ನಂಜನಗೂಡಿನಲ್ಲಿ ಬಿಜೆಪಿ ಬಲ ಪ್ರದರ್ಶನದ ಮುಂದೆ ಕಾಂಗ್ರೆಸ್ ಥಂಡಾ!

ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿಯ ರಾಜ್ಯ-ಕೇಂದ್ರ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕೇಸರಿ ಪಕ್ಷಕ್ಕೆ ಹೋಲಿಸಿದರೆ ಕಾಂಗ್ರೆಸ್ ಪೂರ್ಣ ಪ್ರಮಾಣದ ಪ್ರಚಾರದಲ್ಲಿ ತೊಡಗಿಕೊಂಡಂತೆ ಕಾಣುತ್ತಿಲ್ಲ

ನಂಜನಗೂಡು, ಏಪ್ರಿಲ್ 3: ನಂಜನಗೂಡು ಉಪಚುನಾವಣೆಯ ಮತದಾನಕ್ಕೆ ದಿನಗಳು ಹತ್ತಿರ ಬರುತ್ತಿದ್ದಂತೆ ಚುನಾವಣೆ ಕಣ ಕಾವೇರುತ್ತಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯ ನಾಯಕ ಶ್ರೀನಿವಾಸಪ್ರಸಾದ್ ಅವರು ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದು, ಹಲವು ತಂತ್ರಗಳನ್ನು ಬಳಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಏಪ್ರಿಲ್ 9ರಂದು ನಡೆಯಲಿರುವ ನಂಜನಗೂಡು ವಿಧಾನಸಭಾ (ಮೀಸಲು) ಕ್ಷೇತ್ರದ ಉಪ ಚುನಾವಣೆ ದಿನಗಣನೆ ಆರಂಭವಾಗಿರುವುದರಿಂದ ಕಾಂಗ್ರೆಸ್‍ಗೆ ತೀವ್ರ ಪೈಪೋಟಿ ನೀಡಲು ಬಿಜೆಪಿ ಸಿದ್ಧವಾಗಿದ್ದು, ಒಂದಷ್ಟು ಕಾರ್ಯಕರ್ತರನ್ನು ಕರೆತಂದು ನಂಜನಗೂಡಿನಲ್ಲಿ ಬೃಹತ್ ಮೆರವಣಿಗೆ ನಡೆಸಿ, ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಆ ಮೂಲಕ ಕಾಂಗ್ರೆಸ್ ನಲ್ಲಿ ನಡುಕ ಹುಟ್ಟಿಸಿದೆ.[ಉಪ ಚುನಾವಣೆ ಗೆಲ್ಲಲು ಪ್ರಯತ್ನ ಸಾಲದು ಅಮಿತ್ ಶಾ ಚಾಟಿ]

BJP

ಒಂದೆಡೆ ಕಾಂಗ್ರೆಸ್ ಕೂಡ ಸಿಎಂ ಸೇರಿದಂತೆ ಸಚಿವ ಸಂಪುಟದ ಸಚಿವರು, ಕೇಂದ್ರದ ನಾಯಕರನ್ನು ಕರೆತಂದು ರೋಡ್ ಶೋ ನಡೆಸಿದೆ. ಆದರೂ ಬಿಜೆಪಿ ತನ್ನೆಲ್ಲ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಕರೆತಂದು ಇದೀಗ ಮೆರವಣಿಗೆ ನಡೆಸಿ ಕಾಂಗ್ರೆಸ್‍ಗೆ ಸಡ್ಡು ಹೊಡೆದಿದೆ.

ಈಗಾಗಲೇ ಇಲ್ಲಿನ ಚುನಾವಣೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ, ಶ್ರೀನಿವಾಸಪ್ರಸಾದ್ ಮತ್ತು ಸಿದ್ದರಾಮಯ್ಯ ಅವರ ನಡುವೆ ನಡೆಯುವ ರಾಜಕೀಯ ಯುದ್ಧವಾಗಿ ಪರಿಗಣಿಸಲಾಗಿದೆ. ಹೀಗಾಗಿ ಎರಡೂ ಪಕ್ಷದ ನಾಯಕರು ನಂಜನಗೂಡು ಕ್ಷೇತ್ರದತ್ತ ಹೆಚ್ಚಿನ ನಿಗಾ ವಹಿಸಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ಕ್ಷೇತ್ರ ಗಮನಸೆಳೆಯುತ್ತಿದೆ.[ಜೆಡಿಎಸ್ ಮುಖಂಡರ ಮನೆಗೆ ಸಿದ್ದರಾಮಯ್ಯ ಭೇಟಿನೀಡಿದ್ದೇಕೆ?]

BJP

ಸದ್ಯದ ಮಟ್ಟಿಗೆ ಬಿಜೆಪಿಯ ಎಲ್ಲ ನಾಯಕರು ಇಲ್ಲಿ ಮತ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಇದು ಬಿಜೆಪಿಗೆ ಧನಾತ್ಮಕವಾಗಿದೆ. ಈಗಾಗಲೇ ನಡೆಸಿದ ಶಕ್ತಿಪ್ರದರ್ಶನದಲ್ಲಿ ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಪಾಲ್ಗೊಂಡಿದ್ದಾರೆ.

ಇವರ ಜತೆಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಾಘವೇಂದ್ರ, ಮಾಜಿ ಸಚಿವರಾದ ವಿ.ಸೋಮಣ್ಣ, ಸುರೇಶ್‍ಕುಮಾರ್, ಎಸ್.ಎ, ರಾಮದಾಸ್, ವಿಜಯಶಂಕರ್, ಬಿ.ಜೆ.ಪುಟ್ಟಸ್ವಾಮಿ, ರಾಮಚಂದ್ರೇಗೌಡ, ಸಿ.ಎಂ.ಉದಾಸಿ, ಕುಮಾರ ಬಂಗಾರಪ್ಪ, ಸಂಸದ ಪ್ರತಾಪ ಸಿಂಹ, ಕಾಗಲವಾಡಿ ಶಿವಣ್ಣ ಭಾಗವಹಿಸಿದ್ದಾರೆ.[ರಮ್ಯಾ ಕಾಂಗ್ರೆಸ್ ಬಿಡ್ತಾರಾ? ಅವರ ತಾಯಿ ಉತ್ತರ ಹೀಗಿದೆ]

BJP

ಪಟ್ಟಿ ಇಷ್ಟಕ್ಕೇ ನಿಲ್ಲುವುದಿಲ್ಲ. ಚಲನಚಿತ್ರ ನಟಿಯರಾದ ಶ್ರುತಿ, ತಾರಾ ಅನುರಾಧ, ಶಾಸಕರಾದ ಸಿ.ರಮೇಶ್, ವೀರಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಶಿವಣ್ಣ, ಮುಡಾ ಮಾಜಿ ಅಧ್ಯಕ್ಷ ಕೆ.ಆರ್, ಮೋಹನ್‍ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರ ದೊಡ್ಡ ದಂಡೇ ಭಾಗವಹಿಸಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದಿದ್ದಾರೆ. ಇದರಿಂದ ಕಾಂಗ್ರೆಸ್‍ಗೆ ಆತಂಕ ತಂದಿದ್ದಂತೂ ನಿಜ. ಹೀಗಾಗಿ ಕಾಂಗ್ರೆಸ್ ಕೂಡ ಇದಕ್ಕೆ ಪ್ರತ್ಯುತ್ತರ ನೀಡುವ ಸಾಧ್ಯತೆ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+