ದಸರಾ ಆನೆ ದ್ರೋಣ ಸಾವಿಗೆ ಕಂಬನಿ ಮಿಡಿದ ಗಣ್ಯರು

ಮೈಸೂರು, ಏಪ್ರಿಲ್ 26 : ಮೈಸೂರು ದಸರಾ ಆನೆ ದ್ರೋಣ ಆನೆಯ ಸಾವಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ನೀರು ಕುಡಿಯುವಾಗ ಕುಸಿದು ಬಿದ್ದು, ದ್ರೋಣ ಆನೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿತ್ತು.

ಹುಣಸೂರು ತಾಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ದ್ರೋಣ (39) ನೀರು ಕುಡಿಯುವಾಗಿ ಬಿದ್ದು ಮೃತಪಟ್ಟಿದೆ. ಹೃದಯಾಘಾತದಿಂದಾಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ದಸರಾ ಆನೆಗಳ ಬಳಗದಲ್ಲಿ ದ್ರೋಣ ಎಂಬ ಆನೆ 18 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ದಾಖಲೆ ಮಾಡಿತ್ತು. 1998ರಲ್ಲಿ ವಿದ್ಯುತ್ ತಂತಿ ತಗುಲಿ ಅದು ಮೃತಪಟ್ಟಿತ್ತು.

Dasara elephant

ಬಳಿಕ ಮತ್ತೊಂದು ಕಿರಿಯ ಆನೆಗೆ ದ್ರೋಣ ಎಂದು ನಾಮಕರಣ ಮಾಡಲಾಗಿತ್ತು. ಮೈಸೂರು ದಸರಾ ಆನೆಗಳ ಬಳಗ ಸೇರಿದ್ದ ಕಿರಿಯ ದ್ರೋಣ ಕಳೆದ ವರ್ಷ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಂಡಿತ್ತು.

ಶುಕ್ರವಾರ 39 ವರ್ಷದ ದ್ರೋಣ ಆನೆ ಮೃತಪಟ್ಟಿದೆ. ದಸರಾ ಆನೆ ದ್ರೋಣ ಸಾವಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಈ ಕುರಿತು ಟ್ವೀಟ್ ಮಾಡಿದ್ದಾರೆ.

'ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕಳೆ ತಂದುಕೊಡುತ್ತಿದ್ದ ಆನೆ ದ್ರೋಣ ಇನ್ನಿಲ್ಲ ಎಂದು ತಿಳಿದು ಅತೀವ ದುಃಖವಾಯಿತು. ಕೊಡಗಿನ ಮತ್ತಿಗೋಡು ಶಿಬಿರದಲ್ಲಿದ್ದ ದ್ರೋಣ ದೇಶ ವಿದೇಶದ ಪ್ರವಾಸಿಗರಿಗೆ ನೆಚ್ಚಿನ ಆನೆಯಾಗಿತ್ತು. ದ್ರೋಣನಿಗೆ ನಲ್ಮೆಯ ಅಶ್ರುತರ್ಪಣ' ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+