• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ಒಂದು ವಾರದಲ್ಲಿ 100ಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆ

By ಮೈಸೂರು ಪ್ರತಿನಿಧಿ
|

ಮೈಸೂರು, ಮಾರ್ಚ್ 31: ಮೈಸೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 100ಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆಯಾಗುತ್ತಿವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಾವು ಟೆಸ್ಟಿಂಗ್ ಪ್ರಮಾಣ ಹೆಚ್ಚು ಮಾಡಿದ್ದೇವೆ, 3 ಸಾವಿರ ಟೆಸ್ಟ್ ಗುರಿ ಇದೆ. ಆದರೆ ನಾವು 5 ಸಾವಿರಕ್ಕೂ ಹೆಚ್ಚು ಕೋವಿಡ್ ಟೆಸ್ಟ್ ಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಮೈಸೂರಿನ ಬೆಟ್ಟದಪುರ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಬಗ್ಗೆ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ಹೆಚ್ಚು ಟೆಸ್ಟ್ ಮಾಡುವುದರಿಂದ ಹೆಚ್ಚು ಸಂಖ್ಯೆ ಕೋವಿಡ್ ಕೇಸ್ ಬರಬಹುದು. ಆದರೆ ಪಾಸಿಟಿವ್ ಶೇ.1.2 ಪಾಸಿಟಿವ್ ರೇಟ್ ಇದೆ. ಸ್ಟೇಟ್ ಲೆವಲ್ ಗಿಂತ ಕಡಿಮೆ ಇದೆ. ಪಾಸಿಟಿವ್ ಸಿಕ್ಕವರು ಅವರ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ, ಆಗ ನಾವು ಕೊರೊನಾ ಹರಡುವಿಕೆ ಕಡಮೆ ಮಾಡಬಹುದು ಎಂದರು.

ಹಳ್ಳಿಗಳಿಗಿಂತ ನಗರದಲ್ಲಿ ಹೆಚ್ಚು ಕೇಸ್

ಇನ್ನು ಶಾಲಾ ಮಕ್ಕಳಲ್ಲೂ ಪಾಸಿಟಿವ್ ಪ್ರಕರಣ ಬಂದಿದ್ದು, ನಮಗೆ ಹಳ್ಳಿಗಳಿಗಿಂತ ನಗರದಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ಸಿಗುತ್ತಿವೆ. ಶಾಲಾ ಮಕ್ಕಳು ಒಟ್ಟಿಗೆ ಗುಂಪುಗೂಡುವುದರಿಂದ ಕೊರೊನಾ ಹರಡಿದೆ. ನಮ್ಮ ಮೇಟಗಳ್ಳಿ ಕೋವಿಡ್ ಸೆಂಟರ್ ಕೂಡ ಓಪನ್‌ ಮಾಡಿದ್ದೇವೆ. ಬೆಡ್ ಗಳ ಕೊರತೆಯಾಗಲಿ, ಆಕ್ಸಿಜನ್ ಕೊರತೆಯಾಗಲಿ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಾತ್ರೆಗಳ ಆಚರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಾವು ಯಾರಿಗೂ ಪರ್ಮಿಷನ್ ಕೊಡುತ್ತಿಲ್ಲ. ನಮ್ಮ ಗಮನಕ್ಕೆ ಬಂದವುಗಳನ್ನು ಕ್ಲೋಸ್ ಮಾಡುತ್ತಿದ್ದೇವೆ. ಈ ಬಗ್ಗೆ ಗಮನ ಹರಿಸುತ್ತೇನೆ. ನಮಗಿಂತ ಜನರಲ್ಲಿ ಇದು ಮನವರಿಕೆ ಆಗಬೇಕು.ಒಂದು ವರ್ಷ ನಾವು ಇದರಿಂದ ತೊಂದರೆ ಅನುಭವಿಸಿದ್ದೇವೆ. ಜನರು ಸರ್ಕಾರದ ಮಾರ್ಗಸೂಚಿ ಅನುಸರಿಸಿ ಎಂದು ಮನವಿ ಮಾಡಿದರು.

English summary
Mysuru DC Rohini Sindhuri said more than 100 coronavirus cases have been detected in Mysuru district in the last one week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X