ಮೈಸೂರಿನಲ್ಲಿ ಚಿತ್ರನಟಿ ತಾರಾ ಅನುರಾಧಾಗೆ ಮಾತೃ ವಿಯೋಗ
ಮೈಸೂರು, ಏಪ್ರಿಲ್ 27: ಕನ್ನಡದ ಚಲನಚಿತ್ರ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ತಾರಾ ಅನುರಾಧಾ ಅವರ ತಾಯಿ ಪುಷ್ಪಾ ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.
76 ವರ್ಷದ ಪುಷ್ಪಾ ಅವರು ತಾರಾ ಅವರ ಜೊತೆ ಮೈಸೂರಿನಲ್ಲಿ ನಡೆದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣದ ವೇಳೆ ತೀವ್ರವಾಗಿ ವಾಂತಿಯಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ತಾರಾ ಅವರ ಜೊತೆಯೇ ಯಾವಾಗಲೂ ಅವರ ತಾಯಿ ಇರುತ್ತಿದ್ದರು. ಶೂಟಿಂಗ್ ನಡೆಯುವ ಸ್ಥಳಕ್ಕೂ ಮಗಳೊಂದಿಗೆ ಪುಷ್ಪಾ ಅವರು ಹೋಗುತ್ತಿದ್ದರು. ಈ ಬಾರಿ ಹೋದಾಗ ಇಂಥದ್ದೊಂದು ದುರಂತ ಸಂಭವಿಸಿದೆ. ಮೈಸೂರಿನಿಂದ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಗುತ್ತಿದೆ. ನಾಳೆ(ಗುರುವಾರ) ಅಂತ್ಯಸಂಸ್ಕಾರ ನಡೆಯಲಿದೆ.












Click it and Unblock the Notifications