ಸೀರೆ ಧರಿಸಿಯೇ ಕರ್ತವ್ಯ ನಿರ್ವಹಿಸುವುದಕ್ಕೆ ಅವಕಾಶ ಕೊಡಿ ಎಂದ ಮಹಿಳಾ ಪೊಲೀಸರು

ಮೈಸೂರು, ನವೆಂಬರ್ 4: ಐವತ್ತು ವರ್ಷ ಪೂರೈಸಿರುವ ಹಾಗೂ ನಿವೃತ್ತಿ ಅಂಚಿನಲ್ಲಿರುವ ಮಹಿಳಾ ಪೊಲೀಸರು ಕಡ್ಡಾಯವಾಗಿ ಪ್ಯಾಂಟ್, ಶರ್ಟ್ ಅನ್ನು ಧರಿಸುವುದರಿಂದ ತಮಗೆ ವಿನಾಯಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಸೇರಿದಂತೆ ಮಹಿಳಾ ಪೊಲೀಸರೆಲ್ಲರೂ ಸೀರೆ ಬದಲು ಖಾಕಿ ಪ್ಯಾಂಟ್, ಶರ್ಟ್ ಧರಿಸಬೇಕೆಂಬ ಆದೇಶ ಹೊರಬಿದ್ದಿದ್ದು, ಇದರಿಂದ ಆತಂಕಕ್ಕೆ ಒಳಗಾಗಿರುವ ನಿವೃತ್ತಿಯಂಚಿನಲ್ಲಿರುವ ಮಹಿಳಾ ಪೊಲೀಸರು ಶನಿವಾರ ಈ ಸಂಬಂಧ ಮನವಿ ಮಾಡಿದ್ದು, ಸೀರೆ ಧರಿಸಲು ಅನುಮತಿ ಕೇಳಿದ್ದಾರೆ.

ನಾವು ಈಗಾಗಲೇ ವೃತ್ತಿಯ ಅರ್ಧದ ಭಾಗ ಕಳೆದಿದ್ದೇವೆ. ಇಂತಹ ಅವಧಿಯಲ್ಲಿ ನಮಗೆ ಸೀರೆ ಬದಲು ಖಾಕಿ ಪ್ಯಾಂಟ್ ಶರ್ಟ್ ಧರಿಸುವುದು ಮುಜುಗರಕ್ಕೀಡು ಮಾಡುತ್ತಿದೆ. ಈಗ ನೂತನವಾಗಿ ವೃತ್ತಿಗೆ ಸೇರುವ ಮಹಿಳಾ ಪೊಲೀಸರಿಗೆ ಖಾಕಿ ಪ್ಯಾಂಟ್ ಶರ್ಟ್ ಒಳ್ಳೆಯದು. ನಮಗೆ ಸೀರೆ ಧರಿಸಿಯೇ ಕರ್ತವ್ಯ ನಿರ್ವಹಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದಾರೆ.

Lady Police appealed to Mysuru Urban Police Commissioner

ಮನವಿ ಸ್ವೀಕರಿಸಿರುವ ಪೊಲೀಸ್ ಆಯುಕ್ತರು, ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಮುಂದೆ ಅವರೇನು ನಿರ್ಧಾರ ಕೈಗೊಳ್ಳಲಿದ್ದಾರೆಂಬುದನ್ನು ನೋಡಿ ತಿಳಿಸಲಾಗುವುದು ಎಂದಿದ್ದಾರೆ.

ಖಾಕಿ ಪ್ಯಾಂಟ್ ಕಡ್ಡಾಯಗೊಳಿಸಿರುವುದು 50ರ ವಯೋಮಾನದ ಮಹಿಳಾ ಪೊಲೀಸರನ್ನು ಪೇಚಿಗೆ ಸಿಲುಕಿಸಿದೆಯಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+