• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರಾ ಆಹಾರ ಮೇಳ: ರುಚಿಕಟ್ಟಾದ ಬಗೆ ಬಗೆಯ ಖಾದ್ಯ ತಿನ್ನಲು ರೆಡಿಯಾಗಿ...

|

ಮೈಸೂರು, ಸೆಪ್ಟೆಂಬರ್.26 : ದಸರೆ ಎಂದರೆ ಮತ್ತೊಂದು ಆಕರ್ಷಣೆ ಆಹಾರ ಮೇಳ. ಇದೇ ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿರುವ ದಸರಾ ಆಹಾರ ಮೇಳದಲ್ಲಿ ಈ ಬಾರಿ ಹೊಸ ಟಚ್ ನೀಡಲು ದಸರಾ ಆಹಾರ ಸಮಿತಿ ಸಜ್ಜಾಗಿದೆ.

ಕಳೆದ ವರ್ಷದಂತೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಮತ್ತು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಸಮೀಪದ ಮುಡಾ ಮೈದಾನದಲ್ಲಿ ಆಹಾರ ಮೇಳ ಆಯೋಜಿಸಲಾಗಿದೆ. ಬಾಯಲ್ಲಿ ನೀರೂರಿಸುವ ಆಹಾರ ಮೇಳದಲ್ಲಿ ಈ ಬಾರಿ ಜನರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಖಾದ್ಯಗಳನ್ನು ಪರಿಚಯಿಸಲು ಜಿಲ್ಲಾಡಳಿತ ಸಹ ಸಿದ್ಧತೆ ಮಾಡಿಕೊಳ್ಳಲಾಗಿದೆ.

ದಸರಾ ಆಹಾರ ಮೇಳದಲ್ಲಿ ವಿದೇಶಿ ತಿನಿಸುಗಳನ್ನೂ ಸವಿಯಲು ಸಿದ್ಧರಾಗಿ

ಪ್ರತಿವರ್ಷದಂತೆ ಈ ವರುಷವೂ ಸಹ ಆಹಾರ ಮೇಳದ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೊಂಬಾಟ್ ಭೋಜನ ಕಾರ್ಯಕ್ರಮ ಖ್ಯಾತಿಯ ಸಿಹಿ ಕಹಿ ಚಂದ್ರು, ಭಾನುವಾರದ ಬಾಡೂಟ ಖ್ಯಾತಿಯ ರಾಜೇಶ್ ಗೌಡ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಭಾಗವಹಿಸಲಿದ್ದಾರೆ.

Dasara Food Committee has come up with a new touch at Food Festival

ಹಾಗೆಯೇ ಫುಡ್ ಕ್ರಾಫ್ಟ್ ಸಂಸ್ಥೆ, ಸಿಎಫ್ ಟಿಆರ್ ಐ, ಮೈಮುಲ್, ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ವಿವಿಧ ಇಲಾಖೆಗಳಿಂದ ಅಡುಗೆ ತಯಾರಿಕೆಯ ನೇರ ಪ್ರಾತ್ಯಕ್ಷಿಕೆಯನ್ನು ನಡೆಸಲಾಗುವುದು.
ಪ್ರತಿದಿನ ಸಂಜೆ ಸಾಂಸ್ಕೃತಿಕ ಕಲಾ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಹಿಂದೆಂದಿಗಿಂತಲೂ ರಂಗೇರಲಿದೆ ಯುವ ದಸರಾ: ಯಾರೆಲ್ಲಾ ಬರ್ತಾರೆ ಗೊತ್ತಾ?

ಅಡುಗೆ ತಯಾರಿಸುವ ಮತ್ತು ತಿನ್ನುವ ಸ್ಪರ್ಧೆಗಳನ್ನು ನಡೆಸಲಾಗುವುದು. ಈ ಬಾರಿ ಸಿರಿ ಧಾನ್ಯಗಳ ಬಗ್ಗೆ ಮಾಹಿತಿಯನ್ನು ನೀಡಲು ಡಾ. ಖಾದರ್ ಅವರನ್ನು ಕರೆಸಲಾಗಿದೆ. ಅಂತೆಯೇ ಆಹಾರ ಪದಾರ್ಥಗಳ ಬಗ್ಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಹೇಳಿದರು.

ದಸರಾದಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಸಿದ್ರೆ ದಂಡ ಹಾಕ್ತಾರೆ!

ಪ್ರತಿವರುಷದಂತೆ ಈ ವರುಷವೂ ಸಹ ಅತ್ತೆ - ಸೊಸೆ, ಯುವಕರು, ಹಿರಿಯ ನಾಯಕರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ತಿನ್ನುವ ಸ್ಫರ್ಧೆ ಹಾಗೂ ಅಡುಗೆ ತಯಾರಿ ಮಾಡುವ ಸ್ಫರ್ಧೆಯನ್ನು ಸಹ ಆಯೋಜಿಸಿದ್ದು, ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಪಡಿಸಲಾಗುವುದು ಎಂದರು.

ಇನ್ನಷ್ಟು ಮೈಸೂರು ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dasara another attraction is food festival. Dasara Food Committee has come up with a new touch at Dasara Food Festival from October 10 to 19. Read this article to know what it is?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more