ಮೈಸೂರು: ಮೃತಪಟ್ಟ ಹಿಂದೂ ಮಹಿಳೆಗೆ ಹೆಗಲು ಕೊಟ್ಟು ಸಾಮರಸ್ಯ ಮೆರೆದ ಮುಸ್ಲಿಮರು
ಮೈಸೂರು, ಏಪ್ರಿಲ್ 25: ರಾಜ್ಯದಲ್ಲಿ ಧರ್ಮ ಸಂಘರ್ಷ ಏರ್ಪಟ್ಟಿರುವ ನಡುವೆಯೇ ಹಿಂದೂ- ಮುಸ್ಲಿಮರ ನಡುವೆ ಸೌಹಾರ್ದ ಬಾಂಧವ್ಯ ವೃದ್ಧಿಸುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಮೃತಪಟ್ಟ ಹಿಂದೂ ಮಹಿಳೆ ಅಂತ್ಯಸಂಸ್ಕಾರದಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸುವ ಮೂಲಕ ಸಹಬಾಳ್ವೆ ಸಂದೇಶ ಸಾರಿದ್ದಾರೆ. ಮೈಸೂರಿನ ಗೌಸಿಯಾನಗರದ ನಿವಾಸಿ ಜಯಮ್ಮ (60) ಅನಾರೋಗ್ಯದಿಂದ ಶನಿವಾರ (ಏ.23) ಮೃತರಾಗಿದ್ದರು.
ಇವರಿಗೆ ಸೊಸೆ ಇಬ್ಬರು ಮಕ್ಕಳು ಬಿಟ್ಟರೆ ಬೇರೆ ಸಂಬಂಧಿಗಳಿರಲಿಲ್ಲ. ಈ ವೇಳೆ ಮನೆಯ ನೆರೆಹೊರೆಯ ಮುಸ್ಲಿಂ ಕುಟುಂಬಸ್ಥರೆಲ್ಲಾ ಸೇರಿ ಜಯಮ್ಮನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಜಯಮ್ಮನ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದವರು ಹೆಗಲು ಕೊಟ್ಟಿದ್ದು, ಅಷ್ಟೆ ಅಲ್ಲದೆ ಹಿಂದೂ ಸಂಪ್ರದಾಯದಂತೆ ಜಯಮ್ಮನ ಅಂತ್ಯಸಂಸ್ಕಾರ ಕೂಡ ನೆರವೇರಿಸಿದರು.

ಹಿಂದೂ ಧರ್ಮದ ಜಯಮ್ಮ ಅವರ ಕೊನೆಯ ಆಸೆಯಂತೆ ಮೈಸೂರಿನ ಗೌಸಿಯಾನಗರದ ಸ್ಥಳೀಯ ಮುಸ್ಲಿಂ ನಿವಾಸಿಗಳು ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಆಕೆಯ ಕುಟುಂಬವು 40 ವರ್ಷಗಳಿಂದ ಅಲ್ಲಿ ವಾಸಿಸುತ್ತಿದೆ ಮತ್ತು ಸಾವಿನ ಮುಂಚೆ ಜಯಮ್ಮ ಹಾಸಿಗೆ ಹಿಡಿದಿದ್ದಾಗ ತಮ್ಮ ಅಂತಿಮ ವಿಧಿಗಳನ್ನು ಮಾಡಲು ಮುಸ್ಲಿಮರನ್ನು ವಿನಂತಿಸಿದ್ದರು.












Click it and Unblock the Notifications