• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಲಗೆ ಮೇಲೆ ಕರಗುವ ಚಿಬ್ಬುಲು ಇಡ್ಲಿ, ಕೆಂಪು ಚಟ್ನಿ ರುಚಿ ನೋಡಿ

|

ಇನ್ನೇನು ಕಣ್ಣೆದುರಿಗೆ ವಿಶ್ವ ವಿಖ್ಯಾತ ಮೈಸೂರು ದಸರಾ ಇದೆ. ಈ ಸಂದರ್ಭದಲ್ಲಿ ಇಲ್ಲಿಗೆ ಬಂದರೆ ಅಥವಾ ಇನ್ಯಾವುದೇ ವೇಳೆ ಬಂದರೂ ಈ ತಿಂಡಿಯನ್ನು ತಪ್ಪದೇ ತಿನ್ನಬೇಕು ಅನ್ನಿಸುವಂಥದ್ದನ್ನು ಇಂದು ಪರಿಚಯಿಸುತ್ತಿದ್ದೇವೆ.

ಹಬೆ ಆಡುವ ಬಿಸಿ - ಬಿಸಿ ಇಡ್ಲಿ ಹಾಗೂ ಅದಕ್ಕೆ ತಕ್ಕಂತೆ ತೆಂಗಿನಕಾಯಿ ಚಟ್ನಿಯನ್ನು ನೆನಸಿಕೊಂಡರೆ ಭೋಜನ ಪ್ರಿಯರಿಗಷ್ಟೇ ಅಲ್ಲ, ಎಂಥವರ ಬಾಯಲ್ಲೂ ನೀರೂರುತ್ತದೆ. ಇನ್ನು ಮಲ್ಲಿಗೆಯಂಥ ಬಿಳುಪಿ, ನಯವಾದ, ಮೃದುವಾದ ಹಬೆಯಲ್ಲಿ ಬೇಯಿಸಲಾಗುವ ಇಡ್ಲಿ ನೋಡುವುದಕ್ಕೆಷ್ಟು ಚೆಂದವೋ ಅಷ್ಟೇ ಆರೋಗ್ಯಪೂರ್ಣವೂ ಹೌದು.

ಅಣ್ಣಾವ್ರು ಕೂಡ ರುಚಿ ನೋಡಿದ್ದರು ಮೈಸೂರು ಮೈಲಾರಿ ಹೋಟೆಲ್ ತಿಂಡಿ

ಇಂತಹ ಇಡ್ಲಿಯನ್ನು ಅಲ್ಯೂಮಿನಿಯಂನ ದೊಡ್ಡ ಕಲಾಯಿಯಲ್ಲಿ ಜೊತೆಗೆ ಚಿಬ್ಬುಲಿನಲ್ಲಿ ಬೇಯಿಸಿದರೆ ಹೇಗೇ? ಇಂತಹ ಇಡ್ಲಿಯನ್ನು ತಿನ್ನಬೇಕೇ, ಹಾಗಾದರೆ ಮೈಸೂರಿನ ಈ ಜಾಗಕ್ಕೆ ನೀವು ಬರಲೇಬೇಕು.

ಮೈಸೂರಿನ ಕುವೆಂಪು ನಗರದಲ್ಲಿರುವ ಹೋಟೆಲ್ ಹರಿಹರ ಆರಂಭವಾಗಿ ಕೆಲವೇ ತಿಂಗಳಾಗಿದ್ದರೂ ಇಲ್ಲಿನ ಜನರ ಮನಸೂರೆಗೊಂಡಿದೆ. ಇಲ್ಲಿನ ಇಡ್ಲಿ ಮಲ್ಲಿಗೆ ಹೂವಿನಷ್ಟೇ ಮೃದುವಾಗಿರುತ್ತದೆ. ಹಲ್ಲಿಲ್ಲದವರು ಸಹ ತಿನ್ನಬಹುದು. ಮೆಲ್ಲಬೇಕೆಂದಿಲ್ಲ. ಬಾಯಿಗೆ ಹಾಕಿಕೊಂಡರೆ ಕ್ಷಣಾರ್ಧದಲ್ಲಿ ಕರಗಿ ಹೋಗುತ್ತದೆ. ಅದನ್ನು ಸವಿಯಲು ಬೆಳಗ್ಗೆಯೇ ಜನ ಹೋಟೆಲ್‌ಗೆ ದಾಂಗುಡಿ ಇಡುತ್ತಾರೆ.

