ಚಾಮುಂಡೇಶ್ವರಿ ಜನತೆಗೆ ಕೃತಜ್ಞತೆ ಸಲ್ಲಿಸಲಿರುವ ಜಿಟಿಡಿ: ಕಾರ್ಯಕರ್ತರಿಗೆ ಭರ್ಜರಿ ಬಾಡೂಟ

ಮೈಸೂರು, ಜುಲೈ.15: ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಸಚಿವ ಜಿಟಿ ದೇವೇಗೌಡ ಇಂದು ಭಾನುವಾರ ಕೃತಜ್ಞತೆ ಸಲ್ಲಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಇಲವಾಲ ಬಳಿ ಇರೋ ಲಿಂಗದೇವರಕೊಪ್ಪಲಿನ ಮೈದಾನದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶದ ಜೊತೆಗೆ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟದ ವ್ಯವ್ಯಸ್ಥೆ ಇರುತ್ತದೆ. ಸುಮಾರು 25 ಸಾವಿರ ಮಂದಿಗೆ ಬಾಡೂಟ ಮತ್ತು 5 ಸಾವಿರ ಮಂದಿಗೆ ಸಸ್ಯಹಾರಿ ಊಟದ ವ್ಯವಸ್ಥೆ ಇರುತ್ತದೆ.

ಒಂದು ಬಾರಿಗೆ ಐದು ಸಾವಿರ ಮಂದಿ ಕುಳಿತುಕೊಂಡು ಊಟ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾವೇಶ 11 ಗಂಟೆಗೆ ಆರಂಭವಾಗಲಿದೆ. ಒಂದು ಕಡೆ ಸಮಾವೇಶಕ್ಕೆ ವೇದಿಕೆ ಸಿದ್ದತೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕೊತ ಕೊತ ಬೇಯುತ್ತಿದೆ ಬಾಡೂಟ.

GT Deve Gowda will say gratitude to Chamundeshwari constituency people

ಇದೇ ಮೈದಾನದಲ್ಲಿ ಕುಮಾರಪರ್ವ ಸಮಾವೇಶ ನಡೆಸಿ, ಪ್ರಚಾರಕ್ಕೆ ಧುಮುಕಿದ್ದರಿಂದ, ಈಗ ಕ್ಷೇತ್ರದ ಜನರಿಗೆ ಕೃತಜ್ಞತೆಯನ್ನು ಇದೇ ಮೈದಾನದಲ್ಲಿ ಸಲ್ಲಿಸಲಿದ್ದಾರೆ ದಳಪತಿಗಳು.

ನಾಲ್ಕು ಸಾವಿರ ಕೆಜಿ ಮಟನ್, ಮೂರು ಸಾವಿರ ಕೆಜಿ ಚಿಕನ್ ನಲ್ಲಿ ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ, ಮೊಟ್ಟೆ ಮೆನು ತಯಾರಾಗುತ್ತಿದೆ. ಬಾಡೂಟದ ವ್ಯವಸ್ಥೆಯನ್ನು ಸಚಿವ ಜಿಟಿಡಿ ಪುತ್ರ ಹರೀಶ್ ಗೌಡ ವೀಕ್ಷಿಸುತ್ತಿದ್ದಾರೆ.

ಸಚಿವ ಜಿಟಿ ದೇವೇಗೌಡ ಅವರು 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದು ವಿರುದ್ದ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+