ಮೈಸೂರು: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾದ ಪಟ್ಟಿ ಹೀಗಿದೆ
ಮೈಸೂರು, ಅಕ್ಟೋಬರ್, 01: ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ನಡೆದಿದ್ದು, ಈ ವೇಳೆ ಯಾರೆಲ್ಲ ವಿಜೇತರಾಗಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಕ್ರೀಡೆಗಳಲ್ಲಿ ಪಾಲ್ಗೊಂಡು ದೇಶಕ್ಕೆ ಕೀರ್ತಿ ತರಬೇಕು. ಒಬ್ಬ ಒಳ್ಳೆ ಕ್ರೀಡಾಪಟುವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಗುರುತಿಸಿಕೊಳ್ಳುವ ಅವಕಾಶ ಇದೆ. ಪ್ರತಿಯೊಬ್ಬರೂ ಕೂಡ ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯದೊಂದಿಗೆ ಜೀವನ ನಡೆಸಿ ಎಂದರು.

ಈ ವೇಳೆ ಶಾಸಕ ತನ್ವೀರ್‌ಸೇಠ್, ಡಿ.ಸಿ.ಡಾ.ಕೆ.ವಿ.ರಾಜೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ್ ಇದ್ದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೈಸೂರು ತಾಲೂಕಿನ ಸೈಯದ್ ಮಥಿನ್, ಎಚ್.ಆರ್.ನವಮಿ ಕ್ರಮವಾಗಿ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ವೇಗದ ಓಟಗಾರರಾಗಿ ಹೊರ ಹೊಮ್ಮಿದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ 100 ಮೀ. ಓಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಮೈಸೂರು ತಾಲೂಕಿನ ಸೈಯದ್ ಮಥಿನ್ ಮೊದಲ ಸ್ಥಾನ ಪಡೆದರು. ಇವರನ್ನು ಹಿಂಬಾಲಿಸಿದ ಸಿ.ಸಿ.ಪೃಥ್ವಿಕ್ ಕೆಲವೇ ಸೆಕೆಂಡುಗಳ ಹಿನ್ನಡೆಯಿಂದ 2ನೇ ಸ್ಥಾನ ಪಡೆದರೆ ಸರಗೂರಿನ ಜಾಧವ್ 3 ನೇ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ಮಿಂಚಿನ ಓಟ ಪ್ರದರ್ಶಿಸಿದ ಎಚ್.ಆರ್.ನವಮಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡರು. ಅದೇ ರೀತಿ ನಂಜನಗೂಡು ತಾಲೂಕಿನ ಜೀವಿತಾ ದ್ವಿತೀಯ, ಹುಣಸೂರು ತಾಲೂಕಿನ ಎಚ್.ವಿ. ಅನುಶ್ರೀ ತೃತೀಯ ಸ್ಥಾನ ಪಡೆದರು.
ಪುರುಷರ ವಿಭಾಗದ ಫಲಿತಾಂಶದ ವಿವರ
1. 200 ಮೀಟರ್ ಓಟ: ದೀಪಕ್ ಜಾದವ್ (ಸರಗೂರು) ಪ್ರಥಮ, ಎಲ್. ಪವನ್(ಮೈಸೂರು)ದ್ವಿತೀಯ, ಹಿತೇಶ್
ಪೊನ್ನಪ್ಪ(ಮೈಸೂರು)ತೃತೀಯ.
2 400 ಮೀಟರ್ ಓಟ: ಗಣೇಶ್‌ಕುಮಾರ್(ಕೆ.ಆರ್. ನಗರ) ಪ್ರಥಮ, ಸಮರ್ಥ (ಕೆ.ಆರ್. ನಗರ) ದ್ವಿತೀಯ, ಚಿರಂಜಿವಿ ಗೌಡ (ಮೈಸೂರು)ತೃತೀಯ.
3. 800 ಮೀಟರ್ ಓಟ: ರಾಹುಲ್ ಚೌದರಿ (ಮೈಸೂರು) ಪ್ರಥಮ, ಚಿದಾನಂದ (ಪಿರಿಯಾಪಟ್ಟಣ) ದ್ವಿತೀಯ, ತರುಣ್ (ಹುಣಸೂರು) ತೃತೀಯ.
4. 1500 ಮೀಟರ್ ಓಟ: ರಾಹುಲ್ ಚೌದರಿ (ಮೈಸೂರು) ಪ್ರಥಮ, ಆರ್.ಕುಮಾರ್ ದ್ವಿತೀಯ, ನಿಶಾಂತ್ ಕುಮಾರ್ ತೃತೀಯ.
5. 5000 ಮೀಟರ್ ಓಟ: ರಘುವರುಣ್(ಸರಗೂರು) ಪ್ರಥಮ, ರವಿ ಕಿಶೋರ್ (ಮೈಸೂರು) ದ್ವಿತೀಯ, ರಾಕೇಶ್ (ಪಿರಿಯಾಪಟ್ಟಣ) ತೃತೀಯ.
