ಕುಮಾರಸ್ವಾಮಿ ಸಿಎಂ ಆಗಲೆಂದು ಟಗರಿನ ಹರಕೆ ಹೊತ್ತ ಅಭಿಮಾನಿಗಳು

ಮೈಸೂರು, ಮೇ 18 : ರಾಜ್ಯದ ಜನರ ಚಿತ್ತ ಈಗ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮದತ್ತ ನೆಟ್ಟಿದೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿಗಳು ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲೆಂದು ಹರಕೆ ಹೊತ್ತಿದ್ದಾರೆ.

ನಗರದ ಜಿ.ಟಿ. ಹರೀಶ್ ಗೌಡ ಅವರ ಅಭಿಮಾನಿ ಬಳಗದವರು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ಟಗರು ಹರಕೆ ನೀಡುವುದಾಗಿ ತೊಣಚಿಕೊಪ್ಪಲಿನಲ್ಲಿರುವ ಬಿಸಿಲು ಮಾರಮ್ಮ ಹಾಗೂ ಚಾಮುಂಡೇಶ್ವರಿ ತಾಯಿಗೆ ಹರಕೆ ಕಟ್ಟಿಕೊಂಡಿದ್ದಾರಂತೆ.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ, ಜಿ.ಟಿ. ದೇವೇಗೌಡರು ಮೈಸೂರಿನ ಉಸ್ತುವಾರಿ ಸಚಿವರಾಗಲಿ ಎಂದು ಅಭಿಮಾನಿಗಳು ಹರಕೆ ಹೊತ್ತಿದ್ದು, ಹರಕೆಗಾಗಿ 25 ಸಾವಿರ ಮೊತ್ತದ ಟಗರು ಖರೀದಿ ಮಾಡಿದ್ದಾರೆ.

Kumaraswamy fans are hoping to he will become chief minister

ದಾವಣಗೆರೆಯಿಂದ ಟಗರು ಖರೀದಿಸಿದ್ದು, ಹರಕೆ ಟಗರಿಗೆ ಹಸಿರು, ನೀಲಿ ಬಣ್ಣ ಬಳಿದಿದ್ದಾರಂತೆ. ಕುಮಾರ ಸ್ವಾಮಿ ಅವರ ಭಾವಚಿತ್ರವಿರುವ ಬಾವುಟವನ್ನು ಟಗರಿನ ಕತ್ತಿಗೆ ಸುತ್ತಲಾಗಿದೆ. ನಾಳೆ ಕಾಂಗ್ರೆಸ್-ಜೆಡಿಎಸ್ ಸೇರಿ ಬಹುಮತ ಸಾಬೀತುಪಡಿಸಲು ಯಶಸ್ವಿಯಾದರೆ ಟಗರಿನ ಬಲಿಯಾಗುವುದೂ ಗ್ಯಾರಂಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+