ಸ್ವಚ್ಛ ನಗರಿ ಪಟ್ಟಕ್ಕೇರಲು ಮೈಸೂರು ಮೇಯರ್ ರಿಂದ ಮಾಸ್ಟರ್ ಪ್ಲಾನ್
ಮೈಸೂರು, ನವೆಂಬರ್ 8: ಮೈಸೂರು ನಗರಕ್ಕೆ ಕಳೆದ ಬಾರಿ ಕೈ ತಪ್ಪಿದ ಸ್ವಚ್ಛನಗರಿ ಪಟ್ಟ ಬಾರಿ ನಂ.1ರ ಸ್ಥಾನಕ್ಕೇರಿಸಲೇಬೇಕು ಎಂದು ಪಣ ತೊಟ್ಟಿರುವ ಮೈಸೂರು ನಗರ ಪಾಲಿಕೆ ಆ ನಿಟ್ಟಿನಲ್ಲಿ ಈಗಲೇ ಕಾರ್ಯೋನ್ಮುಖವಾಗಿದೆ.
ಪೌರ ಕಾರ್ಮಿಕರನ್ನು ಬಳಸಿಕೊಂಡು ನಗರದಾದ್ಯಂತ ಪತೀ ದಿನ ಕಸ ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ಮೈಸೂರು ನಗರ ಸತತ ಎರಡು ಬಾರಿ ದೇಶ ದಲ್ಲಿಯೇ ನಂ.1 ಸ್ವಚ್ಛ ನಗರಿ ಎಂದು ಬಿರುದು ಪಡೆದು ಬೀಗಿತ್ತು. ಆದರೆ, ಕೆಲವು ತಪ್ಪುಗಳಿಂದ ಮೂರನೇ ಬಾರಿ ನಂ.1 ಸ್ಥಾನ ಸಿಗದೆ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳ ಬೇಕಾಯಿತು. ಹೀಗಾಗಿ ನಗರಪಾಲಿಕೆ ಆಯುಕ್ತ ಜಿ.ಜಗದೀಶ್ ಅವರು ಹಿಂದಿನ ತಪ್ಪುಗಳನ್ನು ಪಟ್ಟಿ ಮಾಡಿಟ್ಟುಕೊಂಡು ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ಮೂಲಕ ನಗರವನ್ನು ಮತ್ತೊಮ್ಮೆ ಸ್ವಚ್ಛತೆಯಲ್ಲಿ ನಂ.1 ಆಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಅವರ ಈ ಕಾರ್ಯಕ್ಕೆ ಬಹುಮುಖ್ಯವಾಗಿ ಪೌರ ಕಾರ್ಮಿಕರು ಸಾಥ್ ನೀಡುತ್ತಿದ್ದಾರೆ.

ಮುಂಜಾನೆ 5 ಗಂಟೆಗೇ ನಗರ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲಿ ರಸ್ತೆಗಿಳಿಯುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುವ ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ನಂತರ ಸಂಗ್ರಹಿಸಿದ ಕಸವನ್ನು ಒಂದೆಡೆ ಸೇರಿಸಿ ಘನ ತಾಜ್ಯ ನಿರ್ವಹಣಾ ಘಟಕಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವದ ಕೊರತೆ ನಗರದ ಅನೇಕ ಕಡೆಗಳಲ್ಲಿ ಕಾಣಸಿಗುತ್ತದೆ.