6. ಉದ್ದ ಜಿಗಿತ : ಮನು (ಪ್ರಥಮ), ಅಶ್ವಥ್ ರೆಡ್ಡಿ (ದ್ವಿತೀಯ), ಪುನೀತ್(ತೃತೀಯ).
7. ಎತ್ತರ ಜಿಗಿತ : ಎಚ್.ಸಿ.ರಕ್ಷಿತ್ (ಮೈಸೂರು) ಪ್ರಥಮ, ಮನು (ಪಿರಿಯಾಪಟ್ಟಣ) ದ್ವಿತೀಯ, ಅಜಯ್ (ತಿ ನರಸೀಪುರ) ತೃತೀಯ.
8. ಗುಂಡು ಎಸೆತ : ಮನುಷ್ (ಮೈಸೂರು) ಪ್ರಥಮ, ಮೊಹಮ್ಮದ್ ಸಕ್ಲೇನ್ (ಮೈಸೂರು) ದ್ವಿತೀಯ, ಕಿರಣ್ (ಪಿರಿಯಾಪಟ್ಟಣ) ತೃತೀಯ.
9. ಜಾವಲಿನ್ ಥ್ರೋ: ಗೋಪಾಲ್ (ಎಚ್.ಡಿ. ಕೋಟೆ )ಪ್ರಥಮ, ಪೃಥ್ವಿಶ್ (ದ್ವಿತೀಯ), ನವೀನ್ (ತೃತೀಯ).
ಮಹಿಳೆಯರ ವಿಭಾಗದ ಫಲಿತಾಂಶದ ವಿವರ
1.200 ಮೀಟರ್ ಓಟ: ಎಚ್.ಆರ್. ನವಮಿ (ಮೈಸೂರು) ಪ್ರಥಮ, ಜೀವಿತಾ (ನಂಜನಗೂಡು) ದ್ವಿತೀಯ, ಅನಿಶ್ರೀ (ಹುಣಸೂರು) ತೃತೀಯ.
2. 400 ಮೀಟರ್ ಓಟ: ದೀಪಿಕಾ (ಮೈಸೂರು) ಪ್ರಥಮ, ನಯನರಾಜ್ (ನಂಜನಗೂಡು) ದ್ವಿತೀಯ, ಅನಿಶ್ರೀ (ಹುಣಸೂರು) ತೃತೀಯ.
3. 800 ಮೀಟರ್ ಓಟ: ರಾಧಿಕ ಗಂಗಪ್ಪ (ಮೈಸೂರು) ಪ್ರಥಮ, ಹೇಮಾ (ಮೈಸೂರು) ದ್ವಿತೀಯ, ಪ್ರಿಯಾಂಕಾ (ಹುಣಸೂರು) ತೃತೀಯ.
4. ಉದ್ದ ಜಿಗಿತ: ಹರ್ಷಿತಾ (ಹುಣಸೂರು) ಪ್ರಥಮ, ಅರ್ಪಿತಾ (ಕೆ.ಆರ್. ನಗರ) ದ್ವಿತೀಯ, ಜೀವಿತಾ (ನಂಜನಗೂಡು) ತೃತೀಯ.
5. ಎತ್ತರ ಜಿಗಿತ: ಹರ್ಷಿತಾ (ಹುಣಸೂರು) ಪ್ರಥಮ, ಅರ್ಪಿತಾ (ಕೆ.ಆರ್. ನಗರ) ದ್ವಿತೀಯ, ಸಾಹಿತ್ಯ (ಮೈಸೂರು) ತೃತೀಯ.
6. ಗುಂಡು ಎಸೆತ: ಜುದಿಥ (ಹುಣಸೂರು) ಪ್ರಥಮ, ಶೋಭಾ ನಟೇಶ್ (ಮೈಸೂರು) ದ್ವಿತೀಯ, ಯಶಸ್ವಿನಿ (ತಿ.ನರಸೀಪುರ) ತೃತೀಯ.
7. ಟ್ರಿಪಲ್ ಜಂಪ್: ಸ್ಪೂರ್ತಿ (ಹುಣಸೂರು) ಪ್ರಥಮ, ಅರ್ಪಿತಾ (ಕೆ.ಆರ್. ನಗರ) ದ್ವಿತೀಯ, ಪುಣ್ಯಶ್ರೀ ತೃತೀಯ.
8. ಜಾವಲನ್ ಥ್ರೋ: ವರ್ಷಿತಾ (ಹುಣಸೂರು) ಪ್ರಥಮ, ಚೈತ್ರಾ (ತಿ.ನರಸೀಪುರ ದ್ವಿತೀಯ, ಭಾಗ್ಯಲಕ್ಷ್ಮಿ (ತಿ.ನರಸೀಪುರ) ತೃತೀಯ.
9. ಡಿಸ್ಕಸ್ ಥ್ರೋ: ಸುಷ್ಮಾ (ಮೈಸೂರು) ಪ್ರಥಮ, ತೇಜ್ವಿನಿ (ಮೈಸೂರು) ದ್ವಿತೀಯ, ಶೋಭಾ (ಮೈಸೂರು) ತೃತೀಯ.












Click it and Unblock the Notifications