Get Updates
Get notified of breaking news, exclusive insights, and must-see stories!

ಸೊಳ್ಳೆ ಕಾಟಕ್ಕೆ ತತ್ತರಿಸಿದ ಪೊಲೀಸರು : 6 ಮಂದಿಗೆ ತೀವ್ರ ಜ್ವರ

ಮೈಸೂರು, ನವೆಂಬರ್ 15 : ಕಳೆದ ಮೂರು ತಿಂಗಳಿಂದ ಲಕ್ಷ್ಮೀಪುರಂ ಪೊಲೀಸ್ ಠಾಣೆ ಶೌಚಾಲಯದ ಯುಜಿಡಿ ಪೈಪ್ ಒಡೆದು ನೀರು ಸೋರಿಕೆಯಿಂದಾಗಿ ಠಾಣೆಯಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಈ ಹಿನ್ನೆಲೆ ಇನ್ಸ್ ಪೆಕ್ಟರ್ ಸೇರಿದಂತೆ ಆರು ಮಂದಿ ಪೊಲೀಸರಿಗೆ ತೀವ್ರತರದ ಜ್ವರ ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ಸ್ ಪೆಕ್ಟರ್ ಹಾಗು ಎಸ್ಐಗಳಾದ ಪ್ರಭುದೇವ್, ಮರಿಸ್ವಾಮಿ , ಪ್ರಸನ್ನ ಮೂರ್ತಿ, ಹೆಡ್ ಕಾನ್ಸ್ ಸ್ಟೆ ಸ್ಟೆಬಲ್ ಬಸವರಾಜ್ ಅರಸ್ , ವನಜಾಕ್ಷಿ ಅವರುಗಳು ವಿಪರೀತ ಜ್ವರದಿಂದ ಬಳಲುತ್ತಿದ್ದು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

mosquito problem for police in Mysuru police station.

ಠಾಣೆಯ ಹಿಂಭಾಗವಿರುವ ಶೌಚಾಲಯ ಯುಜಿಡಿ ಪೈಪ್ ಒಡೆದು ನೀರು ಹೊರಬರುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅಲ್ಲದೆ ರಸ್ತೆ ಪಕ್ಕದಲ್ಲಿ ಶೌಚಾಲಯವಿರುವುದರಿಂದ ಈ ಮಾರ್ಗದಲ್ಲಿ ಓಡಾಡುವ ವಾಹನ ಸವಾರರು ಮತ್ತು ಸಾರ್ವಜನಿಕರಿಗೂ ಇದರಿಂದ ತೊಂದರೆಯುಂಟಾಗುತ್ತಿದೆ.

ಶೌಚಾಲಯ ಸರಿಪಡಿಸುವಂತೆ ಮೈಸೂರು ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಠಾಣೆಯಲ್ಲಿ ಪ್ರತ್ಯೇಕ ಮಹಿಳಾ ಶೌಚಾಲಯವಿಲ್ಲದ ಕಾರಣ, ಇಲ್ಲಿ ಕೆಲಸ ಮಾಡುವ ಮಹಿಳಾ ಪೊಲೀಸರು ಪುರುಷ ಸಿಬ್ಬಂದಿ ಬಳಸುವ ಶೌಚ ಗೃಹವನ್ನೇ ಬಳಸಬೇಕಾಗಿದೆ.

ಇದರಿಂದ ಮಹಿಳಾ ಸಿಬ್ಬಂದಿ ಸಾಕಷ್ಟು ಮುಜುಗರ ಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಠಾಣೆಯಲ್ಲಿ ಹದಗೆಟ್ಟಿರುವ ಶೌಚಾಲಯವನ್ನು ದುರಸ್ತಿ ಪಡಿಸುವಂತೆ ಕಳಕಳಿಯ ಮನವಿ ಮಾಡಿದ್ದಾರೆ.

mosquito problem for police in Mysuru police station.

ಇನ್ನು ಈ ಕುರಿತಾಗಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ , ಲಕ್ಷ್ಮೀಪುರಂ ಠಾಣೆಯಲ್ಲಿರುವ ಶೌಚಾಲಯ ಹದಗೆಟ್ಟಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದು ಶೌಚಾಲಯ ಸರಿಪಡಿಸುವ ಬಗ್ಗೆ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ .

ಮಕ್ಕಳ ಹುಟ್ಟುಹಬ್ಬ ರಜೆಗೆ ಪೊಲೀಸರಿಂದ ಅಸಮಾಧಾನ :
ಪೊಲೀಸರ ಮಕ್ಕಳ ಹುಟ್ಟುಹಬ್ಬ ವಿವಾಹ ಮಹೋತ್ಸವಕ್ಕೆ ನಗರ ಪೊಲೀಸ್ ಆಯುಕ್ತರು ಕಡ್ಡಾಯ ರಜೆ ಘೋಷಣೆ ಮಾಡಿರುವುದು ಖುಷಿಯ ವಿಚಾರವಾದರೂ ವಾರದ ರಜೆ ನೀಡದಿರುವ ಬಗ್ಗೆ ಪೊಲೀಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ .

ಸಿಸಿಬಿ, ಸಿ ಆರ್ ಬಿ , ನಗರ ನಿಯಂತ್ರಣ ಕೊಠಡಿ, ಮಂಡಕಳ್ಳಿ ವಿಮಾನ ನಿಲ್ದಾಣ ಹಾಗೂ ಬೆರಳ ಮುದ್ರೆ ಘಟಕದ ಸಿಬ್ಬಂದಿ ನಮಗೆ ಸಿಗಬೇಕಾದ ಸವಲತ್ತುಗಳನ್ನು ಮೊದಲು ನೀಡಲಿ. ಈ ತರಹ ಸುತ್ತೋಲೆಗಳಿಂದ ನಮ್ಮ ಮಾನಸಿಕ ವೇದನೆಗಳು ಕಡಿಮೆ ಆಗುವುದಿಲ್ಲ ಎಂದು ಪೊಲೀಸ್ ವಲಯದಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.

ಹಿಂದಿನ ಗೃಹ ಮಂತ್ರಿಗಳಾಗಿದ್ದ ಪರಮೇಶ್ವರ್ ಅವರು ಪೊಲೀಸರಿಗೆ ಕಡ್ಡಾಯ ವಾರದ ರಜೆ ನೀಡಬೇಕೆಂದು ಸುತ್ತೋಲೆ ಹೊರಡಿಸಿದ್ದರು. ಈ ಆದೇಶ ಒಂದೆರಡು ತಿಂಗಳು ಮಾತ್ರ ಅನುಷ್ಠಾನಕ್ಕೆ ಬಂತು. ನಂತರ ಸುತ್ತೋಲೆಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರದ ರಜೆ ದಿನವೂ ಕೆಲಸ ಮಾಡಿದರೆ ಒಂದು ದಿನಕ್ಕೆ ಕೇವಲ ಇನ್ನೂರು ರೂಪಾಯಿ ನೀಡುತ್ತಿದ್ದಾರೆ. ನಮ್ಮ ಬೇಡಿಕೆಯಂತೆ ಇದರ ಮೊತ್ತವನ್ನಾದರೂ ಏರಿಸುವಂತೆ ಅಧಿಕಾರಿಗಳಲ್ಲಿ ಸಿಬ್ಬಂದಿ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+