ಎಚ್. ವಿಶ್ವನಾಥ್ ಸಾಹಿತ್ಯ ಪ್ರೀತಿಯ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು, ಆಗಸ್ಟ್ 6: ತೆನೆ ಹೊತ್ತ ಮಹಿಳೆಯ ಕೈ ಹಿಡಿದು ರಾಜ್ಯಾಧ್ಯಕ್ಷರಾಗಿರುವ ಎಚ್. ವಿಶ್ವನಾಥ್ ಕೇವಲ ರಾಜಕಾರಣದಲ್ಲಿ ಮಾತ್ರ ನಿಷ್ಣಾತರಲ್ಲ. ಸಾಹಿತ್ಯ ಕೃಷಿಯಲ್ಲೂ ಕೂಡ ಅವರು ಪರಿಣಿತರು. ತಮ್ಮ ಸ್ವಂತ ಜೀವನದ ಆಟೋ ಬಯೋಗ್ರಫಿಯಿಂದ ಹಿಡಿದು ಸ್ವಂತ ಪ್ರಕಾಶನವನ್ನು ಆರಂಭಿಸಿ ಮುದ್ರಿಸಿದ್ದು ಪ್ರಶಂಸಾನಾರ್ಹವೇ ಸರಿ.
ಬರವಣಿಗೆಯಲ್ಲಿಯೂ ಹೆಚ್ಚು ತೊಡಗಿಸಿಕೊಂಡಿದ್ದ ಅಡಗೂರು ವಿಶ್ವನಾಥ್ ಪುಸ್ತಕ ಬರೆಯುವಲ್ಲಿ ಕರಗತ. 2008ರಲ್ಲಿ ತಮ್ಮ ಆತ್ಮಕಥೆ 'ಹಳ್ಳಿಹಕ್ಕಿಯ' ಹಾಡನ್ನು ಬರೆದು ವಿವಾದಕ್ಕೀಡಾಗಿದ್ದನ್ನು ಎಂದಿಗೂ ಮರೆಯುವಂತಿಲ್ಲ.
ಇತರೆ ರಾಜಕಾರಣಿಗಳ ಕುರಿತಾದ ಕೆಲವು ವಿವಾದದ ಮಾತುಗಳನ್ನು ಉಲ್ಲೇಖಿಸಲಾಗಿದೆ ಎಂಬ ಕಾರಣಕ್ಕೆ ಪುಸ್ತಕ ನಿಗದಿಯಾದ ದಿನಕ್ಕಿಂತ ನಂತರದಲ್ಲಿ ಪ್ರಕಟಗೊಂಡಿತು. ತಮ್ಮ ಪಕ್ಷದಲ್ಲಿನ ಹುಳುಕನ್ನು ಎತ್ತಿ ಆಡುವುದರಲ್ಲಿ ನಿಸ್ಸೀಮರಾಗಿದ್ದ ವಿಶ್ವನಾಥ್ ಈ ಪುಸ್ತಕದಲ್ಲಿಯೂ ಹಾಗೇ ಕೆಲವು ಸತ್ಯ ಸಂಗತಿಗಳನ್ನು ಬಿಚ್ಚಿಟ್ಟಿದ್ದರು.
ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು. ಇದಾದ ಬಳಿಕ ಇದೇ ಹಳ್ಳಿ ಹಕ್ಕಿ ಆತ್ಮಕಥನ ಇಂಗ್ಲಿಷ್ ಗೆ ತರ್ಜುಮೆಯಾಗಿದೆ.

ವಿಶಿಷ್ಟವಾದ ಪುಸ್ತಕ ಮತಸಂತೆ
10 ದಿನ ಏಕಾಂಗಿಯಾಗಿ ಸಂಚಾರ ಹೋಗಿದ್ದ ವಿಶ್ವನಾಥ್ ಹಲವು ವರುಷಗಳ ಗ್ಯಾಪ್ ನ ಬಳಿಕ 60 ಪುಟಗಳ ಮತಸಂತೆಯನ್ನು ಬರೆದರು. ಮತದಾನ ಕುರಿತಾದ ಆತ್ಮಾವಲೋಕನ ಮಾಡಿಕೊಳ್ಳುವ ಪ್ರಯತ್ನವೇ ಈ ಮತಸಂತೆಯಾಗಿದೆ.
ವಿಶ್ವನಾಥ್‌ರ ನಿಲುವು ಸಮಾಜ ಮುಖಿಯಾದದ್ದು. ಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಕಲುಷಿತವಾಗಿ ಹೋಗಿದೆ ಎಂಬ ಅಂಶಗಳನ್ನು ತಮ್ಮ ಮತ ಸಂತೆಯಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮತಸಂತೆ ವಿಶಿಷ್ಟವಾದ ಪುಸ್ತಕವಾಗಿದೆ.

