ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಆತಂಕ ಸೃಷ್ಟಿಸಿದ ಆಟಿಕೆಯ ಗ್ರೆನೇಡ್!

|
Google Oneindia Kannada News

ಮೈಸೂರು, ಏಪ್ರಿಲ್ 3:ಮೈಸೂರಿನಲ್ಲಿ ಆಟಿಕೆಯ ಗ್ರೆನೇಡ್ ಪತ್ತೆಯಾಗಿದ್ದು, ಇದನ್ನು ನೋಡಿ ಸಾರ್ವಜನಿಕರು ಕೆಲ ಕಾಲ ಆತಂಕಕ್ಕೀಡಾದ ಪ್ರಸಂಗ ಬೆಳಕಿಗೆ ಬಂದಿದೆ. ನಗರದ ಹಿನಕಲ್ ಫ್ಲೈಓವರ್​​​ ಬಳಿ ಆಟಿಕೆಯ ಗ್ರೆನೇಡ್ ಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿಯೋರ್ವ ಫ್ಲೈಓವರ್ ಬಳಿ ಇದನ್ನು ಎಸೆದು ಹೋಗಿದ್ದಾನೆ. ಈ ಘಟನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೋಂಡಾ ಆಕ್ಟೀವಾದಲ್ಲಿ ಬಂದ ವ್ಯಕ್ತಿ ಸಣ್ಣ ನಿಂಬೆಹಣ್ಣು ಗಾತ್ರದ ವಸ್ತುವನ್ನು ಎಸೆದು ಹೋಗಿದ್ದಾನೆ. ಸುತ್ತಮುತ್ತಲ ನಾಗರೀಕರು ಅದನ್ನು ಗ್ರೆನೇಡ್ ಎಂದು ತಿಳಿದು ಆತಂಕದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರಿಂದಾಗಿ ನಗರದಲ್ಲಿ ಕೆಲ ಸಮಯ ಆತಂಕದ ವಾತಾವರಣ ಉಂಟಾಗಿತ್ತು.

10 ಲಕ್ಷ ಹ್ಯಾಂಡ್ ಗ್ರೆನೇಡ್ ಖರೀದಿಗೆ ರಕ್ಷಣಾ ಇಲಾಖೆ ಚಿಂತನೆ10 ಲಕ್ಷ ಹ್ಯಾಂಡ್ ಗ್ರೆನೇಡ್ ಖರೀದಿಗೆ ರಕ್ಷಣಾ ಇಲಾಖೆ ಚಿಂತನೆ

ತಕ್ಷಣ ಎಚ್ಚೆತ್ತ ವಿಜಯನಗರ ಠಾಣೆ ಪೊಲೀಸರು ಶ್ವಾನದಳ, ಬಾಂಬ್ ಸ್ಕ್ವಾಡ್ ಹಾಗೂ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದರು. ತದನಂತರ ಅದು ಅಸಲಿ ಗ್ರೆನೇಡ್ ಅಲ್ಲ, ಡಮ್ಮಿ ಪೀಸ್ ಎಂದು ತಿಳಿದು ಬಂದಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆಟಿ ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

Fake grenade found in Mysuru

 ಜಮ್ಮುನಲ್ಲಿ ಗ್ರೆನೇಡ್ ಎಸೆದವ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಯಾಸಿರ್ ಭಟ್ ಜಮ್ಮುನಲ್ಲಿ ಗ್ರೆನೇಡ್ ಎಸೆದವ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಯಾಸಿರ್ ಭಟ್

"ರಾಮ್ ಪ್ರಸಾದ್ ಎಂಬುವವರು ಮಧ್ಯಾಹ್ನ 2 ಗಂಟೆಗೆ ಡಮ್ಮಿ ಗ್ರೆನೇಡ್ ತಂದು ಕೊಟ್ಟಿದ್ದರು. ಆತ ಖುದ್ದು ಮಂಡಿ ಪೊಲೀಸ್ ಠಾಣೆಗೆ ಅದನ್ನ ತಂದುಕೊಟ್ಟಿದ್ದ. ಫ್ಲೈ ಓವರ್ ಮೇಲೆ ತೆರಳುವಾಗ ಸ್ಕೂಟರ್ ನಿಂದ ಬಿದ್ದ ವಸ್ತು ಅದು ಎಂದು ಠಾಣೆಗೆ ತಂದು ಕೊಟ್ಟಿದ್ದ. ಅದರ ಮೇಲೆ ಗ್ರೆನೇಡ್ ಅಂತ ಬರೆಯಲಾಗಿತ್ತು, ಅಲ್ಲದೇ ನಂಬರ್ ಸಹ ಬರೆದಿತ್ತು. ಅದು ನೋಡಲು ಗ್ರೆನೇಡ್ ಮಾದರಿಯಲ್ಲಿದ್ದರಿಂದ ಬಾಂಬ್ ಸ್ಕ್ವಾಡ್, ಶ್ವಾನದಳದಿಂದ ಪರಿಶೀಲನೆ ಮಾಡಿದೆವು. ಅದು ಡಮ್ಮಿ ಗ್ರೆನೇಡ್ ಅಂತ ಗೊತ್ತಾಗಿದೆ. ಕೀಚೈನ್ ಗಳಲ್ಲಿ ಬಳಸುವ ಗ್ರೆನೇಡ್ ಮಾದರಿ ಇದಾಗಿದೆ" ಎಂದು ಬಾಲಕೃಷ್ಣ ಅವರು ತಿಳಿಸಿದರು.

English summary
Fake grenade was found in Mysuru.Unknown person thrown this item near Hinkal Flyover in Mysuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X