ಶಿವಲಿಂಗಕ್ಕೆ ಬಿಜೆಪಿ ಶಾಲು ಹೊದಿಸಿ ಪೂಜೆ : ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು

Recommended Video

      ಪ್ರತಾಪ್ ಸಿಂಹ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಸಲುವಾಗಿ ದೂರು ದಾಖಲು

      ಮೈಸೂರು, ಮಾರ್ಚ್ 29 : ಚುನಾವಣಾ ಪ್ರಚಾರದ ವೇಳೆ ಸಂಸದ ಪ್ರತಾಪ್ ಸಿಂಹ ಅವರು ದೇವರ ವಿಗ್ರಹಕ್ಕೆ ಬಿಜೆಪಿ ಶಾಲು ಹೊದಿಸಿದ್ದಾರೆ. ಹಾಗಾಗಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಮೈಸೂರು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

      ದೇವರ ಮೇಲೆ ಬಿಜೆಪಿ ಶಾಲು ಹಾಕಿ ಪೂಜೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೈಸೂರಿನ ಸಿದ್ದಲಿಂಗಪುರದಲ್ಲಿ ಈ ಘಟನೆ ನಡೆದಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಸಿದ್ದಲಿಂಗಪುರದ ಚಂದ್ರಮೌಳೇಶ್ವರ ಸ್ವಾಮಿ ದೇವರ ಮೇಲೆ ಶಾಲು ಹಾಕಿ ಪ್ರತಾಪ್ ಸಿಂಹ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಐದು ವರ್ಷದ ಸಾಧನೆ ಕೈಪಿಡಿ ದೇವರ ಮುಂದಿಟ್ಟು ಪೂಜೆ ಮಾಡಿಸಿದ್ದಾರೆ.

      code of conduct violation complaint against MP Pratap simha in Mysuru

      ಶಿವಲಿಂಗದ ನಾಗರ ಹೆಡೆಗೆ ಬಿಜೆಪಿ ಶಾಲು ಧಾರಣೆ ಮಾಡಿಸಿ, ಶಿವಲಿಂಗದ ಮೇಲೆ ಸಂಸದರ ಸಾಧನೆ ಕೈಪಿಡಿ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು, ಪ್ರತಾಪ್ ಸಿಂಹ ಪ್ರಚಾರದ ವೇಳೆ ಧಾರ್ಮಿಕ ಭಾವನೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

      code of conduct violation complaint against MP Pratap simha in Mysuru

      ಸಂಸದ ಪ್ರತಾಪ್ ಸಿಂಹ ಅವರು ದೇವಸ್ಥಾನದಲ್ಲೂ ರಾಜಕೀಯ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+