ಜಂಬೂ ಸವಾರಿ ಮಾರ್ಗದಲ್ಲಿ ಉಚಿತ ವೈಫೈ ಸೇವೆ

ಮೈಸೂರು, ಅ.1 : ಮೈಸೂರು ದಸರಾಕ್ಕೆ ತೆರಳುವ ಪ್ರವಾಸಿಗರಿಗೆ ಸಿಹಿ ಸುದ್ದಿ. ಅರಮನೆ ಮತ್ತು ಸೈಯಾಜಿರಾವ್ ರಸ್ತೆಯಲ್ಲಿ ಉಚಿತವಾಗಿ ವೈಫೈ ಸೇವೆಯನ್ನು ಸರ್ಕಾರ ನೀಡುತ್ತಿದ್ದು, ಇದಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅರಮನೆ ಆವರಣದಲ್ಲಿ ವರ್ಷಪೂರ್ತಿ ವೈಫೈ ಸೇವೆ ನೀಡುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ.

ಮಂಗಳವಾರ ಐಟಿ, ಬಿಟಿ ಸಚಿವ ಎಸ್‌.ಆರ್‌.ಪಾಟೀಲ್ ಅರಮನೆಯ ಬಲರಾಮ ದ್ವಾರದಲ್ಲಿ ಉಚಿತ ವೈಫೈ ಸೇವೆಯನ್ನು ಲೋಕಾಪರ್ಣೆ ಮಾಡಿದರು. ಬೆಂಗಳೂರಿನ ಮೆಟ್ರೋ ನೆಟ್ ಸಂಸ್ಥೆ ಈ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು ಸೈಯಾಜಿರಾವ್ ರಸ್ತೆ ಮತ್ತು ಅರಮನೆಯಲ್ಲಿ ಈ ಸೇವೆ ಪ್ರವಾಸಿಗರಿಗೆ ಲಭ್ಯವಾಗಲಿದೆ. [ಮೈಸೂರು ದಸರಾ ಚಿತ್ರಗಳನ್ನು ನೋಡಿ]

mysore

ಕಾರ್ಯಕ್ರಮದಲ್ಲಿ ಮಾತನಾಡಿ ಸಚಿವ ಎಸ್.ಆರ್.ಪಾಟೀಲ್ 'ಈಗಾಗಲೇ ಬೆಂಗಳೂರಿನ ಹಲವು ಕಡೆಗಳಲ್ಲಿ ಸರ್ಕಾರ ಉಚಿತವಾಗಿ ವೈಫೈ ಸೌಲಭ್ಯ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ನಗರಕ್ಕೆ ಅದನ್ನು ವಿಸ್ತರಿಸುವ ಯೋಜನೆ ಹೊಂದಿದೆ. ರಾಜ್ಯದ ಇತರ ನಗರಗಳಿಗೂ ಉಚಿತ ವೈಫೈ ನೀಡುವ ಯೋಚನೆ ಇದೆ' ಎಂದು ತಿಳಿಸಿದರು. [ನಾಲ್ಕು ರೈಲುಗಳ ಪ್ರಯಾಣಿಕರಿಗೆ ವೈಫೈ ಭಾಗ್ಯ]

ಯೋಜನೆಯ ಉಸ್ತುವಾರಿ ವಹಿಸಿಕೊಂಡಿರುವ ಮೆಟ್ರೋ ನೆಟ್‍ನ ವ್ಯವಸ್ಥಾಪಕ ನಿರ್ದೇಶಕ ಎಂ.ಎನ್.ಗಿರಿ ಅವರು, ಮಂಗಳವಾರದಿಂದ ಅರಮನೆ ಮತ್ತು ಸೈಯಾಜಿರಾವ್ ರಸ್ತೆಯಲ್ಲಿ ಉಚಿತವಾಗಿ ಈ ಸೇವೆ ನೀಡಲಾಗುತ್ತಿದ್ದು, ನಂತರದಲ್ಲಿ ವರ್ಷ ಪೂರ್ತಿ ಮೈಸೂರು ಅರಮನೆಗೆ ಉಚಿತ ವೈಫೈ ಸೇವೆ ನೀಡುತ್ತೇವೆ ಎಂದು ಹೇಳಿದರು.

ವೈಫೈ ಸೇವೆ ಲಭ್ಯವಿರುವ ಸ್ಥಳಗಳು : ಸತತವಾಗಿ ನಾಲ್ಕು ಗಂಟೆ ಅವಧಿ ಜನರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಅರಮನೆ, ಸೈಯಾಜಿ ರಾವ್ ರಸ್ತೆ, ವಾರ್ತಾ ಭವನ, ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಅ.5ರ ಭಾನುವಾರದ ತನಕ ವೈಫೈ ಸೇವೆ ಲಭ್ಯವಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+