ಪ್ರಧಾನಿ ಮೋದಿಯೊಂದಿಗೆ ಪರೀಕ್ಷಾ ಪೆ ಚರ್ಚಾ: ಮೈಸೂರಿನ ತರುಣ್ ಆಯ್ಕೆ

ಮೈಸೂರು, ಮಾರ್ಚ್ 31: ಮೈಸೂರು ತಾಲೂಕಿನ ಜವಾಹರ ನವೋದಯ ವಿದ್ಯಾಲಯದ ತರುಣ್ ಎಂ.ಬಿ ಅವರು ಏ.1ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಯುವ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿಯವರ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲು ಆಯ್ಕೆಯಾಗಿರುವ ರಾಜ್ಯದ ಏಕೈಕ ವಿದ್ಯಾರ್ಥಿ ತರುಣ್ ಎಂಬುದೇ ಹೆಮ್ಮೆಯ ವಿಷಯ. ಏ.1ರ ಬೆಳಗ್ಗೆ 11ಕ್ಕೆ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಜೊತೆ ಸಂವಾದದಲ್ಲಿ ಭಾಗಿಯಾಗಲಿದ್ದಾನೆ.

ಶಾಲೆಯ ಪ್ರಾಂಶುಪಾಲ ಮಧುಸೂದನನ್ ಜೆ. ಮಾತನಾಡಿ, ಶಾಲಾ ಮಕ್ಕಳಲ್ಲಿನ ಪರೀಕ್ಷೆಯೆಡೆಗಿನ ಭಯ ಹಾಗೂ ಒತ್ತಡವನ್ನು ಹೋಗಲಾಡಿಸಿ, ಆತ್ಮವಿಶ್ವಾಸವನ್ನು ವೃದ್ಧಿಸುವ ಸಲುವಾಗಿ 2018ರಿಂದ ದೇಶದ ವಿವಿಧ ಶಾಲಾ ವಿದ್ಯಾರ್ಥಿಗಳ ಜೊತೆ ಪರೀಕ್ಷಾ ಪೆ ಚರ್ಚೆ ಎಂಬ ಪರಿಕಲ್ಪನೆಯಲ್ಲಿ ಪ್ರಧಾನಿಯವರು ಸಂವಾದ ನಡೆಸುತ್ತಿದ್ದು, ಇದು ಐದನೇ ಆವೃತ್ತಿಯಾಗಿದೆ.

Mysuru: Jawahar Vidyalayas Student Tarun MB Select to Pareeksha Pe Charcha With PM Narendra Modi

ಪ್ರಧಾನಿಗಳೊಂದಿಗಿನ ಸಂವಾದ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ವೀಕ್ಷಣೆಗೆ ಅನುಕೂಲವಾಗುವಂತೆ ಎಲ್‌ಇಡಿ ಪರದೆಯನ್ನು ಅಳವಡಿಸಿ, ಶಾಲೆಯ 559 ವಿದ್ಯಾರ್ಥಿಗಳು, ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ, ಕೆಲ ಪೋಷಕರು ಸೇರಿದಂತೆ ಏಕಕಾಲದಲ್ಲಿ 700 ಮಂದಿ ಸಂವಾದವನ್ನು ವೀಕ್ಷಣೆ ಮಾಡುವುದಾಗಿ ತಿಳಿಸಿದರು.

Recommended Video

      ಮರಳಿ ಫಾರ್ಮ್ ಗೆ ಬಂದ ರಾಬಿನ್ ಉತ್ತಪ್ಪ! | Oneindia Kannada

      ಸಂವಾದದ ಕೇಂದ್ರಬಿಂದುವಾಗಿರುವ ನವೋದಯ ಶಾಲೆಯ ವಿದ್ಯಾರ್ಥಿ ತರುಣ್ ಪ್ರಧಾನಿಯವರ ಜತೆ ಸಂವಾದದಲ್ಲಿ ಭಾಗಿಯಾಗುತ್ತಿರುವುದಕ್ಕೆ ಆಶ್ಚರ್ಯದ ಜೊತೆ ಸಂತಸ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಸಂವಾದದಲ್ಲಿ ಪ್ರಶ್ನೆ ಕೇಳುವ ಅವಕಾಶ ದೊರೆತರೆ ಶಿಕ್ಷಣ ಹಾಗೂ ಶೈಕ್ಷಣಿಕ ವ್ಯವಸ್ಥೆ ಕುರಿತಾಗಿ ಪ್ರಧಾನಿಯವರ ಬಳಿ ಪ್ರಶ್ನೆ ಕೇಳುವೆ ಎಂದಿದ್ದು, ಮುಂದೆ ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+