ಇದು ನಮ್ಮ ನಗರ, ನಮ್ಮ ಮನೆಗಳ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಜವಾಬ್ದಾರಿ ಇನ್ನೂ ಜನರಲ್ಲಿ ಮೂಡಿಲ್ಲ. ಪೌರ ಕಾರ್ಮಿಕರು ಕಸ ಸಂಗ್ರಹಣೆಗೆ ಮನೆಯ ಮುಂದೆಯೇ ಬಂದರೂ ಕಸ ನೀಡಲು ಸೋಮಾರಿತನ ತೋರುವ ಜನರು ತಾವು ಕಚೇರಿಗೆ ಅಥವಾ ಬೇರೆಲ್ಲಿಗಾದರೂ ತೆರಳುವ ಸಂದರ್ಭದಲ್ಲಿ ಸ್ಕೂಟರ್ ಅಥವಾ ಕಾರಿನಲ್ಲಿ ಕಸವನ್ನು ಹೊತ್ತೊಯ್ದು ರಸ್ತೆ ಬದಿಯಲ್ಲಿ ಎಸೆಯುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಇಂತಹ ಪ್ರವೃತ್ತಿಯನ್ನು ಬಿಟ್ಟು ಸ್ವಚ್ಛತೆಗೆ ಸ್ಪಂದಿಸಿ, ಸಹಕರಿಸಿದರೆ ಸ್ಪರ್ಧೆ ವೇಳೆ ಮೈಸೂರು ನಗರ ಮತ್ತಷ್ಟು ಹೆಚ್ಚು ಅಂಕಗಳನ್ನು ಗಳಿಸಬಹುದು ಇದು ನಗರಪಾಲಿಕೆ ಸದಸ್ಯರಿಂದಾಗಬಹುದು ಎಂಬುದು ಬಹುತೇಕ ಸಾರ್ವಜನಿಕರ ಅನಿಸಿಕೆ
ಸ್ವಚ್ಛತಾ ಆ್ಯಪ್ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ:
ನಗರದ ಅನೇಕ ಬಡಾವಣೆ ಗಳಲ್ಲಿನ ಜನರಿಗೆ ಸ್ವಚ್ಛತಾ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಬಳಸುವುದು ಹೇಗೆ ಎಂಬುದೇ ಬಹುತೇಕ ಜನರಿಗೆ ತಿಳಿದಿಲ್ಲ. ಈ ಸಂಬಂಧ ಸ್ಥಳೀಯ ಜನಪತಿನಿಧಿಗಳು ಆ್ಯಪ್ ಬಳಕೆ ಬಗ್ಗೆ ಹಾಗೂ ಅದರಿಂದಾಗುವ ಅನುಕೂಲಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದಲ್ಲಿ ಮತ್ತಷ್ಟು ಅಂಕಗಳನ್ನು ಪಡೆದುಕೊಳ್ಳಬಹುದು.
ಯುವ ಜನತೆ ಸ್ಪಂದಿಸಬೇಕಿದೆ:
ಸದಾ ಫೇಸ್‍ಬುಕ್, ವಾಟ್ಸಪ್ ಎಂದು ಅಂತರ್ಜಾಲ ದಲ್ಲಿ ಮುಳುಗುವ ಯುವಜನರಿಗೆ ಸ್ವಚ್ಛತಾ ಆ್ಯಪ್ ಬಗ್ಗೆ ನಿರಾಸಕ್ತಿ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಅವರು ಮನಸ್ಸು ಮಾಡಿದಲ್ಲಿ ಆ್ಯಪ್ ಬಳಸುವ ಮೂಲಕ ಸ್ವಚ್ಛತಾ ಸ್ಪರ್ಧೆಗೆ ತಮ್ಮ ಕೊಡುಗೆಯನ್ನು ನೀಡಬಹುದು. ತಮ್ಮ ಬಡಾವಣೆಯಲ್ಲಿ ಸಾರ್ವ ಜನಿಕರು ಕಸ ಎಸೆದು ಹೋಗುವ ಫೋಟೋ ಕ್ಲಿಕ್ಕಿಸಿ ಆ್ಯಪ್ ಮೂಲಕ ನಗರಪಾಲಿಕೆ ಅಧಿಕಾರಿ ಗಳ ಗಮನಕ್ಕೆ ತರಬೇಕು. ಆ ಮೂಲಕ ಆ್ಯಪ್ ಬಳಕೆಗೆ ಮುಂದಾಗಬೇಕಿದೆ ಎಂದು ಆಯುಕ್ತರು ಹೇಳಿದ್ದಾರೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications