ಪಿರಿಯಾಪಟ್ಟಣದ ಯುವಕರಿಗೆ ಉಪಯುಕ್ತ ಮಾಹಿತಿ
ಮೈಸೂರು, ಮೇ 28: ಪಿರಿಯಾಪಟ್ಟಣದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಿಓಪಿಎ (ಕಂಪ್ಯೂಟರ್ ವೃತ್ತಿ), ಎಲೆಕ್ಟ್ರಿಷಿಯನ್ ಹಾಗೂ ಫಿಟ್ಟರ್ ವೃತ್ತಿಗಳಿಗೆ ತರಬೇತಿ ನೀಡಲಿದೆ.
ಕೆಆರ್ ನಗರ ತಾಲ್ಲೂಕಿನ ಸಾಲಿಗ್ರಾಮದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಫಿಟ್ಟರ್, ಐಟಿಇಎಸ್‌ಎಂ ಮತ್ತು ಎಂಆರ್‌ಎಸಿ ವೃತ್ತಿಗಳಲ್ಲಿ ತರಬೇತಿ ನೀಡಲಿದೆ. (ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)

ನಂಜನಗೂಡಿನಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಜೋಡಣೆ, ವಿದ್ಯುನ್ಮಾನ ದುರಸ್ತಿಗಾರ, ಸಿಒಇ (ಫ್ಯಾಬ್ರಿಕೇಷನ್, ಫಿಟ್ಟಿಂಗ್, ವೆಲ್ಡಿಂಗ್) ವೃತ್ತಿಗಳಿಗೆ ಆಸಕ್ತರು ಆನ್ ಲೈನ್ ವೆಬ್‌ಸೈಟ್ www.detkarnataka.org.in ಮೂಲಕ ಅರ್ಜಿ ಸಲ್ಲಿಸಬಹುದು.
www.emptrg.kar.nic.in ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪಿರಿಯಾಪಟ್ಟಣ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ದೂರವಾಣಿ ಸಂಖ್ಯೆ - 08 223-273155, ಸಾಲಿಗ್ರಾಮ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ದೂರವಾಣಿ ಸಂಖ್ಯೆ-08 223-283145, ನಂಜನಗೂಡು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ದೂರವಾಣಿ ಸಂಖ್ಯೆ-08 221-275887 ಸಂಪರ್ಕಿಸಬಹುದು. (ಕರ್ನಾಟಕ ವಾರ್ತೆ)












Click it and Unblock the Notifications