ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು; ವೇಳಾಪಟ್ಟಿ

|
Google Oneindia Kannada News

ಮೈಸೂರು, ಜನವರಿ 04: ನೈಋತ್ಯ ರೈಲ್ವೆ ಮೈಸೂರು ವಿಭಾಗ ಸೋಮವಾರದಿಂದ ಆಯ್ದ ಮಾರ್ಗದಲ್ಲಿ ಕಾಯ್ದಿರಿಸದ ರೈಲುಗಳ ಸಂಚಾರ ಆರಂಭಿಸಿದೆ. ಮೈಸೂರು-ಬೆಂಗಳೂರು ನಡುವಿನ 16 ಬೋಗಿಗಳ ಪ್ಯಾಸೆಂಜರ್ ರೈಲು ಸಹ ಇದರಲ್ಲಿ ಸೇರಿದೆ.

ಸೋಮವಾರದಿಂದ 06255/06256/06257 ಸಂಖ್ಯೆಯ ರೈಲು ಮೈಸೂರು-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಉಭಯ ನಗರಗಳ ನಡುವೆ ಸಂಚಾರ ನಡೆಸುವ ಪ್ರಯಾಣಿಕರು ಈ ರೈಲ ಸೇವೆಯ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ. ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ.

ವೇಳಾಪಟ್ಟಿ: ಬೆಂಗಳೂರು ನಗರದಿಂದ ಸಂಜೆ 7ಕ್ಕೆ ಹೊರಡುವ ರೈಲು ರಾತ್ರಿ 10ಕ್ಕೆ ಮೈಸೂರು ತಲುಪಲಿದೆ. 06256 ಸಂಖ್ಯೆಯ ರೈಲು ಬೆಳಗ್ಗೆ 6.10ಕ್ಕೆ ಮೈಸೂರಿನಿಂದ ಹೊರಡಲಿದ್ದು, 9.15ಕ್ಕೆ ಬೆಂಗಳೂರು ತಲುಪಲಿದೆ.

ಕರಾವಳಿ ಭಾಗದ ಜನರ ಬೇಡಿಕೆ ಈಡೇರಿಸಿದ ಕೊಂಕಣ ರೈಲ್ವೆ ಕರಾವಳಿ ಭಾಗದ ಜನರ ಬೇಡಿಕೆ ಈಡೇರಿಸಿದ ಕೊಂಕಣ ರೈಲ್ವೆ

Mysuru Bengaluru Passenger Train Service Schedule

06258 ಸಂಖ್ಯೆಯ ರೈಲು ಬೆಳಗ್ಗೆ 9.20ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.45ಕ್ಕೆ ಮೈಸೂರು ತಲುಪಲಿದೆ. 06258 ಸಂಖ್ಯೆಯ ರೈಲು ಮಧ್ಯಾಹ್ನ 1.45ಕ್ಕೆ ಮೈಸೂರಿನಿಂದ ಹೊರಟು 4 ಗಂಟೆಗೆ ಬೆಂಗಳೂರು ತಲುಪಲಿದೆ.

ರೈತರ ಆದಾಯ ಹೆಚ್ಚಳಕ್ಕೆ ಕಿಸಾನ್ ರೈಲು ಕಾರಣ: ಮೋದಿ ರೈತರ ಆದಾಯ ಹೆಚ್ಚಳಕ್ಕೆ ಕಿಸಾನ್ ರೈಲು ಕಾರಣ: ಮೋದಿ

ನಾಯಂಡಹಳ್ಳಿ, ಜ್ಞಾನಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ಕೋತೋಹಳ್ಳಿ, ರಾಮನಗರ, ಚನ್ನಪಟ್ಟಣ, ಶೆಟ್ಟಿಹಳ್ಳಿ, ನಿಢಘಟ್ಟ, ಮದ್ದೂರು, ಹನಕೆರೆ, ಮಂಡ್ಯ, ಯಲಿಯೂರು, ಬ್ಯಾಡರಹಳ್ಳಿ, ಚಂದಗಿರಿ ಕೊಪ್ಪಲ್, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿಯಲ್ಲಿ ರೈಲು ನಿಲುಗಡೆ ಹೊಂದಿದೆ.

English summary
South western railway Mysuru division began the unreserved passenger train service between Mysuru and Bengaluru. Here are the schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X