ಮಹಾರಾಷ್ಟ್ರ ಮೈತ್ರಿ ಸರ್ಕಾರದ ಬಗ್ಗೆ ದೇವೇಗೌಡ ಭವಿಷ್ಯ
Recommended Video
ಮೈಸೂರು, ನವೆಂಬರ್ 27: ಮಹಾರಾಷ್ಟ್ರದ ರಾಜಕೀಯದ ಬಗ್ಗೆ ಮಾತನಾಡಿರುವ ದೇವೇಗೌಡರು, ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, 'ಮಹಾರಾಷ್ಟ್ರದಲ್ಲಿ ರಚನೆ ಆಗುತ್ತಿರುವ ಎನ್‌ಸಿಪಿ-ಶಿವಸೇನಾ-ಕಾಂಗ್ರೆಸ್ ಮೈತ್ರಿ ಸರ್ಕಾರ ಐದು ವರ್ಷದ ಅವಧಿ ಪೂರೈಸಿದರೆ ದೇಶದಲ್ಲಿ ಹೊಸ ರಾಜಕೀಯ ಅಲೆ ಬೀಸಲು ಪ್ರಾರಂಭಿಸುತ್ತದೆ' ಎಂದು ಭವಿಷ್ಯ ನುಡಿದಿದ್ದಾರೆ.
'ಎನ್‌ಸಿಪಿ-ಕಾಂಗ್ರೆಸ್-ಶಿವಸೇನೆ ಒಂದಾಗುತ್ತವೆ ಎಂದು ಯಾರಾದರೂ ಊಹೆ ಮಾಡಿದ್ದರಾ? ಈಗ ರಾಜಕೀಯ ಪರಿಸ್ಥಿತಿಗಳು ಬದಲಾಗುತ್ತಿವೆ, ಕೇಂದ್ರದಲ್ಲಿ ತೆಗೆದುಕೊಳ್ಳುತ್ತಿರುವ ಏಕಮೇವಸ್ವಾಮ್ಯ ನಿರ್ಣಯಗಳಿಂದ ಜನರು ರೋಸಿ ಹೋಗಿದ್ದಾರೆ' ಎಂದು ದೇವೇಗೌಡ ಹೇಳಿದರು.

'ಐಟಿ, ಇಡಿ ಸಂಸ್ಥೆಗಳನ್ನು ಇಟ್ಟುಕೊಂಡು ಬೇರೆ ಪಕ್ಷದ ನಾಯಕರನ್ನು ಬೆದರಿಸುವ, ನಿಯಂತ್ರಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಆದರೆ ಅವರ ಪಕ್ಷದ ಯಾವ ನಾಯಕರ ಮೇಲೂ ಐಟಿ, ಇಡಿ ದಾಳಿ ಆಗಿಲ್ಲ, ಜನರು ಇದನ್ನೆಲ್ಲಾ ಗಮನಿಸುತ್ತಿದ್ದಾರೆ' ಎಂದು ದೇವೇಗೌಡ ಹೇಳಿದರು.
ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಕಾಂಗ್ರೆಸ್-ಶಿವಸೇನಾ ಪಕ್ಷಗಳು ಮೈತ್ರಿ ಸರ್ಕಾರ ರಚಿಸುತ್ತಿದ್ದು, ನಾಳೆ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.












Click it and Unblock the Notifications