ನಾಡಹಬ್ಬಕ್ಕೆ ಈಗ ಅರಮನೆಯಲ್ಲಿ ಫಿರಂಗಿ ತಾಲೀಮು

ಮೈಸೂರು, ಸೆಪ್ಟೆಂಬರ್ 3: ಸೆ.30ರಿಂದ ಅ.8ವರೆಗೆ ನಡೆಯಲಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಿಲ್ಲಾಡಳಿತದಿಂದ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ. ಈ ಹಿನ್ನೆಲೆ ಅರಮನೆ ಆವರಣದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯಿಂದ ಫಿರಂಗಿ ತಾಲೀಮು ನಡೆಯಿತು.

ನಿನ್ನೆಯಷ್ಟೆ ನಗರ ಪೊಲೀಸರಿಗೆ ಫಿರಂಗಿಗಳನ್ನು ಹಸ್ತಾಂತರಿಸಲಾಗಿತ್ತು. ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿ ತಾಲೀಮಿನಲ್ಲಿ ಭಾಗವಹಿಸಿದ್ದರು. ವಿಜಯ ದಶಮಿ ದಿನದಂದು ಅರಮನೆ ಮತ್ತು ಪಂಜಿನ ಕವಾಯತು ಮೈದಾನದಲ್ಲಿ ಪೊಲೀಸರು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸುತ್ತಾರೆ. ಆ ಸದ್ದಿಗೆ ಆನೆ, ಕುದುರೆಗಳು ಬೆದರದೆ, ವಿಚಲಿತಗೊಳ್ಳದೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ದಸರಾ ಆರಂಭಕ್ಕೂ ಮುನ್ನ ಫಿರಂಗಿ ಸಿಡಿಸುವ ತಾಲೀಮು ನಡೆಸಲಾಗುತ್ತದೆ.

Firangi practice by police for Mysuru Dassara preparations

ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ಸಲ್ಲಿಸುವ ವೇಳೆ ರಾಷ್ಟ್ರಗೀತೆ ಮುಗಿಯುವ ಅವಧಿಯ ಒಳಗೆ 21 ಕುಶಲತೋಪು ಹಾರಿಸುವ ಸಂಪ್ರದಾಯವಿದೆ. ಗಜಪಡೆಗೆ ಭಾರಿ ಶಬ್ದಕ್ಕೆ ಒಗ್ಗಿಕೊಳ್ಳುವಂತೆ ಮಾಡಲು ಸಿಡಿಮದ್ದನ್ನು ಸಿಡಿಸಲು ಫಿರಂಗಿಗಳನ್ನು ಬಳಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+