ಅರ್ಜುನ ಅಂಬಾರಿ ಹೊತ್ತಿದ್ದು ಎಂಟಲ್ಲ ಒಂಬತ್ತು ಬಾರಿ: ಅರ್ಜುನನ ಬಗ್ಗೆ ಕುತೂಹಲಕಾರಿ ಸಂಗತಿ
ಮೈಸೂರು, ಡಿಸೆಂಬರ್ 05: ಬಲಾಢ್ಯನಾಗಿ, ಮೈಸೂರು ದಸರಾ ಆಕರ್ಷಣೆಯಾಗಿ ಹುಲಿ, ಕಾಡಾನೆಗಳ ಕಾರ್ಯಾಚರಣೆಯಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದ ಸಾಕಾನೆ ಅರ್ಜುನನ ವೀರ ಮರಣದ ನಂತರ ಜನವಲಯದಲ್ಲಿ ಹೆಚ್ಚು, ಹೆಚ್ಚು ನೆನಪುಗಳನ್ನು ಬಿಟ್ಟು ಹೋಗುತ್ತಿದ್ದಾನೆ. ಆದರೆ ಜನ ಮಾತ್ರ ಅರ್ಜುನನ ಸಾವು ನ್ಯಾಯವೇ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ಅರ್ಜುನನ ಸಾವಿನ ಬಳಿಕ ಜನ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಂಜಾಗ್ರತೆ ವಹಿಸಿದ್ದರೆ ಅರ್ಜುನ ಸಾವನ್ನಪ್ಪುತ್ತಿರಲಿಲ್ಲ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು 64 ವರ್ಷದ ಅರ್ಜುನನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಂಡಿದ್ದೇ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗ ಕಾಲ ಮಿಂಚಿ ಹೋಗಿದೆ. ತನ್ನ ಬದುಕಿನ ಕೊನೆಯ ಕ್ಷಣಗಳಲ್ಲಿಯೂ ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಮೂಲಕ ಜನರಲ್ಲಿ ನೆನಪುಗಳನ್ನು ಹಸಿರಾಗಿಸಿ ಹೋಗಿದ್ದಾನೆ. ಆದರೆ ಇಂತಹದೊಂದು ದುರಂತ ಸಾವು ಮುಂದೆ ಯಾವ ಸಾಕಾನೆಗಳಿಗೂ ಬಾರದಿರಲಿ ಮತ್ತು ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ ಎಂದಷ್ಟೇ ನಾವು ಹೇಳಬಹುದಾಗಿದೆ.
ಎಂಟಲ್ಲ ಒಂಬತ್ತು ಬಾರಿ ಅಂಬಾರಿ ಹೊತ್ತಿದ್ದ
ಅರ್ಜುನ ದೃಢಕಾಯನಾಗಿದ್ದ, ತನ್ನ ಯೌವನದ ದಿನಗಳಲ್ಲಿ ಕಾಡಾನೆಗಳನ್ನು ಸದೆಬಡಿಯುವಲ್ಲಿ ನಿಸ್ಸೀಮನಾಗಿದ್ದ. ಆದರೆ ಒಬ್ಬ ಮಾವುತನ ಸಾವಿಗೆ ಈತ ಕಾರಣನಾಗಿದ್ದ ಎಂಬ ಕಪ್ಪು ಚುಕ್ಕಿಯೂ ಈತನ ಮೇಲಿದೆ. 2012ರಿಂದ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆಯಾಗಿ ಕಾರ್ಯ ಆರಂಭಿಸಿ 2019ರವರೆಗೆ ಅಂಬಾರಿ ಹೊತ್ತಿದ್ದಾನೆ. ಆದರೆ ಅದಕ್ಕೂ ಮುನ್ನ 90ರ ದಶಕದಲ್ಲಿಯೇ ಒಮ್ಮೆ ಯಶಸ್ವಿಯಾಗಿ ಅಂಬಾರಿ ಹೊತ್ತು ನಡೆದಿದ್ದ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.
ಇದನ್ನು ಪರಿಗಣಿಸಿದರೆ ಅರ್ಜುನ ಅಂಬಾರಿ ಹೊತ್ತಿದ್ದು ಒಂಬತ್ತು ಬಾರಿ. ಅದೊಂದು ಘಟನೆಯಿಂದಾಗಿ ಅರ್ಜುನನಿಗೆ ಅಂಬಾರಿ ಹೊರುವುದರಿಂದ ಹೊರಗಿಡಲಾಯಿತು. ಆ ಘಟನೆ ಯಾವುದು ಎಂಬುದನ್ನು ಹೇಳಲೇ ಬೇಕಾಗುತ್ತದೆ. ಹಲವು ವರ್ಷಗಳ ಹಿಂದೆ ಗಜಮಜ್ಜನಕ್ಕೆ ಕಾರಂಜಿ ಕೆರೆಗೆ ತೆರಳಿ ಅಲ್ಲಿ ಮಜ್ಜನ ಮುಗಿಸಿ ಕೆರೆಯಿಂದ ಮೇಲೆ ಹತ್ತುವಾಗ ಅರ್ಜುನನ ಮುಂದೆ ಹೋಗುತ್ತಿದ್ದ ಆನೆಯೊಂದರ ಕಾವಡಿ ಜಾರಿ ಕೆಳಗೆ ಬಿದ್ದನು. ಅದೇ ಸಂದರ್ಭ ನೀರಿನಿಂದ ಮೇಲೆ ಬಂದ ಅರ್ಜುನನ ಕಾಲಿಗೆ ಆತ ಆಕಸ್ಮಿಕವಾಗಿ ಸಿಕ್ಕಿ ಸಾವನ್ನಪ್ಪಿದ್ದನು. ಈ ದುರ್ಘಟನೆ ಆಕಸ್ಮಿಕವಾದರೂ ಅರ್ಜುನನಿಗೆ ಅವತ್ತು ಕಪ್ಪು ಚುಕ್ಕೆಯಾಯಿತು.

