ಕುಮಾರಸ್ವಾಮಿ ಟ್ವೀಟ್ ವಾರ್ ಗೆ ಈಶ್ವರಪ್ಪ ಮಾರುತ್ತರ

ಮೈಸೂರು, ಜನವರಿ 19: "ಕುಮಾರಸ್ವಾಮಿ ಸಿನಿಮಾ ನೋಡಿಕೊಂಡು ಇರುವುದು ಒಳ್ಳೆಯದ್ದು. ಅವರಿಗೆ ಅಧಿಕಾರದಿಂದ ಇಳಿದ ಮೇಲೆ ಉದ್ಯೋಗ ಏನಿದೆ" ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಡಿದ್ದಾರೆ ಸಚಿವ ಈಶ್ವರಪ್ಪ. ಇಬ್ಬರ ನಡುವೆ ಶುರುವಾಗಿದ್ದ ಟ್ವಿಟ್ಟರ್ ವಾರ್ ಗೆ ಈ ರೀತಿ ಮರು ಉತ್ತರ ನೀಡಿದ್ದಾರೆ ಈಶ್ವರಪ್ಪ.

ಮೈಸೂರಿನಲ್ಲಿ ಮಾತನಾಡಿದ ಅವರು, "ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಅವರಿಗೆ ಭಾಷೆ ಮೇಲೆ ಹಿಡಿತ ಇರಬೇಕು. ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲೆಬೆಲೆ ದೇಶಾದ್ಯಂತ ಜನ ಜಾಗೃತಿ ಮಾಡುತ್ತಿದ್ದಾರೆ. ಅಂಥವರ ವಿರುದ್ಧವೂ ಹಗುರವಾಗಿ ಮಾತನಾಡುವುದು ಒಳ್ಳೆಯದ್ದಲ್ಲ" ಎಂದು ಹೇಳಿದ್ದಾರೆ.

Eshwarappa Reaction To Kumaraswamy Tweets

ಇದೇ ಸಂದರ್ಭ ಎಸ್‌ಡಿಪಿಐ, ಪಿಎಫ್ ‌ಐ ಸಂಘಟನೆಗಳ ನಿಷೇಧ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ. "ಎಸ್‌ಡಿಪಿಐ ಹಾಗೂ ಪಿಎಫ್ ‌ಐ ಭಯೋತ್ಪಾದನಾ ಸಂಘಟನೆಗಳು. ಅವುಗಳ ಚಟುವಟಿಕೆ ಏನು ಎಂಬುದು ಮೈಸೂರು, ಶಿವಮೊಗ್ಗದವರಿಗೂ ಅನುಭವ ಆಗಿದೆ. ಕೇರಳದಿಂದ ಬಂದು ಪಾಕಿಸ್ತಾನಕ್ಕೆ ಜೈ ಎಂದು ಘೋಷಣೆ ಕೂಗಿದ್ದನ್ನು ನೋಡಿದ್ದೇವೆ. ಕೊಲೆ ಮಾಡಿದ ಪ್ರಕರಣಗಳೂ ನಮ್ಮ ಮುಂದಿವೆ. ಇವೆಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಎಸ್‌ಡಿಪಿಐ, ಪಿಎಫ್ ‌ಐ ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+