಥಾನ, ಬೀದರ್ ಜಿಲ್ಲೆಯ ಚೆನ್ನ ಬಸವಪಟ್ಟ ದೇವರು ಇರಲಿದೆ.
ಇಷ್ಟೇ ಅಲ್ಲದೆ ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡನ್ನೊಮ್ಮೆ ಬಂದು ನೋಡು, ಕೊಡಗು ಜಿಲ್ಲೆಯ ಭೂಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ, ಕಾಳುಮೆಣಸು, ಆನೆ ಕ್ಯಾಂಪ್ ಅನ್ನು ಜಗತ್ತಿನ ಎದುರು ತೆರೆದಿಡುವಂತೆ ಮಾಡಲಿದೆ.
ಮುಖ್ಯಮಂತ್ರಿ ತವರು ಜಿಲ್ಲೆಯಿಂದ ಮನುಷ್ಯ ಜಾತಿ ತಾನೊಂದೆ ವಲಂ ಸಂಸತ್ ಭವನ, ಅನುಭವ ಮಂಟಪ, ಬುದ್ಧ, ಬಸವ, ಅಂಬೇಡ್ಕರ್ ಅವರ ಮಾದರಿಗಳು, ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ದೇವಸ್ಥಾನ ಹಾಗೂ ಶಿವನ ಸ್ತಬ್ಧಚಿತ್ರ ಗಮನಸೆಳೆಯಲಿದೆ.
ಮೈಸೂರಿನ ವಿಶೇಷತೆ ಸಾರಲಿರುವ ಸ್ತಬ್ದ ಚಿತ್ರ: ಇದೆಲ್ಲದರ ನಡುವೆ ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಸಾಧನೆಗಳ ಜೊತೆಗೆ ಸ್ವಾತಂತ್ರ್ಯಪೂರ್ವ-ನಂತರದಲ್ಲಿ ಸಾಧಿಸಿರುವ ಪ್ರಗತಿಯ ಕುರಿತ ಸ್ತಬ್ಧಚಿತ್ರಗಳು ಇರಲಿದ್ದು, ಹೊಸ ಹೊಸ ಸಂಶೋಧನೆಗಳ ಮೂಲಕ ಆಹಾರ, ಪೌಷ್ಠಿಕಾಂಶದ ಆಹಾರ, ತಂತ್ರಜ್ಞಾನಗಳನ್ನು ಪರಿಚಯಿಸುತ್ತಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ ತನ್ನ ಸಾಧನೆಗಳ ಅನಾವರಣ ಮಾಡಲಿದೆ.
ಎಂಎಸ್‌ಎಂಇಗಾಗಿ 450ಕ್ಕೂ ಹೆಚ್ಚು ಸಂಶೋಧನೆಗಳನ್ನು ಅಭಿವೃದ್ಧಿಪಡಿಸಿರುವುದು, ಸುರಕ್ಷಿತ, ಸ್ವಾದಿಷ್ಟಕರ ಮತ್ತು ಆರೋಗ್ಯಕರ ಆಹಾರ ಒದಗಿಸುವುದು ಮೂಲ ಮಂತ್ರದ ಬಗ್ಗೆ ಸಾರ್ವಜನಿಕರ ಮುಂದೆ ಸ್ತಬ್ದ ಚಿತ್ರದ ಮೂಲಕ ತೆರೆದಿಡಲಿದೆ.
ಮೈಸೂರು ರೇಷ್ಮೆಗಳನ್ನು ಉತ್ಪಾದನೆ ಮಾಡುವಂತಹ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಿಂದ ಹೊರ ತರುತ್ತಿರುವ ಅಪ್ಪಟ ಜರಿ ಸೀರೆಗಳ ನೋಟ ಸೆರೆದಿಡುವಂತಹ ಸ್ತಬ್ಧಚಿತ್ರ, ಮೈಸೂರು ಸ್ಯಾಂಡಲ್ ಸೋಪ್, ಗಂಧದಕಡ್ಡಿ, ಕಲಾಕೃತಿಗಳನ್ನು ಬಿಂಬಿಸುವಂತಹ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ.
ದಶಕದ ಹಿಂದೆ ಮಾನ್ಯತೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಈಗ ಪುಟಿದೆದ್ದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಎ ಗ್ರೇಡ್ ಮಾನ್ಯತೆ ಪಡೆದುಕೊಂಡಿರುವ ಸಾಧನೆಯನ್ನು ದೇಶ-ವಿದೇಶದ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಕುರಿತು ಸ್ತಬ್ದಚಿತ್ರದಲ್ಲಿ ಬಿಂಬಿಸಲಾಗುತ್ತಿದೆ.
ಜಂಬೂಸವಾರಿಗೆ ಸ್ತಬ್ದ ಚಿತ್ರಗಳು ಮೆರಗು: ಒಟ್ಟಾರೆಯಾಗಿ ಹೇಳಬೇಕೆಂದರೆ ಜಂಬೂಸವಾರಿಯಲ್ಲಿ ಸಾಗಲು ಸ್ತಬ್ದ ಚಿತ್ರಗಳು ಸಿದ್ಧಗೊಳ್ಳುತ್ತಿದ್ದು, ಈಗಾಗಲೇ ಬಹುತೇಕ ಸ್ತಬ್ದ ಚಿತ್ರಗಳ ನಿರ್ಮಾಣ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದ್ದು, ಅಕ್ಟೋಬರ್ 12ರಂದು ನಡೆಯಲಿರುವ ಜಂಬೂಸವಾರಿ ಹೊತ್ತಿಗೆ ಸಿದ್ಧಗೊಳ್ಳಲಿವೆ. ಇವುಗಳ ನಿರ್ಮಾಣ ಕಾರ್ಯದಲ್ಲಿ ಕಲಾಕಾರರು ಹಗಲಿರುಳು ಎನ್ನದೆ ದುಡಿಯುತ್ತಿರುವುದು ಕಂಡು ಬರುತ್ತಿದೆ. ಅದೇನೇ ಇರಲಿ ಜಂಬೂಸವಾರಿಗೆ ಸ್ತಬ್ದ ಚಿತ್ರಗಳು ಮೆರಗು ನೀಡುವುದಂತು ಸತ್ಯ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications