KRS Dam: ಜಲಾಶಯದಲ್ಲಿ ನೀರಿನ ಸಂಗ್ರಹದಲ್ಲಿ ಹೆಚ್ಚಳ, ಜೂನ್ 30ರ ಒಳಹರಿವಿನ ಮಟ್ಟ
ಬೆಂಗಳೂರು, ಜೂನ್ 30: ಕಾವೇರಿ ನದಿ, ಕೃಷ್ಣರಾಜ ಸಾಗರ ಜಲಾಶಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆದ ಭಾರೀ ಮುಂಗಾರು ಮಳೆ ಪ್ರಭಾವದಿಂದಾಗಿ ನದಿ, ಜಲಾಶಯಕ್ಕೆ ಜೀವಕಳೆ ಬಂದಿದೆ. ರೈತರಿ ಇನ್ನೂ ಹಲವು ತಿಂಗಳು ಕಾಲ ನೀರಿನ ಚಿಂತೆ ದೂರವಾಗಿದೆ. ಇಂದು ಭಾನುವಾರ (ಜೂನ್ 30) ದಂದು ಕೆಆರ್‌ಎಸ್ ಆಣೆಕಟ್ಟಿನಲ್ಲಿ ಅತ್ಯಧಿಕ ನೀರಿನ ಸಂಗ್ರಹವಾಗಿದೆ.
ಮೂಲಗಳ ಪ್ರಕಾರ, ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಕಾವೇರಿ ನದಿಯ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ. ಈ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣ ರಾಜ ಸಾಗರದಲ್ಲಿ ಈಗಾಗಲೇ 90 ಅಡಿಗೂ ಅಧಿಕ ನೀರಿನ ಸಂಗ್ರಹವಾಗಿದೆ. ಒಳಹರಿವು ದಿನೇ ದಿನೆ ಏರಿಕೆ ಆಗುತ್ತಲೇ ಇದೆ.

ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಇಂದು ಭಾನುವಾರ ಕೃಷ್ಣ ರಾಜಸಾಗರ ಜಲಾಶಯದಲ್ಲಿನ ಒಟ್ಟು 130 ಅಡಿ ಪೈಕಿ ಈಗಾಗಲೇ 94.40 ಅಡಿಯಷ್ಟು ನೀರಿನ ಸಂಗ್ರಹವಾಗಿದೆ. ಕ್ರಮೇಣ ಜಲಾಶಯ ಭರ್ತಿ ಆಗುತ್ತಲೇ ಇದೆ. ಇದರಿಂದ ಸಾವಿರಾರು ಚದರ ಕಿಲೋ ಮೀಟರ್ ಜಲಾನಯನ ಪ್ರದೇಶಗಳಿಗೆ ಕೃಷಿ, ಕುಡಿಯಲು ನೀರು ಲಭ್ಯವಾಗುತ್ತಿದೆ.
ಸದ್ಯ ಜಲಾಶಯದ ಒಟ್ಟು 49.452 TMC ನೀರಿನ ಸಾಮರ್ಥ್ಯ ಇದೆ. ಇಂದು ಒಂದೇ ದಿನ ಒಳಹರಿವು ಬರೋಬ್ಬರಿ 12,867 ಕ್ಯೂಸೆಕ್ಸ್ ಇದೆ. ಹೊರ ಹರಿವು 507 ಕ್ಯೂಸೆಕ್ಸ್ ಇದ್ದು, ಈ ಹೊರಹರಿವಿನಲ್ಲಿ 457 ಕಾವೇರಿ ನದಿಗೆ ಬಿಟ್ಟು, ಎಂದಿನಂತೆ 50 ಕ್ಯೂಸೆಕ್ಸ್ ನೀರು ಕೆನಾಲ್‌ಗೆ ಬಿಡಲಾಗುತ್ತಿದೆ. ಈವರೆಗೆ ಕೆಆರ್‌ಎಸ್‌ನಲ್ಲಿ ಶೇಕಡಾ 37.88ರಷ್ಟು ನೀರಿನ ಸಂಗ್ರಹವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಕಬಿನಿ ಆಣೆಕಟ್ಟಿನಲ್ಲೂ ನೀರಿನ ಸಂಗ್ರಹದಲ್ಲಿ ಏರಿಕೆ
ಇನ್ನೂ ಕೇರಳದಲ್ಲಿ ಅತ್ಯಧಿಕ ಮಳೆ ಆದ ಕಾರಣದಿಂದಾಗಿ ಕಬಿನಿ ಜಲಾಶಯದಲ್ಲಿ ಒಳಹರಿವು ಏರಿಕೆ ಆಗಿದೆ. ಆಣೆಕಟ್ಟಿನಲ್ಲಿ ಒಟ್ಟು 19.52 ಟಿಎಂಸಿ ಇದ್ದು, ಇದರಲ್ಲಿ ಒಳಹರಿವು 9179 ಕ್ಯೂಸೆಕ್ ಇದ್ದು, ಹೊರ ಹರಿವು 1250 ಕ್ಯೂಸೆಕ್ ಇದೆ. ಇಂದಿನವರೆಗೆ ಈ ಜಲಾಶಯದಲ್ಲಿ ಒಟ್ಟು ಶೇಕಡಾ 76.74ರಷ್ಟು ನೀರಿನ ಸಂಗ್ರಹವಾಗಿದೆ. ಕಳೆದ 24 ಗಂಟೆಯಲ್ಲಿ ಈ ಭಾಗದಲ್ಲಿ ಸುಮಾರು 10 ಮಿಲಿ ಮೀಟರ್ ಮಳೆ ದಾಖಲಾಗಿದೆ.












Click it and Unblock the Notifications