GST ಗೊಂದಲ ಅಲ್ಪಕಾಲಿಕ : ಸುರೇಶ್ ಕುಮಾರ್
ಮೈಸೂರು, ಜುಲೈ 7: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಕುರಿತು ಜನರಿಗಿರುವ ಗೊಂದಲ ಕೇವಲ ಅಲ್ಪಕಾಲಿಕ. ಆರಂಭದಲ್ಲಿ ಎಲ್ಲವೂ ಗೊಂದಲಮಯ, ನಂತರ ಅದೇ ಯಶಸ್ಸಿನ ಮಾಗ೯ ತೋರಿಸುತ್ತದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಜಿಎಸ್ ಟಿಯನ್ನು ಸಮಥಿ೯ಸಿಕೊಂಡರು.
ನಗರದ ಪಂ.ದೀನ ದಯಾಳ್ ಕಾರ್ಯಯೋಜನೆಯ ವಿಸ್ತಾರಕರ ಮಂಡಲದ ಕಾರ್ಯಕರ್ತರ ಕಾರ್ಯಾಗಾರಕ್ಕೆ ಜುಲೈ 6 ರಂದು ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆದ ಜಿಎಸ್ ಟಿಯನ್ನು ಎಲ್ಲ ರಾಜ್ಯ ಸರ್ಕಾರಗಳೂ ಸಂಪೂರ್ಣವಾಗಿ ಸ್ವೀಕರಿಸಿದೆ. ಕಾಯ್ದೆ ಜಾರಿಯಾಗಿರುವ ಪ್ರಾರಂಭದಲ್ಲಿ ಕೆಲವು ತೋಡಕುಗಳು ಆಗುವುದು ಸಹಜವೆಂದರು.

ಮುಂದಿನ ದಿನಗಳಲ್ಲಿ ವರ್ತಕರಿಗೆ, ಗ್ರಾಹಕರಿಗೆ ಯಾವುದೇ ತೊಂದರೆ ಆಗದೆ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. ಎಲ್ಲರೂ ಇದನ್ನು ಸರಿಯಾಗಿ ಬಳಸಿದರೆ ದುರ್ಬಳಕೆ ಮಾಡುವ ಸಾಧ್ಯತೆಗಳು ಕಡಿಮೆ ಆಗಲಿದೆ. ಎಲ್ಲ ರಾಜ್ಯ ಸರ್ಕಾರಗಳು ವ್ಯಾಪಕವಾಗಿ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.












Click it and Unblock the Notifications