ಸಂಸದ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆ ನೀಡದಂತೆ ಲಕ್ಷ್ಮಣ್‌ಗೆ ಕೋರ್ಟ್ ಸೂಚನೆ
ಮೈಸೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಯಾವುದೇ ರೀತಿಯ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡದಂತೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರಿಗೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ದೂರಿನ ಸಂಬಂಧ 13ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಲಕ್ಷ್ಮಣ್ ಅವರಿಗೆ ನ್ಯಾಯಾಲಯ ಸಮನ್ಸ್ ಕೂಡ ಜಾರಿಗೊಳಿಸಿದೆ. ಪತ್ರಿಕೆ ಹಾಗೂ ಯಾವುದೇ ಟಿವಿ ಮಾಧ್ಯಮಕ್ಕೆ ಹೇಳಿಕೆ ನೀಡುವಂತಿಲ್ಲ. ಸ್ಥಳೀಯ ಕೇಬಲ್ ಚಾನೆಲ್, ರೆಡಿಯೋ, ಸಾಮಾಜಿಕ ಮಾಧ್ಯಮ ಯಾವುದರಲ್ಲೂ ಯಾವುದೇ ಸ್ವರೂಪದ ಹೇಳಿಕೆ ನೀಡುವಂತಿಲ್ಲ ಎಂದು ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸಂಸದ ಪ್ರತಾಪಸಿಂಹ ಯಾವುದೇ ವಿಚಾರದಲ್ಲಿ ಹೇಳಿಕೆ ನೀಡಿದರೂ ಎಂ.ಲಕ್ಷ್ಮಣ್ ಪತ್ರಿಕಾಗೋಷ್ಠಿ ನಡೆಸಿ ಅವರ ಹೇಳಿಕೆಗಳ ವಿರುದ್ಧ ಹೇಳಿಕೆ ನೀಡುತ್ತಿದ್ದರೂ, ಹೀಗಾಗಿ ಪ್ರತಾಪ್ ಸಿಂಹ ಕೋರ್ಟ್ ಮೊರೆ ಹೋಗಿದ್ದರು.
"ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಡುತ್ತಿದ್ದ ಪತ್ರಿಕಾಗೋಷ್ಠಿಗಳು ಬಹುತೇಕ ಆಧಾರಹಿತವಾಗಿದ್ದ ಕಾರಣ ಎಲ್ಲವನ್ನೂ ನ್ಯಾಯಾಲಯ ಮುಕ್ತವಾಗಿ ವಾದವನ್ನು ಆಲಿಸಿ ಈ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆಯನ್ನು ಲಕ್ಷ್ಮಣ್ ಉಲ್ಲಂಘಿಸಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ" ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.












Click it and Unblock the Notifications