ಸರಳ ಮೈಸೂರು ದಸರಾಕ್ಕೆ ವಿದ್ಯುದ್ದೀಪದ ಮೆರಗು!

ಮೈಸೂರು,

ಅಕ್ಟೋಬರ್
4:
ವಿದ್ಯುದ್ದೀಪದ
ಮೂಲಕ
ಮೈಸೂರು
ದಸರಾಕ್ಕೆ
ಮೆರಗು
ನೀಡುವ
ಕೆಲಸ
ಭರದಿಂದ
ಸಾಗಿದೆ.
ನಗರದ
ಬಹುತೇಕ
ಕಡೆಗಳಲ್ಲಿ
ದೀಪ
ಅಳವಡಿಕೆ
ಕಾರ್ಯ
ಮುಗಿದಿದ್ದು,
ಇಡೀ
ಮೈಸೂರು
ನಗರ
ವಿದ್ಯುದ್ದೀಪದ
ರಂಗಿನಲ್ಲಿ
ಮಿಂಚಲು
ಸಜ್ಜಾಗುತ್ತಿದೆ.

id="toptextpromo">
id='are-slot-1'
class='oiad
oi-axt
oiadv'>

ಮೈಸೂರು

ದಸರಾ
ಸಂಭ್ರಮ
ಕಳೆದ
ಎರಡು
ವರ್ಷಗಳಿಂದ
ಕಳೆಗುಂದಿದೆ.
ಆದರೆ
ದೀಪ
ಅಳವಡಿಕೆಯಿಂದ
ಮೇಲ್ನೋಟಕ್ಕೆ
ಸ್ವರ್ಗವೇ
ಧರೆಗಿಳಿದ
ಅನುಭವವಾಗುತ್ತದೆ.
‍ಝಗಮಗಿಸುವ
ಬೆಳಕಿನಲ್ಲಿ
ಸುತ್ತಾಡುವುದೇ
ಒಂಥರಾ
ಮಜಾ
ನೀಡುತ್ತದೆ.
ಅ.7ರಿಂದ
ರಾತ್ರಿಯಾಗುತ್ತಿದ್ದಂತೆಯೇ
ಇಡೀ
ಮೈಸೂರು
ನಗರ
ವಿದ್ಯುತ್
ಬೆಳಕಿನಲ್ಲಿ
ಝಗಮಗಿಸುತ್ತಾ
ಸ್ವರ್ಗ
ಲೋಕವೇ
ಧರೆಗಿಳಿದಂತೆ
ಭಾಸವಾಗಲಿದೆ.

id='are-slot-2'
class='oiad
oi-axt
oiadv'>

 ಅ.7ರಿಂದ ಮೈಸೂರು ನಗರ ಝಗಮಗ

ಅ.7ರಿಂದ ಮೈಸೂರು ನಗರ ಝಗಮಗ

ಇದಕ್ಕಾಗಿ ಮೈಸೂರು ನಗರದ ಪ್ರಮುಖ ವೃತ್ತಗಳಾದ ರಾಮಸ್ವಾಮಿ, ಚಾಮರಾಜ, ಕೃಷ್ಣರಾಜ, ಜೆಎಸ್‌ಎಸ್ ವಿದ್ಯಾಪೀಠದ ಬಳಿಯ ಬಸವೇಶ್ವರ ವೃತ್ತ, ಪಾಲಿಕೆ ಕಚೇರಿ, ಅಗ್ರಹಾರ, ಸಿದ್ದಪ್ಪ ವೃತ್ತ, ಆಯುರ್ವೇದ ಆಸ್ಪತ್ರೆ, ಆರ್‌ಟಿಒ ಹೀಗೆ ನಗರದ ಸುಮಾರು ನಲವತ್ತಕ್ಕೂ ಹೆಚ್ಚಿನ ವೃತ್ತಗಳಿಗೆ ಹಾಗೂ ಪ್ರಮುಖ ರಸ್ತೆಗಳಾದ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಮೈಸೂರು- ಬೆಂಗಳೂರು ರಸ್ತೆ, ಚಾಮರಾಜ ಜೋಡಿ ರಸ್ತೆ, ಎಂ.ಜಿ. ರಸ್ತೆ, ಜೆಎಲ್‌ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳನ್ನು ವಿದ್ಯುದ್ದೀಪ ಅಲಂಕಾರ ಮಾಡಿದ್ದು, ಹೊಸಲೋಕಕ್ಕೆ ಕರೆದೊಯ್ದ ಅನುಭವ ನೀಡಲಿದೆ.

 ವಿದ್ಯುದ್ದೀಪದ ಬೆಳಕಿನಲ್ಲಿ ಓಡಾಡಲು ಕಾತರ

ವಿದ್ಯುದ್ದೀಪದ ಬೆಳಕಿನಲ್ಲಿ ಓಡಾಡಲು ಕಾತರ

ಈ ಬಾರಿ ದಸರಾಕ್ಕೆ ಸಂಬಂಧಿಸಿದಂತೆ ಅರಮನೆ ಕಾರ್ಯಕ್ರಮಗಳು ಹೊರತು ಪಡಿಸಿದಂತೆ ಇನ್ನಿತರೆ ಯಾವುದೇ ಕಾರ್ಯಕ್ರಮಗಳು ನಡೆಯದ ಕಾರಣ ಜನರಿಗೂ ದಸರಾದಲ್ಲಿ ಸಂಭ್ರಮಿಸಲು ವಿದ್ಯುದ್ದೀಪದ ಅಲಂಕಾರವಷ್ಟೆ ಇರುವುದರಿಂದ ಅದನ್ನು ಎಂಜಾಯ್ ಮಾಡಲು ಜನ ಕಾಯುತ್ತಿದ್ದಾರೆ. ಇದೀಗ ಪ್ರತಿ ವರ್ಷದಂತೆ ಸಯ್ಯಾಜಿರಾವ್ ರಸ್ತೆ, ನಗರದ ರೈಲು ನಿಲ್ದಾಣದಿಂದ ಇರ್ವಿನ್ ರಸ್ತೆ, ಚಾಮುಂಡಿ ಬೆಟ್ಟದ ತಪ್ಪಲಿನಿಂದ ಮೆಟ್ಟಿಲುಗಳ ಮೂಲಕ ಸಾಗುವ ರಸ್ತೆ, ನಂಜನಗೂಡು ರಸ್ತೆ, ಹರ್ಷರಸ್ತೆ, ಅಶೋಕ ರಸ್ತೆ, ಮಹದೇಶ್ವರ ರಸ್ತೆ, ಹುಣಸೂರು ರಸ್ತೆ, ಇರ್ವಿನ್ ರಸ್ತೆ, ಜೆ.ಎಲ್.ಬಿ. ರಸ್ತೆ, ಮೈಸೂರು- ಬೆಂಗಳೂರು ರಸ್ತೆ, ವಿನೋಬಾ ರಸ್ತೆ, ಧನ್ವಂತರಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಸೇರಿದಂತೆ ಇತರೆ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಬಹುತೇಕ ಪೂರ್ಣಗೊಂಡಿದೆ.

