ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗರಿಗಿಲ್ಲ ಸರ್ಕಾರದ ಮಡಿಲು ಕಿಟ್ ಭಾಗ್ಯ

By Yashaswini
|
Google Oneindia Kannada News

ಮೈಸೂರು, ಅಕ್ಟೋಬರ್ 23 : ರಾಜ್ಯ ಸರ್ಕಾರವು ಬಾಣಂತಿ ಹಾಗೂ ನವಜಾತ ಶಿಶುವಿನ ಸುರಕ್ಷೆಗಾಗಿ ಜಾರಿಗೊಳಿಸಿರುವ ಮಡಿಲು ಯೋಜನೆಯು ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿದೆ. ಹೌದು, ಕಳೆದ ಏಪ್ರಿಲ್ ನಿಂದ ಈವರೆಗೆ ಬಾಣಂತಿಯರಿಗೆ ಕಿಟ್ಗಳ ವಿತರಣೆ ಸಮರ್ಪಕವಾಗಿ ನಡೆದೆಯೇ ಇಲ್ಲ.

ಗರ್ಭಿಣಿಯರಿಗೆ, ತಾಯಂದಿರಿಗೆ ಬಿಸಿಯೂಟ ಯೋಜನೆಗರ್ಭಿಣಿಯರಿಗೆ, ತಾಯಂದಿರಿಗೆ ಬಿಸಿಯೂಟ ಯೋಜನೆ

2008ರಿಂದ ಜಾರಿಗೊಂಡಿರುವ ಈ ಯೋಜನೆಯು ಆರಂಭದಲ್ಲಿ ಪರಿಣಾಮಕಾರಿಯಾಗಿಯೇ ಜಾರಿಗೊಂಡಿತ್ತು. ಬಡ ಮಹಿಳೆಯರು ಇದರಿಂದ ಲಾಭವನ್ನು ಪಡೆದಿದ್ದರು. ಆದರೆ ಕಳೆದ ಏಪ್ರಿಲ್ ನಿಂದ ಸುಮಾರು 7 ಸಾವಿರ ಬಾಣಂತಿಯರಿಗೆ ಕಿಟ್ ಗಳು ಸಿಕ್ಕಿಲ್ಲ. ಸರ್ಕಾರದಿಂದ ಪೂರೈಕೆ ನಿಂತಿರುವ ಕಾರಣ ಇಲ್ಲಿನ ಸ್ಥಳೀಯ ಸಂಸ್ಥೆಗಳು ಅಸಹಾಯಕವಾಗಿದೆ.

Madilu kit distribution is in a very slow process in Mysuru

ಕಿಟ್ ನಲ್ಲಿ ಏನಿದೆ..?
ಮಡಿಲು ಯೋಜನೆಯ ಕಿಟ್ ನಲ್ಲಿ ಬಾಣಂತಿ ಹಾಗೂ ಮಗುವಿಗೆ ಒಟ್ಟು 19 ಅನುಕೂಲಕಾರಿ ಸಾಮಗ್ರಿಗಳನ್ನು ಕೊಡುತ್ತಾರೆ. ಬಾಣಂತಿಯರಿಗೆ ಬಾಚಣಿಗೆ, ಸೋಪು, ಬಟ್ಟೆ, ಜಮಖಾನ, ಹೊದಿಕೆ, ವಸ್ತ್ರ ಹಾಗೂ ಮಗುವಿಗೆ ಬಟ್ಟೆ, ಟೋಪಿ, ಸಾಕ್ಸ್, ಬೇಬಿ ಸೋಪ್, ಬೇಬಿ ಆಯಿಲ್, ಸೊಳ್ಳೆ ಪರದೆ ಇತ್ಯಾದಿ ಪರಿಕರಗಳು ಸಿಗುತ್ತದೆ.

ಬಿಪಿಎಲ್ ಕಾರ್ಡ್ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿರುವ ಮೊದಲ ಹಾಗೂ ಎರಡನೇ ಬಾರಿಯ ಬಾಣಂತನಕ್ಕೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ . 2017 -18ನೇ ಸಾಲಿನಲ್ಲಿ ದಾಸ್ತಾನು ಸಿಕ್ಕಿಲ್ಲ. ಇದೇ ಕಾರಣದಿಂದ ಹಿಂದಿನ ವರ್ಷ ಸಿಕ್ಕಿದ್ದ ಕಿಟ್ ಗಳನ್ನಷ್ಟೇ ಈ ವರ್ಷ ವಿತರಣೆ ಮಾಡಲಾಗಿದ್ದು ಈಗ ದಾಸ್ತಾನು ಖಾಲಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ ತಿಂಗಳಿಗೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹೆರಿಗೆಗಳು ಆಗುತ್ತಿವೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ 1200 ಹೆರಿಗೆಗಳು ಆಗುತ್ತಿವೆ. ಈ ಪೈಕಿ ಬಡತನದ ರೇಖೆಗಿಂತ ಕೆಳಗಿರುವವರು 1500ಕ್ಕೂ ಹೆಚ್ಚು ಬಾಣಂತಿಯರು ಇದ್ದಾರೆ. ಈ ರೀತಿ ಐದು ತಿಂಗಳಿಂದ ಇಷ್ಟು ಮಂದಿಗೆ ಕಿಟ್ ಸಿಗದೆ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಸುಮಾರು 7 ಸಾವಿರ ಬಾಣಂತಿಯರಿಗೆ ಕಿಟ್ ಗಳು ಸಿಕ್ಕಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದಾಸ್ತಾನು ಪೂರೈಕೆ ಶುರು ಮಾಡಿದ್ದಲ್ಲಿ, ಈ ಎಲ್ಲ ಫಲಾನುಭವಿಗಳಿಗೆ ಕಿಟ್ ನೀಡುವುದನ್ನು ಆದ್ಯತೆಯ ಮೇಲೆ ಮಾಡಬಹುದು ಎಂಬುದು ಅಧಿಕಾರಿಗಳ ಆಶಯ.

ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಕೇವಲ ಜಿಲ್ಲೆಯ ಗರ್ಭಿಣಿಯರು ಮಾತ್ರ ಹೆರಿಗೆಗೆ ದಾಖಲಾಗುತ್ತಿಲ್ಲ. ಇಲ್ಲಿ ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಗರ್ಭಿಣಿಯರು ಸೇರುತ್ತಿದ್ದಾರೆ. ಹಾಗಾಗಿ ಹೆರಿಗೆಯ ನಂತರ ಬಡತನದ ರೇಖೆಗಿಂತ ಕೆಳಗಿರುವವರು ಮಡಿಲು ಕಿಟ್ ಗಳನ್ನು ಸಹಜವಾಗಿಯೇ ಪಡೆದುಕೊಳ್ಳಬೇಕಾಗುತ್ತದೆ. ಈ ರೀತಿ ಬಾಣಂತಿಯರ ಸಂಖ್ಯೆ ಮೈಸೂರಿನಲ್ಲಿ ಹೆಚ್ಚಿರುವ ಕಾರಣ ಮಡಿಲು ಕಿಟ್ ಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕಷ್ಟವಾಗುತ್ತಿದೆ. ಒಟ್ಟಾರೆ ಸರಕಾರದ ಇಂತಹ ಯೋಜನೆಗಳು ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗದೇ ಕೃತಿಯಾಗಬೇಕು. ಅವಶ್ಯಕತೆ ಇದ್ದವರಿಗೆ ಅದು ಲಭಿಸುವಂತೆ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.

English summary
Process of Distribution of Madilu kits to needy is become very slow in Mysuru. The people who actually need the kit are not recieving it in proper time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X