ಮೈಸೂರು: ಮಗನ ಸಾವಿನ ಸುದ್ದಿ ಕೇಳಿ ಪ್ರಾಣ ಬಿಟ್ಟ ತಾಯಿ
ಮೈಸೂರು, ಜುಲೈ 30 : ಮಗನ ಸಾವಿನ ಸುದ್ದಿ ಕೇಳಿದ ತಾಯಿ ಮಲಗಿದ್ದಲ್ಲೇ ಜೀವ ಬಿಟ್ಟ ಹೃದಯ ಕಲಕುವ ಘಟನೆ ಮೈಸೂರಿನಲ್ಲಿ ಇಂದು ನಡೆದಿದೆ.
ಶಾಂತಮ್ಮಣ್ಣಿ(72) ಹಾಗೂ ದಿಲೀಪ್(49) ಮೃತ ದುರ್ದೈವಿಗಳು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಶಾಂತಮ್ಮಣ್ಣಿ ಹಾಗೂ ದಿಲೀಪ್ ಇಬ್ಬರು ಬಳಲುತ್ತಿದ್ದರು. ತಾಯಿ ಶಾಂತಮ್ಮಣ್ಣಿ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರೆ ಮಗ ದಿಲೀಪ್ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

ಅನಾರೋಗ್ಯದಿಂದ ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಗ ದಿಲೀಪ್ ಮೃತಪಟ್ಟಿದ್ದಾರೆ. ಇತ್ತ ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವನ್ನಪ್ಪಿದ್ದಾರೆ. ಸದ್ಯ ಇಬ್ಬರ ಅಂತ್ಯಕ್ರಿಯೆ ಒಟ್ಟಿಗೆ ನಡೆಸಲು ನಿರ್ಧರಿಸಿದ್ದು, ವಿದ್ಯಾರಣ್ಯಪುರಂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications