ಡಿ.22ರಿಂದ ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವ, ಪ್ರವಾಸಿಗರನ್ನು ಸೆಳೆಯಲಿವೆ 4 ಲಕ್ಷ ಹೂಗಳು
ಮೈಸೂರು, ಡಿಸೆಂಬರ್ 19: ವರ್ಷಾಂತ್ಯದಲ್ಲಿ ಪ್ರವಾಸಿಗರನ್ನು ಮೈಸೂರಿಗೆ ಸೆಳೆಯುವ ಉದ್ದೇಶದಿಂದ ಡಿ.22ರಿಂದ ಜ.1ರವರೆಗೆ ಮಾಗಿ ಉತ್ಸವವನ್ನು ಆಯೋಜಿಸಲು ಅರಮನೆ ಮಂಡಳಿ ಸಿದ್ಧತೆ ಕೈಗೊಂಡಿದೆ.
ಅರಮನೆ ಆವರಣದಲ್ಲಿ ಲಪುಷ್ಪ ಪ್ರದರ್ಶನ, ಬೊಂಬೆಗಳ ಪ್ರದರ್ಶನ, ಸಾಂಸ್ಕೃತಿಕ ಕಾರ‌್ಯಕ್ರಮ ಹಾಗೂ ಛಾಯಾಚಿತ್ರ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ‌್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮಾಗಿ ಉತ್ಸವದಲ್ಲಿ 4 ಲಕ್ಷ ಹೂಗಳು ಪ್ರವಾಸಿಗರನ್ನು ಸೆಳೆಯಲಿವೆ.

ಡಿ. 25ರಂದು ಕ್ರಿಸ್‌ಮಸ್ ಹಾಗೂ ಜ. 1ರಂದು ಹೊಸ ವರ್ಷ ಇರುವುದರಿಂದ ಮಾಗಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಪ್ರವಾಸಿಗರು ವಿದ್ಯುತ್ ದೀಪಾಲಂಕಾರ ಗಳಿಂದ ಅರಮನೆ ಕಣ್ತುಂಬಿಕೊಳ್ಳ ಬಹುದು. ಜತೆಗೆ ತ್ರಿಡಿ ಮ್ಯಾಪಿಂಗ್ ಕೂಡ ಇರಲಿದೆ.
ಡಿ. 22ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡುವರು. ಅಂದು 500 ಮಂದಿಗೆ ಅಲೋವೆರಾ, ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಹಾಗೂ ಇತರ ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೀಡಲಾಗುತ್ತಿದೆ.
ಡಿ.23ರಂದು ಸಂಜೆ 5.45ರಿಂದ 6.30ರವರೆಗೆ ಹನುಮಂತರಾಜು ಅವರಿಂದ ಲಯ-ನಾದ ತರಂಗ ಸಂಗೀತ ಮಿಲನ, 6.30ರಿಂದ 7.30ರವರೆಗೆ ಕಿಶನ್ ಬಿಳಿಗಲಿ ದ ಅಕಾಡೆಮಿ ಆ್ ಡ್ಯಾನ್ಸ್ ತಂಡದಿಂದ ನೃತ್ಯ, 7.45ರಿಂದ 9.45ರವರೆಗೆ ಹಿನ್ನೆಲೆ ಗಾಯಕ ಏಕಂಬರಂ ಲಕ್ಷ್ಮೀನಾರಾಯಣ್ ಅವರಿಂದ ಸಂಗೀತ ರಸ ಸಂಜೆ.
ಡಿ.24ರಂದು 5.45ರಿಂದ 6.30ರವರೆಗೆ ರೆನ್ಸಿ ಎನ್.ಯೋಗೇಶ್ ತಂಡದಿಂದ ಕರಾಟೆ ಇಂಡಿಯಾ ಸಮರ ಕಲೆ ಪ್ರದರ್ಶನ, 6.30ರಿಂದ 7.15ರವರೆಗೆ ಹೇಮಲತಾ ಕುಮಾರಸ್ವಾಮಿ ತಂಡದಿಂದ ಸುಗಮ ಸಂಗೀತ, 7ರಿಂದ 9.30ರವರೆಗೆ ಗಾಯಕರಾದ ಹೇಮಂತ್, ಶಮಿತ ಮಲ್ನಾಡ್, ಪೃಥ್ವಿ ಭಟ್, ಅಶ್ವಿನ್ ಶರ್ಮ, ಅಂಕಿತ ಕುಂಡು ತಂಡದಿಂದ ಸಂಗೀತಯಾನ ಕಾರ್ಯಕ್ರಮ ಜರುಗಲಿದೆ.
ಡಿ.25ರಂದು ಸಂಜೆ 6ರಿಂದ 7ರವರೆಗೆ ನಾಗಲಕ್ಷ್ಮೀ ತಂಡದಿಂದ ನೃತ್ಯ, 7ರಿಂದ 8ರವರೆಗೆ ವಿದ್ಯಾಭೂಷಣ್ ಮತ್ತು ರಘುಪತಿ ಭಟ್ ಅವರಿಂದ ಕುಂಚಗಾಯನ, 8ರಿಂದ 10 ಗಂಟೆವರೆಗೆ ಗಾಯಕಿ ಎಂ.ಡಿ.ಪಲ್ಲವಿ ತಂಡದಿಂದ ಸುಗಮ ಸಂಗೀತ ಗಾಯನ ಇರಲಿದೆ. ಡಿ.31ರಂದು ರಾತ್ರಿ 11ರಿಂದ 12ರವರೆಗೆ ಪೊಲೀಸ್ ಬ್ಯಾಂಡ್ ವಾದ್ಯ ಸಂಗೀತ ಇರಲಿದೆ. ನಂತರ ರಾತ್ರಿ 12ರಿಂದ 12.15ರವರೆಗೆ ಹಸಿರು ಪಟಾಕಿಯ ಬಾಣ ಬಿರುಸುಗಳಿಂದ ಹೊಸ ವರ್ಷವನ್ನು ಸ್ವಾಗತಿಸಲಾಗುವುದು.
ಧ್ವನಿ ಬೆಳಕು ತಾತ್ಕಾಲಿಕ ರದ್ದು:
ಫಲಪುಷ್ಪ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ‌್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಿದ್ಧತೆ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಡಿ. 18ರಿಂದ ಜ. 4ರವರೆಗೆ ಮೈಸೂರು ಅರಮನೆ ಆವರಣದಲ್ಲಿ ಸಂಜೆ ಸಮಯದಲ್ಲಿ ನಡೆಯುತ್ತಿದ್ದ ಧ್ವನಿ ಮತ್ತು ಬೆಳಕು ಕಾರ‌್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications