ಮೈಸೂರು ಲಾಡ್ಜ್ ನಲ್ಲಿ ಬೆಂಗಳೂರು ಮೂಲದ ಉದ್ಯಮಿ ಮೃತದೇಹ ಪತ್ತೆ
ಮೈಸೂರು, ಜನೆವರಿ 3: ಬೆಂಗಳೂರು ಮೂಲದ ಉದ್ಯಮಿಯೋರ್ವರು ಮೈಸೂರು ನಗರದ ಲಾಡ್ಜ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ಉದ್ಯಮಿಯನ್ನು ಉಮಾಶಂಕರ್ (45) ಎಂದು ಗುರುತಿಸಲಾಗಿದ್ದು, ಇವರ ಜೊತೆಯಲ್ಲಿ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದಾರೆ.
ಮೈಸೂರಿನ ಲಾಡ್ಜ್ ಒಂದರಲ್ಲಿ ಇನ್ಸುಲಿನ್ ಹಾಗೂ ಔಷಧಿ ಬಾಟಲ್ ಹಾಗೂ ಡೆತ್‌ನೋಟ್ ಪತ್ತೆಯಾಗಿದ್ದು, ಪತಿ-ಪತ್ನಿ ಇಬ್ಬರು ಸಹಿ ಮಾಡಿರುವ ಡೆತ್‌ನೋಟ್ ಪತ್ತೆಯಾಗಿದೆ. ಅತಿಯಾದ ಇನ್ಸುಲಿನ್‌ನಿಂದ್ ಉದ್ಯಮಿ ಉಮಾಶಂಕರ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಉಮಾಶಂಕರ್ ದಂಪತಿ ಸಾಕಷ್ಟು ಸಾಲ ಮಾಡಿದ್ದರು. ಸಾಲಕ್ಕಾಗಿ ಕೆಲವರು ಪೀಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇಬ್ಬರು ಡೆತ್ ನೋಟ್‌ನಲ್ಲಿ ಬರೆದು ಸಹಿ ಮಾಡಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ಪತ್ನಿ ಕವಿತಾಗಾಗಿ ಹುಡುಕಾಟ ನಡೆದಿದೆ. ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
Recommended Video
ಭಾರತದ ವಿಜ್ಞಾನಿಗಳು ಇಡೀ ಪ್ರಪಂಚಕ್ಕೇ ಮಾದರಿ | Modi | Oneindia Kannada












Click it and Unblock the Notifications