ಡಿಕೆಶಿ ವಿರುದ್ಧ ಹೇಳಿಕೆ; ಕ್ಷಮೆ ಕೇಳುವ ಮಾತೇ ಇಲ್ಲ ಎಂದ ಗೋವಿಂದ ಕಾರಜೋಳ

ಮೈಸೂರು, ಸೆಪ್ಟೆಂಬರ್ 3:"ಡಿಕೆಶಿ ವಿರುದ್ಧ ನೀಡಿದ ಹೇಳಿಕೆಗೆ ನಾನು ಕ್ಷಮೆ ಕೇಳುವ ಮಾತೇ ಇಲ್ಲ" ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಕಷ್ಟದಲ್ಲಿರುವ ವ್ಯಕ್ತಿಯನ್ನು ನೋಡಿ ಖುಷಿಪಡುವಷ್ಟು ಕೆಟ್ಟವನಲ್ಲ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ನೀಡಿಲ್ಲ. ಉಪ್ಪು ತಿಂದಿದ್ದರೆ ನೀರು ಕುಡಿಯಬೇಕಾಗುತ್ತದೆ ಎಂದು ಹೇಳಿದ್ದೇನೆ ಅಷ್ಟೆ. ಇದರಲ್ಲಿ ತಪ್ಪೇನಿದೆ...? ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ತಪ್ಪು ಮಾಡದೇ ಇದ್ದರೆ ಆತಂಕ ಪಡುವ ಅಗತ್ಯವೇ ಇಲ್ಲ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ಯಾವತ್ತೂ ನೀಡುವುದಿಲ್ಲ. ನಾನು ವಿವಾದ ಆಗುವಂತಹ ಯಾವುದೇ ಹೇಳಿಕೆ ನೀಡಿಲ್ಲ" ಎಂದಿದ್ದಾರೆ.

: DCM Govind Karjol clarifies Statement On D K Shivakumar at Mysuru

"ಡಿ.ಕೆ.ಶಿವಕುಮಾರ್ ನನ್ನ ಆತ್ಮೀಯ ಸ್ನೇಹಿತರು. ಅವರ ಬಗ್ಗೆ ಅಪಾರ ಗೌರವವಿದೆ. ಬೇರೊಬ್ಬರ ಕಷ್ಟ ನೋಡಿ ಖುಷಿಪಡುವ ಮನಸ್ಥಿತಿ ನನ್ನದಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಅಷ್ಟೆ. ಇಡಿ ಮತ್ತು ಐಟಿ ಸ್ವತಂತ್ರ ಸಂಸ್ಥೆಗಳು. ಈ ಮಾತನ್ನೇ ನಾನು ಡಿಕೆಶಿಯವರ ವಿಚಾರದಲ್ಲಿ ಹೇಳಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ" ಎಂದರು.

: DCM Govind Karjol clarifies Statement On D K Shivakumar at Mysuru

"ಕೊಯ್ನಾ ನದಿಯಿಂದ ಹೊರಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. ನೆರೆ ಪೀಡಿತ ಪ್ರದೇಶಗಳ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೋದಿ ಬರುವ ದಿನಾಂಕ ನಿಗದಿಯಾಗಿದ್ದು, ಅವರ ಕಾರ್ಯಕ್ರಮದ ಮಾಹಿತಿ ನನಗೆ ಇಲ್ಲ" ಎಂದು ಹೇಳಿದರು.

"ಕೇಂದ್ರದ ನಿಯಮಾನುಸಾರ ಪರಿಹಾರ ಕೊಟ್ಟಿದ್ದೇವೆ. ಸದ್ಯಕ್ಕೆ ಅದನ್ನು ಮೀರಿ ಹಣ ನೀಡಲು ಸಾಧ್ಯವಿಲ್ಲ. ಶೇಕಡಾ 90ರಷ್ಟು ನಿರಾಶ್ರಿತರಿಗೆ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ತಲುಪಿದೆ. ಉಳಿದ ಶೇ.10ರಷ್ಟು ಜನರಿಗೆ ಆಧಾರ್ ಕಾರ್ಡ್‌ನಿಂದ ಬ್ಯಾಂಕರ್‌ಗಳಿಂದ ಸಮಸ್ಯೆ ಆಗಿದೆ. ಈ ಸಮಸ್ಯೆಗೆ ಚೆಕ್ ಮೂಲಕ ಹಣ ನೀಡಲು ಸೂಚನೆ ನೀಡಿದ್ದೇವೆ. ಎಲ್ಲಾ ಸಮಸ್ಯೆಯನ್ನ ಶೀಘ್ರದಲ್ಲೇ ಪರಿಹರಿಸುತ್ತೇವೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+