ಸಾ ರಾ ಮಹೇಶ್ ಗೆ ಅವಾಜ್ ಹಾಕಿದ್ದ ಜೆಡಿಎಸ್ ಮುಖಂಡ ಅಮಾನತು
ಮೈಸೂರು, ಜುಲೈ 22 : ಸಚಿವ ಸಾ ರಾ ಮಹೇಶ್ ಅವರಿಗೆ ಅವಾಜ್ ಹಾಕಿದ ಹಿನ್ನೆಲೆಯಲ್ಲಿ ಹಾಗೂ ವಿಶ್ವನಾಥ್ ಅವರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದ್ದ ಹುಣಸೂರು ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಲೋಕೇಶ್ ಎಸ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ. ಹುಣಸೂರು ಶಾಸಕ ವಿಶ್ವನಾಥ್ ಅವರಿಗೆ ಬೆಂಬಲ ನೀಡುವ ಹಿನ್ನೆಲೆ ಲೋಕೇಶ್, ಸಚಿವ ಸಾ ರಾಮಹೇಶ್ ಅವರಿಗೆ ಬೈದಿದ್ದರು. ಅವರಿಬ್ಬರ ನಡುವಿನ ದೂರವಾಣಿ ಸಂಭಾಷಣೆ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಶ್ವನಾಥ್-ಸಾ ರಾ ಮಹೇಶ್ ನಡುವೆ ವಾಗ್ದಾಳಿ ನಡೆಯುತ್ತಲೇ ಇದೆ. ಸಾ ರಾ ಮಹೇಶ್ ವಿಶ್ವನಾಥ್ ಅವರ ವಿರುದ್ಧ ಮಾಡಿದ್ದ ಆರೋಪದಿಂದ ಕುಪಿತಗೊಂಡ ಲೋಕೇಶ್, 28 ರಿಂದ 30 ಕೋಟಿ ರೂಪಾಯಿಯನ್ನು ವಿಶ್ವನಾಥ್ ಸಾಲ ಪಡೆದಿದ್ದಾರೆಯೇ ? ಅವರು ಸಂಕಷ್ಟದಲ್ಲಿದ್ದಾರೆಯೇ? ಎಂದು ಸಾ ರಾ ಮಹೇಶ್ ಗೆ ಪ್ರಶ್ನಿಸಿದ್ದರು.












Click it and Unblock the Notifications