Get Updates
Get notified of breaking news, exclusive insights, and must-see stories!

ಚಾಮುಂಡಿ ಬೆಟ್ಟದಲ್ಲಿ ಬೆಂಕಿ: ಬೆಂಕಿ ನಂದಿಸಲು ಅಗ್ನಿ ಶಾಮಕದಳ ಹರಸಾಹಸ- 9 ಎಕರೆ ಕಾಡು ನಾಶ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬುಧವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಸಸ್ಯರಾಶಿ ಸುಟ್ಟು ಕರಕಲಾಗಿದೆ. ಸುಮಾರು 90 ನಿಮಿಷಕ್ಕೂ ಹೆಚ್ಚು ಕಾಲ ಹರಸಾಹಸಪಟ್ಟು ಬೆಂಕಿಯನ್ನು ಹತೋಟಿಗೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಒಣ ಸಸ್ಯಗಳು ಮತ್ತು ಪೊದೆಗಳಿಗೆ ಹರಡಿದ ಬೆಂಕಿಯನ್ನು ನಂದಿಸಲು ರಾತ್ರಿ ಇಡೀ ಅರಣ್ಯ ಇಲಾಖೆ ಶ್ರಮಿಸಿದೆ.

ಸುಮಾರು 9 ಎಕರೆ ಭೂಮಿ ಸುಟ್ಟು ಕರಕಲಾಗಿದೆ. ಸಂಜೆ ಸಮಯದಲ್ಲಿ ಬೆಟ್ಟದ ಪಾದ ಮೆಟ್ಟಿಲು ಹತ್ತುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಕಿಡಿಗೇಡಿಗಳ್ಯಾರೋ ಬೆಟ್ಟ ಹತ್ತುವಾಗ ಬೆಟ್ಟಡ ಮಧ್ಯ ಸ್ಥಳದಲ್ಲಿ ಬೆಂಕಿ ಹಚ್ಚಿದ್ದಾರೆ. ಬೆಂಕಿ ಗಾಳಿಯಿಂದಾಗಿ ವೇಗವಾಗಿ ವ್ಯಾಪಿಸಿದೆ.

Fire disaster in Chamundi Hills: 9 acres of forest destroyed

ಈ ಬೆಂಕಿ ಸುಮಾರು 50 ಎಕರೆ ಪ್ರದೇಶ ವ್ಯಾಪಿಸಿದೆ. 2 ಎಕರೆಯಷ್ಟು ಅರಣ್ಯ ಮಾತ್ರ ನಾಶವಾಗಿದೆ. ಬೆಂಕಿ ಆವರಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಅರ್ಧ ಗಂಟೆಗಳ ಕಾಲ ಬೆಂಕಿಯ ಉರಿ ಮತ್ತು ಹೊಗೆ ಇಡೀ ಬೆಟ್ಟವನ್ನು ಆವರಿಸಿದೆ. ಬೆಟ್ಟದ ಸಮೀಪಸ ಜನರು, ಈ ಪ್ರಮಾಣದಲ್ಲಿ ಹೊಗೆಯೂ ಆವರಿಸಿಕೊಂಡಿರುವುದನ್ನು ಗಮನಿಸಿ ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಮತ್ತು ಅರಣ್ಯ ಸಿಬ್ಬಂದಿ ಆರಿಸುವ ಕಾರ್ಯಾಚರಣೆ ಮಾಡಿದ್ದಾರೆ. ಸರಸ್ವತಿಪುರಂ, ಬನ್ನಿಮಂಟಪ, ಹೆಬ್ಬಾಳ ಠಾಣೆಗಳಿಂದ ಒಟ್ಟು 6 ಅಗ್ನಿ ಶಾಮಕ ವಾಹನಗಳು ಮತ್ತು ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಸುಮಾರು ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ, ಬೆಂಕಿಯನ್ನು ಹತೋಟಿಗೆ ತಂದರು.

