Pratap Sihma In Varuna: ಪ್ರತಾಪ್ ಸಿಂಹಗೆ ತರಾಟೆ ತೆಗೆದುಕೊಂಡ ವರುಣ ಕ್ಷೇತ್ರದ ಜನ, ಏಕೆ?: ಇಲ್ಲಿದೆ ವಿವರ
ಮೈಸೂರು, ಏಪ್ರಿಲ್, 21: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ನಾಯಕರು ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ಅದರಲ್ಲೂ ವರುಣ ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆ ಆಗಿದ್ದು, ಇಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ರಂಗೇರುತ್ತಿದೆ. ಈ ನಡುವೆ ಸಂಸದ ಪ್ರತಾಪ್ ಸಿಂಹಗೆ ವರುಣ ಕ್ಷೇತ್ರದ ಜನರು ಚಳಿ ಬಿಡಿಸಿದ್ದಾರೆ. ಯಾಕೆ ಅಂತೀರಾ ಇಲ್ಲಿದೆ ನೋಡಿ ವಿವರ.
ಸಚಿವ ವಿ.ಸೋಮಣ್ಣ ಅವರ ಪರ ಮತ ಕೇಳಲು ಹೋಗಿದ್ದ ವೇಳೆ ಪ್ರತಾಪ್ ಸಿಂಹಗೆ ವರುಣ ಕ್ಷೇತ್ರದ ಜನ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ ಅಲ್ಲಿನ ಜನರ ಪ್ರಶ್ನೆಗೆ ಪ್ರತಾಪ್ ಸಿಂಹ ಕಕ್ಕಾಬಿಕ್ಕಿಯಾದ ಘಟನೆಯೂ ನಡೆದಿದೆ. ಎಲ್ಲರಿಗೂ ಸಮಜಾಯಿಷಿ ಕೊಡುತ್ತಿದ್ದ ಪ್ರತಾಪ್ ಸಿಂಹ ವರುಣ ಜನರ ಮುಂದೆ ಮಾತನಾಡಲಾಗದೆ ತಬ್ಬಿಬ್ಬಾಗಿದ್ದಾರೆ.

ಹೌದು.. ಚುನಾವಣೆ ಹಿನ್ನೆಲೆಯಲ್ಲಿ ಮತ ಕೇಳಲು ವರುಣ ಕ್ಷೇತ್ರಕ್ಕೆ ಹೋದ ಸಂಸದ ಪತ್ರಾಪ್ ಸಿಂಹಗೆ ಅಲ್ಲಿನ ಜನ ತರಾಟೆ ತೆಗೆದುಕೊಂಡಿದ್ದಾರೆ. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನೇ ಬದಲು ಮಾಡುತ್ತೇನೆ ಅಂತೀರಾ. ನಾವು ಬಂದಿದ್ದೆ ಸಂವಿಧಾನ ಬದಲಾವಣೆ ಮಾಡೋಕೆ ಅಂತಾ ಬಿಜೆಪಿಯವರು ಹೇಳಿದ್ದೀರಾ? ಹಾಗಾದರೆ ನಾವು ಯಾಕೆ ಬಿಜೆಪಿಗೆ ಬೆಂಬಲ ನೀಡಬೇಕು? ಎಂದು ಪ್ರಶ್ನಿಸುವ ಮೂಲಕ ಪ್ರತಾಪ್ ಸಿಂಹಗೆ ಜನ ತರಾಟೆ ತೆಗೆದುಕೊಂಡರು.
ಅಕ್ಕಿ ನಮ್ಮದು, ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು ಅಂತೀರಾ? ಈಗ ಯಾಕೆ ಅಕ್ಕಿ ಕಡಿಮೆ ಕೊಡುತ್ತಿದ್ದೀರಾ? ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು ಅಂತೀರಾ? ಸಿದ್ದರಾಮಯ್ಯ ಅವರ ಹತ್ತಿರ ಕುಳಿತುಕೊಳ್ಳಿ ಗೊತ್ತಾಗುತ್ತದೆ. ಸಂಸದ ಶ್ರೀನಿವಾಸ್ ಪ್ರಸಾದ್ ಇದುವರೆಗೂ ಕ್ಷೇತ್ರಕ್ಕೆ ಬಂದೇ ಇಲ್ಲ. ಮಹದೇವಪ್ಪ ವಿರುದ್ಧ ಮಾತಾನಾಡುತ್ತೀರಾ ಎಂದು ಕಿಡಿಕಾರಿದರು.
ರಸ್ತೆಗಳ ರಾಜ ಅಂತಾ ಬರೀ ಸುಳ್ಳು ಹೇಳುತ್ತೀರಾ, ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications