ಆ ಕೊಚ್ಚೆಗೆ ನಾನು ಕಲ್ಲು ಹಾಕಲ್ಲ: ಶಾಸಕ ಪ್ರದೀಪ್ ಈಶ್ವರ್‌ಗೆ ಪ್ರತಾಪ್ ಸಿಂಹ ತಿರುಗೇಟು
ಮೈಸೂರು, ಜನವರಿ 13: ನಾನು ಯಾವತ್ತೂ ನನ್ನ ಎದುರಾಳಿಯನ್ನು ನೋಡುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಮುಂದೆ ಯಾವ ಎದುರಾಳಿ ಹೆಸರು ನಡೆಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ಎದುರಾಳಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ಗೆ ನಮ್ಮ ಚಿಂತೆ ಯಾಕೆ. ಕಾಂಗ್ರೆಸ್‌ಗೆ ಊರ ಉಸಾಬರಿ ಯಾಕೆ? ತಮ್ಮ ಅಭ್ಯರ್ಥಿ ಯಾರು ಎಂಬುದನ್ನು ನೋಡಿಕೊಳ್ಳಲಿ. ಲೋಕಸಭೆಗೆ ಅಭ್ಯರ್ಥಿ ಗಳು ಇಲ್ಲದೆ ಮಂತ್ರಿಗಳ ನಿಲ್ಲಿಸುವ ದೈನಾಸಿ ಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

ಬಿಜೆಪಿ - ಜೆಡಿಎಸ್ ನಡುವೆ ಗೊಂದಲ ಇಲ್ಲ. ಈ ಕ್ಷೇತ್ರದಲ್ಲಿ ನನ್ನ ಪರ ಎರಡು ಪಕ್ಷದ ನಾಯಕರ ಆಶೀರ್ವಾದವಿದೆ. ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ಎದುರಾಳಿಯಾದರೆ ಒಳ್ಳೆಯದು. ಡಾ. ಯತೀಂದ್ರ ಸಿದ್ದರಾಮಯ್ಯ ಸನ್ ಆಫ್ಹ್ ಸಿದ್ದರಾಮಯ್ಯ ವರ್ಸಸ್ ಪತ್ರಕರ್ತ ಪ್ರತಾಪ್ ಸಿಂಹ ನಡುವೆ ಫೈಟ್ ನಡೆಯುತ್ತದೆ ಎಂದರು.
ರಾಮ ಜನ್ಮಭೂಮಿಗಾಗಿ ರಥಯಾತ್ರೆ ಮಾಡಿದವರು ಅಡ್ವಾಣಿ ಅವರು. ಕೋರ್ಟ್ ಹೋರಾಟ ಮಾಡಿದವರು ರವಿಶಂಕರ್ ಪ್ರಸಾದ್. ನಂತರ ದೇಶಾದ್ಯಂತ ಈ ಬಗ್ಗೆ ಅಭಿಪ್ರಾಯ ಮೂಡಿಸಿದವರು ಪ್ರಧಾನಿ ಮೋದಿ ಅವರು. ಅಡ್ವಾಣಿ ಅವರಿಂದ ಮೋದಿ ಅವರಿಗೆ ರಾಮಜನ್ಮ ಭೂಮಿ ವಿಚಾರದಲ್ಲಿ ಬಿಜೆಪಿ ಪಾತ್ರ ದೊಡ್ಡದಿದೆ.
ರಾಮ ಜನ್ಮ ಭೂಮಿ ವಿಚಾರದಲ್ಲಿ ಕಾಂಗ್ರೆಸ್‌ನವರದು ಯಾವ ಪಾತ್ರವೂ ಇಲ್ಲ. ಹೀಗಾಗಿ ಅವರಿಗೆ ಅಪರಾಧಿ ಪ್ರಜ್ಞೆ ಇದೆ. ಅಪರಾಧಿ ಪ್ರಜ್ಞೆ ಕಾರಣ ಅವರು ಉದ್ಘಾಟನೆಯಿಂದ ಹಿಂದೆ ಸರಿದಿದ್ದಾರೆ. ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್‌ನಾ ಪಾಪಾ ತೊಳೆದು ಕೊಳ್ಳಲು ಸಿದ್ದರಾಮಯ್ಯ ಅವರು ತಮ್ಮ ಶಿಷ್ಯರ ಜೊತೆ ಅಯೋಧ್ಯೆಗೆ ಹೋಗಿ ಬರಲಿ ಎಂದರು.
ನನ್ನ ತಮ್ಮನ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಸವಿಸ್ತಾರವಾಗಿ ಸತ್ಯ ಹೇಳಿದ್ದರು. ಈ ಕಾರಣ ಅವರಿಗೆ ಧನ್ಯವಾದ ಕೃತಜ್ಞತೆ ಸಲ್ಲಿಕೆ ಮಾಡಲು ಅವರ ಮನೆಗೆ ತೆರಳಿದ್ದೆ. ನಾನು ಎರಡು ಬಾರಿ ಬಿಜೆಪಿ ಅಭ್ಯರ್ಥಿ ಆದರೂ ನಾನು ಆಲ್ ಪಾರ್ಟಿ ಕ್ಯಾಟಿಡಿಟ್. ಮೋದಿ ಅವರು ಬಗ್ಗೆ ಪ್ರೀತಿ ಇರುವವರು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಅವರೆಲ್ಲಾ ನನಗೆ ಮತ ಹಾಕುತ್ತಿದ್ದರು ಎಂದರು.
ಕೊಚ್ಚೆಗೆ ನಾನು ಯಾವತ್ತೂ ಕಲ್ಲು ಹಾಕಲ್ಲ. ತಿಳಿಗೇಡಿಗಳು ಮಾತ್ರ ಕೊಚ್ಚೆಗೆ ಕಲ್ಲು ಹಾಕುತ್ತಾರೆ. ನಾನು ತಿಳಿಗೇಡಿಯಲ್ಲ. ನಾನು ಆ ಕೊಚ್ಚೆಗೆ ಕಲ್ಲು ಹಾಕಲ್ಲ ಎಂದು ಸಂಸದ ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ, ಅಯೋಗ್ಯ, 40-50 ವರ್ಷ ಅನುಭವ ಇರುವ ಸಿದ್ದರಾಮಯ್ಯ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡುತ್ತಾನೆ. ಪ್ರತಾಪ್ ಸಿಂಹ ಸಿದ್ದರಾಮಯ್ಯ ಬಗ್ಗೆ ನಾಲಿಗೆ ಬಿಗಿಹಿಡಿದು ಮಾತಾಡಬೇಕು ಎನ್ನುವ ಶಾಸಕ ಪ್ರದೀಪ್ ಈಶ್ವರ್‌ಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.












Click it and Unblock the Notifications