2012ರಿಂದ ಅಂಬಾರಿ ಹೊರಲು ಆರಂಭ
ಆ ನಂತರ ಅರ್ಜುನನಿಗೆ ಅಂಬಾರಿ ಹೊರುವ ಸಾಮರ್ಥ್ಯವಿದ್ದರೂ ಹಿಂದೇಟು ಹಾಕಲಾಯಿತು. ಹೀಗಾಗಿ ಬಲರಾಮ ಅಂಬಾರಿ ಹೊರಲಾರಂಭಿಸಿದನು. ಆದರೆ 2012ರ ವೇಳೆಗೆ ಬಲರಾಮನಿಗೂ ವಯಸ್ಸಾಗಿತ್ತು. ಆ ವೇಳೆಗೆ ಆತನ ಆರೋಗ್ಯ ಪರೀಕ್ಷೆ ಮಾಡಿದ ಆನೆ ತಜ್ಞ ಡಾ. ನಾಗರಾಜ್ ಅವರು ಬಲರಾಮನಿಗೆ ವಯಸ್ಸಾಗುತ್ತಿದ್ದು, ಆತನ ಸಾಮರ್ಥ್ಯ ಕುಂದುತ್ತಿದ್ದು, ಅಂಬಾರಿ ಹೊರಿಸುವುದು ಬೇಡ ಎಂದು ಪತ್ರ ಬರೆದಿದ್ದರು.
ಹೀಗಾಗಿ ಬಲರಾಮನಿಗೆ ಉತ್ತರಾಧಿಕಾರಿಯನ್ನು ಹುಡುಕಾಟ ನಡೆಸುವ ವೇಳೆ ಎಲ್ಲರಿಗೂ ಕಾಣಿಸಿದ್ದು ಬಲಾಢ್ಯನಾಗಿದ್ದ ಅರ್ಜುನ. ಅವತ್ತಿನ (2012) ದಿನಗಳಲ್ಲೇ ಅರ್ಜುನ ಬಲರಾಮನಿಗಿಂತಲೂ ಸಾವಿರ ಕೆಜಿ ಹೆಚ್ಚು ತೂಕವನ್ನು ಹೊಂದಿದ್ದನು. ತೂಕದಲ್ಲಿ ಆತ ಎಲ್ಲ ಆನೆಗಳನ್ನು ಮೀರಿಸಿ ಬಲಭೀಮನಾಗಿದ್ದನು. ಈತ 2010ರಲ್ಲಿ 4541, ಕೆಜಿ ತೂಕವಿದ್ದರೆ, 2011ರಲ್ಲಿ 5,055 ಕೆಜಿ ತೂಕವಿದ್ದನು. 2012ರ ವೇಳೆಗೆ ಬಾರಿ 5520,ಕೆಜಿ ತೂಕವಿದ್ದನು. ಹೀಗಾಗಿ ಆತನೇ ಸಮರ್ಥಶಾಲಿ ಎಂದು ಪರಿಗಣಿಸಲಾಯಿತು.
ಕಾರ್ಯಾಚರಣೆ ವೇಳೆಯೇ ವೀರಮರಣ
2012ರ ಮೈಸೂರು ದಸರಾದಲ್ಲಿ ಅಂಬಾರಿ ಹೊರಲು ಆರಂಭಿಸಿದ ಅರ್ಜುನ 2019ರವರೆಗೂ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದನು. ಹೆಚ್.ಡಿ.ಕೋಟೆಯ ಬಳ್ಳೆ ಶಿಬಿರದಲ್ಲಿದ್ದ ಅರ್ಜುನನ ಉಸ್ತುವಾರಿಯನ್ನು ಅವತ್ತು ಮಾವುತ ದೊಡ್ಡಮಾಸ್ತಿ ನೋಡಿಕೊಳ್ಳುತ್ತಿದ್ದರು. ಅವರ ಕಾಲಾವಧಿ ನಂತರ ಮಾವುತ ವಿನು ನೋಡಿಕೊಳ್ಳುತ್ತಿದ್ದರು. ಪುಂಡಾನೆಯಾಗಿದ್ದ ಅರ್ಜುನನನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.
ಅರ್ಜುನ ತನ್ನ ಸಹವರ್ತಿ ಅಭಿಮನ್ಯುವಿನೊಂದಿಗೆ ಸೇರಿ ಹಲವು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾನೆ. ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ಆನೆಗಳನ್ನು ಹಿಡಿಯಲು ಬಳಸಿರುವುದು ಶೌರ್ಯಕ್ಕೆ ಸಾಕ್ಷಿ. ಈ ಫೈಟರ್ ಎಂತಹ ಕಾಡುಪ್ರಾಣಿಯನ್ನಾದರೂ ಹುಡುಕಿ ಸದ್ದಡಗಿಸುವುದರಲ್ಲಿ ನಿಸ್ಸೀಮನಾಗಿದ್ದನು. ಕೊನೆಗೂ ಕಾರ್ಯಾಚರಣೆ ಮಾಡುವಾಗಲೇ ಸಾವನ್ನಪ್ಪಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications