ಮೈಸೂರಿನಲ್ಲಿ ಸುಂದರಾಂಗ ಶ್ವಾನಗಳ ಫ್ಯಾಷನ್ ಶೋ!

ಡಾಬರ್ ಮನ್, ಸೇಂಟ್ ಬರ್ನಾರ್ಡ್, ಗೋಲ್ಡನ್ ರಿ ಟ್ರಿವರ್, ಜರ್ಮನ್ ಶಫರ್ಡ್, ಡ್ಯಾಷ್ಹಂಡ್, ಮುಧೋಳ, ಪಗ್, ಮಿನಿಯೇಚರ್ ಪಿಂಚರ್, ಪಮೋರಿಯನ್, ಪಿಟ್ ಬಾಲ್ ಸೇರಿದಂತೆ ವಿವಿಧ ತಳಿ ಶ್ವಾನಗಳು ಗಮನ ಸೆಳೆದವು.

ಮೈಸೂರು, ಫೆಬ್ರವರಿ 6: ಪುಟ್ಟ ಬಾಯಗಲಿಸಿ ನಾಲಿಗೆ ಹೊರಚಾಚಿದ, ಹೆದರಿಕೆ ಹುಟ್ಟಿಸುವ ದೊಡ್ಡ ಬಾಯಿಯ, ಮೈತುಂಬಾ ಕೂದಲನ್ನು ಹೊಂದಿದ ವಿವಿಧ ಜಾತಿಯ ಒಂದಕ್ಕಿಂತ ಒಂದು ವಿಭಿನ್ನ ಶ್ವಾನಗಳು ಶ್ವಾನಪ್ರಿಯರನ್ನು ಗಮನ ಸೆಳೆದವು.

ಮೈಸೂರಿನ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಕೆನೈಲ್ ಕ್ಲಬ್ ಆಫ್ ಇಂಡಿಯಾ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಡಾಬರ್ ಮನ್, ಸೇಂಟ್ ಬರ್ನಾರ್ಡ್, ಗೋಲ್ಡನ್ ರಿ ಟ್ರಿವರ್, ಜರ್ಮನ್ ಶಫರ್ಡ್, ಡ್ಯಾಷ್ಹಂಡ್, ಮುಧೋಳ, ಪಗ್, ಮಿನಿಯೇಚರ್ ಪಿಂಚರ್, ಪಮೋರಿಯನ್, ಪಿಟ್ ಬಾಲ್ ಸೇರಿದಂತೆ ವಿವಿಧ ತಳಿ ಶ್ವಾನಗಳು ಗಮನ ಸೆಳೆದವು.[ಬೆಂಗಳೂರಲ್ಲಿ ಇನ್ಮುಂದೆ ನಾಯಿಗೂ ಲೈಸೆನ್ಸ್ ಬೇಕು!]

Dog show in Mysuru attracted people

ಮಂಡ್ಯ, ಮೈಸೂರು, ಮಡಿಕೇರಿ, ಚಾಮರಾಜನಗರಗಳಿಂದಲೂ ಶ್ವಾನಗಳನ್ನು ಪ್ರದರ್ಶನಕ್ಕೆ ಕರೆತರಲಾಗಿತ್ತು. ವಿಭಿನ್ನ ತಳಿಯ ಚಿತ್ರ, ವಿಚಿತ್ರವಾಗಿ ಬೊಗಳುವ, ಅರಚುವ, ಮೈಯೆಲ್ಲಾ ಬಂಗಾರದಂತೆ ಹೊಳೆಯುವ ಶ್ವಾನ ಪ್ರದರ್ಶನ ನಿರೀಕ್ಷೆಗೂ ಮೀರಿ ಸಾರ್ವಜನಿಕರ ಗಮನ ಸೆಳೆಯಿತು.

Dog show in Mysuru attracted people

ತಮ್ಮ ಮಾಲಿಕರ ಆದೇಶವನ್ನು ಪಾಲಿಸುತ್ತಾ, ಶಿಸ್ತಿನ ಸಿಪಾಯಿಯಂತೆ ಹೆಜ್ಜೆ ಹಾಕಿದವು. ಸಾರ್ವಜನಿಕರು ವಿವಿಧ ತಳಿ ಶ್ವಾನಗಳನ್ನು ಆಶ್ಚರ್ಯಚಕಿತರಾಗಿ ನೋಡಿ, ಆನಂದ ಪಟ್ಟರು. ಚಾಮರಾಜ ಕ್ಷೇತ್ರದ ಶಾಸಕ ವಾಸು ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಶ್ವಾನಪ್ರಿಯರಿಗೆ ವಿವಿಧ ತಳಿಯ ಶ್ವಾನಗಳನ್ನು ನೋಡುವುದಕ್ಕೆ ಅವಕಾಶ ಸಿಕ್ಕಂತಾಗುತ್ತಿದೆ ಎಂದು ಬಣ್ಣಿಸಿದರು.

Dog show in Mysuru attracted people

ಮಂಜು ಅವರು ಶ್ವಾನ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಮುಡಾ ಮಾಜಿ ಅಧ್ಯಕ್ಷ ನಾಗೇಂದ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಕೆನೈಲ್ ಕ್ಲಬ್ ಆಫ್ ಇಂಡಿಯಾ ಅಧ್ಯಕ್ಷ ಮಂಜು, ಮುಡಾ ಅಧ್ಯಕ್ಷ ಧ್ರುವಕುಮಾರ್ ಮತ್ತಿತರರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+