Fire disaster in Chamundi Hills: 9 acres of forest destroyed

ಆಗಾಗ ಕಿಡಿಗೇಡಿಗಳು ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಹಚ್ಚುವ ಕೃತ್ಯಕ್ಕೆ ಕೈ ಹಾಕುತ್ತಿದ್ದು ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀರು ಒತ್ತಾಯಿಸಿದ್ದಾರೆ. ಸ್ಥಳೀಯರಿಗೆ ಈ ಬಗ್ಗೆ ಆತಂಕ ಹೆಚ್ಚಾಗಿದೆ.

ಈ ಹಿಂದೆ ನಡೆದ ಘಟನೆ

ಅದೇ ರೀತಿಯಾಗಿ ಕಳೆದ ಮಾರ್ಚ್‌ನಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ಕುರುಚಲು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಾಡ್ಗಿಚ್ಚಿನಿಂದ ಬೆಂಕಿ ಹಬ್ಬಿರುವ ಶಂಕೆ ವ್ಯಕ್ತವಾಗಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Fire disaster in Chamundi Hills: 9 acres of forest destroyed

ಚಾಮುಂಡಿ ಬೆಟ್ಟದ ಬಗ್ಗೆ-

ಮೈಸೂರು ನಗರದಿಂದ ಸುಮಾರು 8- 10 ಕಿ.ಮೀ. ಸುತ್ತಳತೆಯ ಅಂತರದಲ್ಲಿ ಚಾಮುಂಡಿ ಬೆಟ್ಟವಿದೆ. ಚಾಮುಂಡಾಂಬೆ ದೇವಿಯು ಈ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ ಸುಮಾರು 3,489 ಅಡಿಗಳ ಎತ್ತರದಲ್ಲಿದ್ದು ಮತ್ತು ಮೈಸೂರುವಿನಿಂದ 13 ಕಿ.ಮೀ ಗಳ ಅಂತರದಲ್ಲಿದೆ.

ಈ ದೇವಿ ದೇವಸ್ಥಾನವನ್ನು ಮಹಾರಾಜರ ಕುಟುಂಬದವರಿಗೆ ಮನೆ ದೇವರಾಗಿತ್ತು ಮತ್ತು ಮಹಿಷಾಸುರನನ್ನು ಸಂಹರಿಸಿದ ಕಾರಣದಿಂದ "ಮಹಿಷಾಸುರಮರ್ದಿನಿ" ಎಂಬ ನಾಮಾಂಕಿತದಲ್ಲಿ ಮನೆ ದೇವಿಯಂತೆ ನಿರ್ಮಿಸಲಾಗಿದೆ. ಚಾಮುಂಡೇಶ್ವರಿ ದೇವಿಯನ್ನು ದುರ್ಗಾ ದೇವಿ ಅವರಾವತಾರವೆಂದು, ಕಾಳೀದೇವಿ ಮತ್ತು ಚಾಮುಂಡಾಂಬೆ ಎಂಬ ಹೆಸರುಗಳಿಂದ ವರ್ಣಿಸಲಾಗುತ್ತಿದೆ. ಚಾಮುಂಡೇಶ್ವರಿ ದೇವಸ್ಥಾನವನ್ನು ಬಹುಪಾಲು ಮಹಾರಾಜರ ಮನೆದೇವಿಯಂತೆ ನಿರ್ವಹಣೆ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿರುತ್ತದೆ.

1659 ರಲ್ಲಿ ದೊಡ್ಡ ದೇವರಾಜ ಒಡೆಯರ್ ಇವರ ಅವಧಿಯಲ್ಲಿ 1000 ಮೆಟ್ಟಿಲುಗಳನ್ನು ಮತ್ತು ಈಶ್ವರನಿಗೆ ಬಹುಪ್ರಿಯವಾದ ನಂದಿಯ ಬಹುದೊಡ್ಡ ನಂದಿ ವಿಗ್ರಹವನ್ನು ನಿರ್ಮಿಸಲಾಯಿತು. ಈ ವಿಗ್ರಹವು 16 ಅಡಿ (4.8 ಮೀಟರ್) ಮುಂಭಾಗ ಮತ್ತು 25 ಅಡಿ (7.5 ಮೀ) ಉದ್ದವಿದೆ. ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+