ತ್ರಿಷಿಕಾ ನಕಲಿ ಇನ್ಸ್ಟಾಗ್ರಾಂ ಖಾತೆ: ಫಾಲೋ ಮಾಡದಂತೆ ಯದುವೀರ್ ಮನವಿ!
ಮೈಸೂರು, ನವೆಂಬರ್ 13: ಮೈಸೂರು ರಾಜಮನೆತನದ ಸೊಸೆ, ಮಹಾರಾಣಿ ತ್ರಿಷಿಕಾ ಹೆಸರಿನಲ್ಲಿ ಮತ್ತೆ ನಕಲಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಯಾಗಿದೆ. ಇನ್ಸ್ಟಾಗ್ರಾಂನಲ್ಲಿ ತ್ರಿಷಿಕಾ ದೇವಿ ಒಡೆಯರ್ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದ್ದು, ಈ ಖಾತೆಯನ್ನು ಯಾರೂ follow ಮಾಡಬೇಡಿ, ಇದೊಂದು ನಕಲಿ ಖಾತೆ ಎಂದು ಮಹಾರಾಜ, ತ್ರಿಷಿಕಾ ಪತಿ ಯದುವೀರ್ ಒಡೆಯರ್ ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತ್ರಿಷಿಕಾ ನಕಲಿ ಖಾತೆಯ ಚಿತ್ರವನ್ನು ಪೋಸ್ಟ್ ಮಾಡಿರುವ ಯದುವೀರ್, ಈ ಖಾತೆಗೂ ತ್ರಿಷಿಕಾ ಅವರಿಗೂ ಯಾವುದೇ ಸಂಬಂಧವಿಲ್ಲ. ಇದು ನಕಲಿ ಖಾತೆ. ಆದ್ದರಿಂದ ಇದನ್ನು ಯಾರೂ ಫಾಲೋ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಖಾತೆಗೆ ತ್ರಿಷಿಕಾ ಕುಮಾರಿ ಸಿಂಗ್ ಅವರ ಭಾವಚಿತ್ರವನ್ನೂ ಹಾಕಲಾಗಿದೆ.

ಈ ಮೊದಲು ತ್ರಿಶಿಕಾ ಹೆಸರಿನಲ್ಲಿ trishikhawadiyar246 ಎಂಬ ಹೆಸರಿನ ನಕಲಿ ಇನ್ಸ್ಟಾಗ್ರಾಂ ಖಾತೆ ಸೃಷ್ಟಿಯಾಗಿತ್ತು. ಆಗಲೂ "ಇನ್ಸ್ಟಾ ಗ್ರಾಮ್ ನಲ್ಲಿ ಪತ್ನಿ ತ್ರಿಷಿಕಾ ಯಾವುದೇ ಅಕೌಂಟ್ ಹೊಂದಿಲ್ಲ. ನಕಲಿ ಖಾತೆಯಲ್ಲಿರುವ ಕಾಮೆಂಟ್ಸ್ ಮತ್ತು ಅಕೌಂಟ್ ಗಳಿಗೆ ಜವಾಬ್ದಾರರಲ್ಲ" ಎಂದು ಯದುವೀರ್ ಹೇಳಿದ್ದರು.












Click it and Unblock the Notifications