ಮೂರು ಇಡ್ಲಿ ಬೆಲೆ 25 ರುಪಾಯಿ

ಮೂರು ಇಡ್ಲಿ ಬೆಲೆ 25 ರುಪಾಯಿ

ಬೆಳಗ್ಗೆ ಏಳು ಗಂಟೆಗೆ ಇಲ್ಲಿ ಉಪಾಹಾರ ಸಿದ್ಧವಾಗಿರುತ್ತದೆ. ಅಷ್ಟೊತ್ತಿಗಾಗಲೇ ವಿವಿಧ ಕಡೆಗಳಿಂದ ಜನ ಬಂದಿರುತ್ತಾರೆ. ಅಷ್ಟೇ ಅಲ್ಲ, ವಾಯು ವಿಹಾರ ಮುಗಿಸಿಕೊಂಡು ಹೋಗುವವರು ಒಂದೆರಡು ಬಿಸಿ ಬಿಸಿ ಇಡ್ಲಿ ತಿಂದು ಹೋಗುತ್ತಾರೆ. ಮನೆಗೆ ಪಾರ್ಸಲ್ ಕೊಂಡೊಯ್ಯುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಮೂರು ಇಡ್ಲಿ ಬೆಲೆ 25 ರುಪಾಯಿ ಇದೆ. ಇಲ್ಲಿ ಚಿಬ್ಬಲು ಇಡ್ಲಿಯ ಜೊತೆಗೆ ದೋಸೆಗೂ ಬಹಳ ಬೇಡಿಕೆ ಇದೆ. ಅದರೊಂದಿಗೆ ಕೊಡುವ ಕೆಂಪು ಚಟ್ನಿ ಒಳ್ಳೆಯ ಕಾಂಬಿನೇಷನ್. ಕೊಬ್ಬರಿ, ಕೆಂಪುಮೆಣಸಿಕಾಯಿ, ಕೊತ್ತಂಬರಿ ಹಾಕಿ ಅದನ್ನು ತಯಾರಿಸಲಾಗುತ್ತದೆ.

ಶುದ್ಧ ಬೆಣ್ಣೆ ತಯಾರಿಸಿದ ದೋಸೆ

ಶುದ್ಧ ಬೆಣ್ಣೆ ತಯಾರಿಸಿದ ದೋಸೆ

ದೋಸೆ ಇಷ್ಟಪಡುವವರು 'ಬೆಣ್ಣೆ ದೋಸೆ' ಸವಿದು ಹೋಗುತ್ತಾರೆ. ಶುದ್ಧ ಬೆಣ್ಣೆ ತಂದು ತಯಾರಿಸುವುದರಿಂದ ಅದರ ರುಚಿಯೇ ಬೇರೆ ಎನ್ನುವುದು ಗ್ರಾಹಕರ ಮಾತು. ಇನ್ನುಳಿದಂತೆ ಈರುಳ್ಳಿ ದೋಸೆ, ಮಸಾಲೆ ದೋಸೆ, ಮಸಾಲೆ ಬಾತ್ ಸಹ ಸಿಗುತ್ತದೆ. ಒಂದು ಇಡ್ಲಿಗೆ 7 ರೂಪಾಯಿ ಬೆಲೆ ಇದ್ದು, ಆರೋಗ್ಯಕರವಾದ ಸ್ವಾದಿಷ್ಟ ಚಿಬ್ಲು ಇಡ್ಲಿ ಜೇಬಿಗೂ ಭಾರವಲ್ಲ. ಚಿಬ್ಲು ಇಡ್ಲಿಯ ಜೊತೆಗೆ ರೈಸ್‌ ಬಾತ್‌, ಪೂರಿ-ಸಾಗು, ಉದ್ದಿನವಡೆ, ಮಸಾಲೆ ವಡೆಯನ್ನು ಮಾಡಲಾಗುತ್ತದೆ ಆದರೂ ಜನ ನೈಸರ್ಗಿಕವಾದ ಚಿಬ್ಲು ಇಡ್ಲಿ ತಿನ್ನುವ ಸಲುವಾಗಿಯೇ ಈ ಹೋಟೆಲ್‌ ಹುಡುಕಿಕೊಂಡು ಬರುತ್ತಾರೆ.

ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?

ಜೇಬಿಗೂ ಭಾರವಲ್ಲದ ತಿಂಡಿ

ಜೇಬಿಗೂ ಭಾರವಲ್ಲದ ತಿಂಡಿ

ಚಿಬ್ಲು ಇಡ್ಲಿ ಪಕ್ಕಾ ನೈಸರ್ಗಿಕ ಆಹಾರ. ಯಾವುದೇ ಹೋಟೆಲ್‌ಗೆ ಹೋದರೂ ಇಡ್ಲಿ ತಟ್ಟೆಗಳಲ್ಲಿ ಪ್ಲಾಸ್ಟಿಕ್‌ ಹಾಳೆಗಳನ್ನು ಹಾಸಿ ಅದರ ಮೇಲೆ ಸಂಪಣ ಹೊಯ್ದು, ಇಡ್ಲಿ ಬೇಯಿಸುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ಚಿಬ್ಬಲಿನಲ್ಲಿ ಮಾಡುವ ಇಡ್ಲಿ ಫೇಮಸ್. ಚಿಬ್ಲು ಇಡ್ಲಿ ಬೇಯಿಸಲು ಪ್ಲಾಸ್ಟಿಕ್‌ ಹಾಳೆ ಬಳಸುವುದಿಲ್ಲ. ಬದಲಿಗೆ ಬಿಳಿಯ ಕೋರಾ ಬಟ್ಟೆಯನ್ನು ಖರೀದಿಸಿ, ಚಿಬ್ಲು ಅಳತೆಗೆ ಕತ್ತರಿಸಿ ಬಳಸಲಾಗುತ್ತದೆ. ಒಂದು ಇಡ್ಲಿಗೆ 6 ರುಪಾಯಿ ಬೆಲೆ ಇದ್ದು, ಆರೋಗ್ಯಕರವಾದ ಸ್ವಾದಿಷ್ಟ ಚಿಬ್ಲು ಇಡ್ಲಿ ಜೇಬಿಗೂ ಭಾರವಲ್ಲ.

ಚಪ್ಪಲಿ ಕಳಚಿಟ್ಟು ಊಟಕ್ಕೆ ಬನ್ನಿ, ಇದು ಮೈಸೂರಿನ ಮಧ್ವ ಭವನ!

ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆ

ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆ

ಚಿಬ್ಲು ಇಡ್ಲಿಯ ಜೊತೆಗೆ ರೈಸ್‌ ಬಾತ್‌, ಪೂರಿ-ಸಾಗು, ಉದ್ದಿನ ವಡೆ, ಮಸಾಲೆ ವಡೆಯನ್ನು ಮಾಡಲಾಗುತ್ತಾದರೂ ಜನರು ಚಿಬ್ಲು ಇಡ್ಲಿ ತಿನ್ನುವ ಸಲುವಾಗಿಯೇ ಈ ಹೋಟೆಲ್‌ ಹುಡುಕಿಕೊಂಡು ಬರುತ್ತಾರೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆ ತನಕ ಹಾಗೂ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9ರವರೆಗೆ ಈ ಹೋಟೆಲ್ ಬಾಗಿಲು ತೆರೆದಿರುತ್ತದೆ. ಹಾಗಾದರೆ ಇನ್ಯಾಕೆ ತಡ, ಈಗಲೇ ಹರಿಹರ ಹೋಟೆಲ್ ಇಡ್ಲಿ ತಿನ್ನುವ ಪ್ಲಾನ್ ಹಾಕಿಕೊಂಡು ಬಿಡಿ.

ಶಿವಮೊಗ್ಗದ ಮೀನಾಕ್ಷಿ ಭವನ್ ಪಡ್ಡು, ಕಡುಬು ಸವಿಯದ ಜೀವ ವ್ಯರ್ಥವೋ!

English summary
Mysuru dasara nearing. Here is the detail of Kuvempunagar Harihara hotel, where chiblu idli and chatni very famous.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X