ತುರ್ತು ಪರಿಸ್ಥಿತಿ ಕುರಿತು
ಇದಾದ ಬಳಿಕ 1975ರ ತುರ್ತು ಪರಿಸ್ಥಿತಿ ಕುರಿತು, ದೇಶದ ಕರಾಳ ದಿನದಲ್ಲಿ ಇಂದಿರಾಗಾಂಧಿ ಜಾರಿಗೆ ತಂದ 20 ಅಂಶಗಳ ಕುರಿತಾದ ಮಾಹಿತಿ, ಭೂ ಸುಧಾರಣೆ, ಜೀತ ವಿಮುಕ್ತಿಯಂತಹ ಧೋರಣೆಗಳನ್ನು, ಆಲಾಪನೆಗಳನ್ನು 'ಹಳ್ಳಿ ಹಕ್ಕಿ'ಯಲ್ಲಿ ಉಲ್ಲೇಖಿಸಿದ್ದರು.

ಆಪತ್ ಸ್ಥಿತಿಯ ಆಲಾಪಗಳು
ಜನವರಿ 25 ಬಂತೆಂದರೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಸರ್ಕಾರದ ಬಗ್ಗೆ ವಿರೋಧದ ಮಾತುಗಳು ಕೇಳಿ ಬರುತ್ತದೆ. ಆದರೆ, ಕರ್ನಾಟದಲ್ಲಿ ಆ ಕಾಲ ಬದಲಾವಣೆ ಕಾಲವಾಗಿತ್ತು. ದೇವರಾಜ ಅರಸ್ ತಂದ ನಾನಾ ಜನಪರ ಯೋಜನೆಗಳನ್ನು ಹಿಡಿದಿಡುವ ಪ್ರಯತ್ನದ ಫಲವಾಗಿ 'ಆಪತ್ ಸ್ಥಿತಿಯ ಆಲಾಪಗಳು' ಹೊರ ಬಂದಿದೆ.

ಹಳ್ಳಿಹಕ್ಕಿ ಆದದ್ದು ಹೇಗೆ?
ಭೂಸ್ವಾಧೀನ ಕಾಯಿದೆ ತಿದ್ದುಪಡಿ ಹಾಗೂ ಭೂ ಕಾಯ್ದೆ ಕುರಿತಾದ ಸಣ್ಣ ಪುಸ್ತಕ ಬರೆದ ವಿಶ್ವನಾಥ್ ಅದನ್ನು 2015ರಲ್ಲಿ ಹೊರತಂದರು. 'ಮಲ್ಲಿಗೆ ಮಾತು' ಸೇರಿದಂತೆ ತಾವು ರಚಿಸಿದ ನಾಲ್ಕು ಕೃತಿಗಳು ಕಲ್ಪನೆಯ ಕಥನಗಳಲ್ಲ, ಬದಲಾಗಿ ದೇಶದಲ್ಲಿ ನಡೆದ ವಿಚಾರಗಳು. ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದೇನೆ.
ಮುಂದೆ 650 ವರ್ಷಗಳ ಇತಿಹಾಸವಿರುವ ಇಂಗ್ಲೆಂಡ್ ಪಾರ್ಲಿಮೆಂಟ್ ಹಾಗೂ 50 ವರ್ಷಗಳ ಇತಿಹಾಸವಿರುವ ಭಾರತದ ಪಾರ್ಲಿಮೆಂಟ್‌ನ ತುಲನಾತ್ಮಕ ಅಧ್ಯಯನ ಮಾಡಿ ಪುಸ್ತಕ ಹೊರತರಲಾಯಿತು.
ಇನ್ನು 2016ರಲ್ಲಿ ಹಳ್ಳಿಹಕ್ಕಿ ಹಾಗೂ ಟಾಕಿಂಗ್ ಸ್ಟ್ರೀಟ್ ಪುಸ್ತಕವನ್ನು ತಮ್ಮ ಜೀವನದಲ್ಲಿನ ಸ್ವಾನುಭವ ಕುರಿತಾಗಿ ಬರೆದರು. ಈ ಪುಸ್ತಕ ಸಹ ಹೆಸರು ಮಾಡಿತು. ತಮ್ಮದೇ ಆದ ಹಳ್ಳಿಹಕ್ಕಿ ಪ್ರಕಾಶನದ ರುವಾರಿಗಳಾದ ಹಿನ್ನಲೆಯಲ್ಲಿ ವಿಶ್ವನಾಥ್ ಗೆ ಹಳ್ಳಿಹಕ್ಕಿ ಎಂದು ಕರೆಯುವುದು ವಾಡಿಕೆ ಕೂಡ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್












Click it and Unblock the Notifications