ಚಾಮುಂಡೇಶ್ವರಿಯಲ್ಲಿ ಗೆದ್ದೇ ಗೆಲ್ಲುತ್ತೀನಿ : ಸಿದ್ದರಾಮಯ್ಯ

ಮೈಸೂರು, ಮೇ 10: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಹುಮತದಿಂದ ಗೆದ್ದೇ ಗೆಲ್ಲುತ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಬಹಿರಂಗ ಪ್ರಚಾರಚದ ಕೊನೆಯ ದಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪ್ರಚಾರಕ್ಕೆಂದು ಆಗಮಿಸಿದಾಗ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಿಟಿ ದೇವೇಗೌಡ ವರ್ಸಸ್ ಸಿದ್ದರಾಮಯ್ಯ ಎಂಬ ದೇವೇಗೌಡ ಅವರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನಾನು ಈ ಕ್ಷೇತ್ರದಿಂದ ಗೆದ್ದಾಗ ಜಿಟಿ ದೇವೇಗೌಡ ಅವರಂತಹವರು ನೂರು ಜನ ಇದ್ದರು. ಸೊಸೈಟಿ ಅಧ್ಯಕ್ಷ ಆಗಿದ್ದ ಅವರಿಗೆ ಎಷ್ಟು ಜನಪ್ರಿಯತೆ ಇರಲು ಸಾಧ್ಯ ಎಂದು ಟಾಂಗ್ ನೀಡಿದರು.

Im confident to win in Chamundeshwari: Siddaramaiah

ನಾನು ಈ ವರೆಗೆ ಕ್ಷೇತ್ರದ ಹಳ್ಳಿ-ಹಳ್ಳಿಗಳಲ್ಲಿ ಸಂಚಿರಿ ಗಮನಿಸಿದಂತೆ ನಾನು ಗೆಲ್ಲುವುದು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು ಸಿದ್ದರಾಮಯ್ಯ ಅವರಿಗೆ ಗೆಲುವು ಸುಲಭವಲ್ಲ ಎನ್ನಲಾಗುತ್ತಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭಯದಿಂದಲೇ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿಯೂ ಚುನಾವಣೆಗೆ ನಿಂತಿದ್ದಾರೆ ಎನ್ನಲಾಗಿದೆ ಆದರೆ ಸಿದ್ದರಾಮಯ್ಯ ಅವರು ಇದನ್ನು ತಳ್ಳಿ ಹಾಕಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಮತ್ತೊಂದು ಕ್ಷೇತ್ರ ಬಾದಾಮಿಯಲ್ಲೂ ಅವರಿಗೆ ಬಿಜೆಪಿಯ ಶ್ರೀರಾಮುಲು ಕಠಿಣ ಸ್ಪರ್ಧೆಯನ್ನೇ ಒಡ್ಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+