• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅರಮನೆಯಲ್ಲಿ ಮನ್ನಾರ್ ಕೃಷ್ಣ ಜಯಂತಿ; ಕೃಷ್ಣ ವೇಷದಲ್ಲಿ ಆದ್ಯವೀರ್ ಒಡೆಯರ್

By ಮೈಸೂರು ಪ್ರತಿನಿಧಿ
|

ಮೈಸೂರು, ಸೆಪ್ಟೆಂಬರ್ 10: ಮನ್ನಾರ್ ಶ್ರೀ ಕೃಷ್ಣ ಜಯಂತಿ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಕುಟುಂಬಸ್ಥರು ನಿನ್ನೆ ಕೃಷ್ಣ ಜಯಂತಿ ಆಚರಣೆ ಮಾಡಿದ್ದಾರೆ.

ಮೈಸೂರು ಅರಮನೆಯಲ್ಲಿ ಮನ್ನಾರ್ ಶ್ರೀಕೃಷ್ಣ ಜಯಂತಿ ಆಚರಣೆಯು ಶಾಸ್ತ್ರೋಕ್ತವಾಗಿ ನೆರವೇರಿತು. ಈ ವೇಳೆ ರಾಜವಂಶಸ್ಥರಾದ ಯದುವೀರ್ ಹಾಗೂ ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್ ಒಡೆಯರ್ ಅವರಿಗೆ ಶ್ರೀ ಕೃಷ್ಣನ ವೇಷ ತೊಡಿಸಿದ್ದು, ಶ್ರೀಕೃಷ್ಣನ ವೇಷದಲ್ಲಿ ಆದ್ಯವೀರ್ ಕಂಗೊಳಿಸುತ್ತಿದ್ದರು. ಸಂಭ್ರಮದಿಂದ ತಮ್ಮ ಅಜ್ಜಿ ಪ್ರಮೋದಾದೇವಿ ಒಡೆಯರ್ ಅವರ ಜೊತೆ ಸೇರಿ ಗೋವಿಗೆ ಫಲಾಹಾರ ನೀಡಿದರು.

ಉಡುಪಿಯಲ್ಲಿ ಸೆ.10 ರಿಂದ ಕೃಷ್ಣ ಜನ್ಮಾಷ್ಟಮಿ: ಭಕ್ತರಿಗೆ ನೋ ಎಂಟ್ರಿ

ಮನ್ನಾರ್ ಶ್ರೀಕೃಷ್ಣ ಜಯಂತಿ ಆಚರಣೆ ಬಗ್ಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಮನ್ನಾರ್ ಶ್ರೀಕೃಷ್ಣ ಜಯಂತಿಯನ್ನು ಮೈಸೂರು ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ಆಚರಿಸಲಾಯಿತು. ನಮ್ಮೆಲ್ಲರಿಗೆ ಶ್ರೀಕೃಷ್ಣ ಸನ್ಮಂಗಳವನ್ನುಂಟು ಮಾಡಲಿ ಎಂದು ಶ್ರೀ ಪ್ರಸನ್ನ ಕೃಷ್ಣಸ್ವಾಮಿಯವರಲ್ಲಿ ಪ್ರಾರ್ಥಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

English summary
Mannar krishna janmastami celebrated at mysuru palace. Adyaveer wadeyar was in krishna atire
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X