 121 ರಸ್ತೆ, 80 ವೃತ್ತಗಳಿಗೆ ಅಲಂಕಾರ

121 ರಸ್ತೆ, 80 ವೃತ್ತಗಳಿಗೆ ಅಲಂಕಾರ

ಕಳೆದ ಬಾರಿ ದೀಪಾಲಂಕಾರ 60 ಕಿ.ಮೀ.ಗೆ ಸೀಮಿತ ಮಾಡಿದ್ದರು. ಆದರೆ, ಈ ಬಾರಿ ಕೊರೊನಾ ಸಂಖ್ಯೆ ತಗ್ಗಿರುವುದರಿಂದ ನಗರದ 100 ಕಿ.ಮೀ. ವ್ಯಾಪ್ತಿಯಲ್ಲಿ ದೀಪಾಲಂಕಾರ ಮಾಡಲಾಗಿದೆ. ದೀಪಾಲಂಕಾರಕ್ಕೆ ಎಲ್‌ಇಡಿ ಬಲ್ಬ್‌ಗಳನ್ನು ಬಳಸಲಾಗಿದೆ. ಸದ್ಯ 121 ರಸ್ತೆಗಳು, 80 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿದೆ. ಈಗಾಗಲೇ ಸಯ್ಯಾಜಿರಾವ್ ರಸ್ತೆ, ಹಾರ್ಡಿಂಜ್ ವೃತ್ತ, ಕೆ.ಆರ್. ವೃತ್ತ, ಬಸವೇಶ್ವರ ವೃತ್ತ ಸೇರಿ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಉಳಿದ ರಸ್ತೆಗಳಿಗೂ ಮಾಡಲಾಗುತ್ತಿದೆ.

ವಿಶೇಷವಾಗಿ ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ, ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿ, 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಮೃತೋತ್ಸವದ ಅಂಗವಾಗಿ ನಗರದ ವಿವಿಧ ರಸ್ತೆ ಮತ್ತು ವೃತ್ತಗಳಲ್ಲಿ ಭಾರತದ ಭೂಪಟ, ಸ್ವಾಮಿ ವಿವೇಕಾನಂದ, ಮೈಸೂರು ಅರಮನೆ, ವಿಷ್ಣು, ಶ್ರೀಕೃಷ್ಣ ರಥ, ಚಾಮುಂಡಿ ಬೆಟ್ಟದಲ್ಲಿ ಸ್ವಾಗತ ಕೋರುವ ಪ್ರತಿಕೃತಿ ಮೊದಲಾದ ವಿಶೇಷ ಪ್ರತಿಕೃತಿಗಳನ್ನು ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾಗಿದೆ.

 ಸರಳ ದಸರಾಕ್ಕೆ ದೀಪಾಲಂಕಾರದ ಮೆರಗು

ಸರಳ ದಸರಾಕ್ಕೆ ದೀಪಾಲಂಕಾರದ ಮೆರಗು

ಮೈಸೂರು ನಗರದ ಎಲ್ಲ ವೃತ್ತಗಳನ್ನು ಅಲಂಕರಿಸಲಾಗಿದೆ. ಅದರಲ್ಲೂ ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಹಾಡ್ವಿಂಜ್ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಫೌಂಟೆನ್ ವೃತ್ತ, ಮುಡಾ ವೃತ್ತ, ರೈಲ್ವೆ ನಿಲ್ದಾಣ ಸಮೀಪವಿರುವ ಬಾಬು ಜಗಜೀವನ್‌ರಾವ್ ವೃತ್ತ, ಅಗ್ರಹಾರ ವೃತ್ತ, ದೊಡ್ಡ ಗಡಿಯಾರ ವೃತ್ತ, ಚಿಕ್ಕಗಡಿಯಾರ ವೃತ್ತ, ರಾಮಸ್ವಾಮಿ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳನ್ನು ವಿಶೇಷ ದೀಪಾಲಂಕಾರ ಮಾಡಿ ಗಮನಸೆಳೆಯುವಂತೆ ಮಾಡಲಾಗಿದೆ.

ಸದ್ಯ ದಸರಾ ಸರಳವಾಗಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಇದುವರೆಗೆ ಕಾಣುತ್ತಿದ್ದ ಸಂಭ್ರಮವೂ ಇಲ್ಲದಾಗಿದೆ. ಆದರೆ ದಸರಾ ನಡೆಯುತ್ತಿದೆ ಎಂಬುದನ್ನು ನಗರಕ್ಕೆ ಮಾಡಿರುವ ದೀಪಾಲಂಕಾರಗಳು ಮಾತ್ರ ಹೇಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+