ಸ್ವಗ್ರಾಮದಲ್ಲೇ ಯತೀಂದ್ರ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಿದ ಕೈ ಕಾರ್ಯಕರ್ತರು
ಮೈಸೂರು, ನವೆಂಬರ್. 27: ಟಿ.ನರಸೀಪುರದಲ್ಲಿ ಕಾಂಗ್ರೆಸ್ ಸೇರ್ಪಡೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರೇ ಮುತ್ತಿಗೆ ಹಾಕಿದ ಘಟನೆ ಟಿ.ನರಸೀಪುರದ ಕಿರಸಗೂರು ಗ್ರಾಮದ ಬಳಿ ನಡೆದಿದೆ.
ಕಿರಸಗೂರು ಹಾಗೂ ಹುಣಸೂರು ಎರಡೂ ಗ್ರಾಮದಲ್ಲಿ ಒಂದೇ ದಿನ ಸನ್ಮಾನ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದರು. ಕಿರಸಗೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸೇರ್ಪಡೆ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಆಗಮಿಸಿದ್ದರು.
ಇದಾದ ಬಳಿಕ ಹುಣಸೂರು ಕಾರ್ಯಕ್ರಮಕ್ಕೆ ತೆರಳದೆ ವಾಪಸ್ ಆಗುತ್ತಿದ್ದರು. ಹೀಗಾಗಿ ಕಿರಸಗೂರು ಗ್ರಾಮದ ಬಳಿ ಹುಣಸೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿದ್ದಾರೆ.

ಕಾರಿಗೆ ಅಡ್ಡ ಹಾಕಿದ ಹುಣಸೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಮನವಿಗೆ ಡಾ.ಯತೀಂದ್ರ ಅವರು ಸ್ಪಂದಿಸದೆ ಕಾರಿನಿಂದ ಇಳಿಯದೇ ಹಾಗೆ ಹಿಂದಿರುಗಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಹುಣಸೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications